Avalakki upkari recipe in Kannada | ಅವಲಕ್ಕಿ ಉಪ್ಕರಿ ಮಾಡುವ ವಿಧಾನ
ಅವಲಕ್ಕಿ ಉಪ್ಕರಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಕಪ್ ತೆಳು ಅವಲಕ್ಕಿ
- 2 ಟೇಬಲ್ ಚಮಚ ಕಡಲೇಕಾಯಿ ಅಥವಾ ಶೇಂಗಾ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಉದ್ದಿನ ಬೇಳೆ
- 1/2 ಟೀಸ್ಪೂನ್ ಕಡಲೆಬೇಳೆ (ಬೇಕಾದಲ್ಲಿ)
- 1 - 2 ಹಸಿರು ಮೆಣಸಿನಕಾಯಿ
- 4 - 5 ಕರಿಬೇವಿನ ಎಲೆ
- 1/2 ಕಪ್ ತೆಂಗಿನ ತುರಿ
- 2 ಟೀಸ್ಪೂನ್ ಸಕ್ಕರೆ
- ಉಪ್ಪು ರುಚಿಗೆ ತಕ್ಕಷ್ಟು
- 4 ಟೀಸ್ಪೂನ್ ಅಡುಗೆ ಎಣ್ಣೆ
- 2 ಟೇಬಲ್ ಚಮಚ ನೀರು ಅಥವಾ ಹಾಲು (ಬೇಕಾದಲ್ಲಿ)
ಅವಲಕ್ಕಿ ಉಪ್ಕರಿ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಕಡಲೇಕಾಯಿಯನ್ನು ಹುರಿಯಿರಿ.
- ನಂತರ ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆಯ ಒಗ್ಗರಣೆ ಮಾಡಿ.
- ಅದಕ್ಕೆ ಸೀಳಿದ ಹಸಿರುಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ. ಸ್ಟವ್ ಆಫ್ ಮಾಡಿ. ಬಿಸಿ ಆರುವವರೆಗೆ ಪಕ್ಕಕ್ಕಿಡಿ.
- ಬಿಸಿ ಆರಿದ ಮೇಲೆ ತೆಂಗಿನ ತುರಿ,ಸಕ್ಕರೆ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ.
- ನಂತರ ಅದಕ್ಕೆ ಅವಲಕ್ಕಿಯನ್ನು ಹಾಕಿ ಕಲಸಿದರೆ ಅವಲಕ್ಕಿ ಉಪ್ಕರಿ ಸವಿಯಲು ಸಿದ್ಧ.
- ಬೇಕಾದಲ್ಲಿ 2 ಟೇಬಲ್ ಚಮಚ ಹಾಲು ಅಥವಾ ನೀರು ಚಿಮುಕಿಸಿ ಕಲಸಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ