Mosaru kodu bale recipe in Kannada | ಮೊಸರು ಕೋಡುಬಳೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಅಕ್ಕಿ ಹಿಟ್ಟು
- 1/2 ಕಪ್ ಮೊಸರು (ಸ್ವಲ್ಪ ಹುಳಿ ಇರಲಿ)
- 1/2 ಕಪ್ ನೀರು
- 1 - 2 ಹಸಿರು ಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು
- 1 ಟೀಸ್ಪೂನ್ ಜೀರಿಗೆ
- 2 ಟೀಸ್ಪೂನ್ ಹೆಸರುಬೇಳೆ
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1 ಟೇಬಲ್ ಚಮಚ ಹೆಚ್ಚಿದ ಕರಿಬೇವು
- ಒಂದು ದೊಡ್ಡ ಚಿಟಿಕೆ ಇಂಗು
- ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು
- ಎಣ್ಣೆ ಕೋಡುಬಳೆ ಕಾಯಿಸಲು
ಮೊಸರು ಕೋಡುಬಳೆ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಮೊಸರು, ನೀರು, ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಜೀರಿಗೆ, ಹೆಸರುಬೇಳೆ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಹೆಚ್ಚಿದ ಕರಿಬೇವು, ಇಂಗು, ಉಪ್ಪು ಮತ್ತು ಒಂದು ಚಮಚ ಎಣ್ಣೆ ತೆಗೆದುಕೊಳ್ಳಿ.
- ಸ್ಟವ್ ಮೇಲಿಟ್ಟು ಒಂದು ನಿಮಿಷ ಕುದಿಸಿ.
- ನಂತರ ಅದಕ್ಕೆ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ.
- ಬಿಸಿ ಆರಿದ ಮೇಲೆ ಹಿಟ್ಟನ್ನು ಕೈಯಿಂದ ಚೆನ್ನಾಗಿ ನಾದಿ.
- ಈಗ ನೆಲ್ಲಿಕಾಯಿ ಗಾತ್ರದ ಹಿಟ್ಟು ತೆಗೆದು ಕೊಂಡು, ಕೋಡುಬಳೆಗಳನ್ನು ಮಾಡಿ.
- ಎಣ್ಣೆ ಬಿಸಿ ಮಾಡಿ ಕೋಡುಬಳೆಗಳನ್ನು ಮಧ್ಯಮ ಉರಿಯಲ್ಲಿ ಕಾಯಿಸಿ. ಈ ಕೋಡುಬಳೆ ಕೆಂಪಾಗಬಾರದು ಮತ್ತು ಗರಿಗರಿ ಇರುವುದಿಲ್ಲ. ಹಾಗಾಗಿ ಸ್ವಲ್ಪ ಹೊಂಬಣ್ಣ ಬಂಡ ಕೂಡಲೇ ತೆಗೆಯಿರಿ. ಬಿಸಿ ಚಹಾದೊಂದಿಗೆ ಅಥವಾ ಬೆಳಗ್ಗಿನ ತಿಂಡಿಯೊಂದಿಗೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ