Ragi malt recipe in Kannada | ರಾಗಿ ಮಾಲ್ಟ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 3 ಟೇಬಲ್ ಚಮಚ ರಾಗಿ ಹಿಟ್ಟು
- 3 ಟೇಬಲ್ ಚಮಚ ಬೆಲ್ಲ (ಅಥವಾ ನಿಮ್ಮ ರುಚಿ ಪ್ರಕಾರ)
- 1 ಕಪ್ ನೀರು
- 1 ಕಪ್ ಹಾಲು
- ಒಂದು ಚಿಟಿಕೆ ಏಲಕ್ಕಿ ಪುಡಿ
ರಾಗಿ ಮಾಲ್ಟ್ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟು ಮತ್ತು ಬೆಲ್ಲ ತೆಗೆದುಕೊಳ್ಳಿ.
- ಅದಕ್ಕೆ ನೀರು ಮತ್ತು ಹಾಲು ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ.
- ಒಲೆಯ ಮೇಲಿಟ್ಟು ಮಗುಚುತ್ತಾ ಕುದಿಸಿ. ಒಂದೆರಡು ನಿಮಿಷ ಸಣ್ಣ ಉರಿಯಲ್ಲಿ ಕುದಿಸುವುದನ್ನು ಮುಂದುವರೆಸಿ.
- ಏಲಕ್ಕಿ ಪುಡಿ, ಬೇಕಾದಲ್ಲಿ 1/4 ಚಮಚ ತುಪ್ಪ ಹಾಕಿ ಸ್ಟವ್ ಆಫ್ ಮಾಡಿ. ಆರೋಗ್ಯಕರ ರಾಗಿ ಮಾಲ್ಟ್ ಕುಡಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ