Gasagase payasa recipe in Kannada | ಗಸಗಸೆ ಪಾಯಸ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 3 ಟೇಬಲ್ ಚಮಚ ಗಸಗಸೆ ಬೀಜ
- 2 ಟೀಸ್ಪೂನ್ ಅಕ್ಕಿ
- 1/2 ಕಪ್ ಬೆಲ್ಲ
- 1/2 ಕಪ್ ತೆಂಗಿನ ತುರಿ
- 2 ಕಪ್ ಹಾಲು
- 1 ಕಪ್ ನೀರು (ಅರೆಯಲು ಬಳಸಿದ ನೀರು ಸೇರಿಸಿ)
- ಒಂದು ಏಲಕ್ಕಿ
ಗಸಗಸೆ ಪಾಯಸ ಮಾಡುವ ವಿಧಾನ:
- ಗಸಗಸೆ ಮತ್ತು ಅಕ್ಕಿಯನ್ನು ಹುರಿಯಿರಿ.
- ಬಿಸಿ ಆರಿದ ನಂತರ ನೀರು ಹಾಕದೆ ಪುಡಿ ಮಾಡಿಕೊಳ್ಳಿ.
- ಅದಕ್ಕೆ ಏಲಕ್ಕಿ ಮತ್ತು ತೆಂಗಿನ ತುರಿ ಹಾಕಿ ಅಗತ್ಯವಿದ್ದಷ್ಟು ನೀರು ಹಾಕಿ ನುಣ್ಣನೆ ಅರೆದುಕೊಳ್ಳಿ.
- ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಹಾಲು, ಬೆಲ್ಲ ಮತ್ತು ಉಳಿದ ನೀರು ಸೇರಿಸಿ.
- ಆಗಾಗ್ಯೆ ಮಗುಚುತ್ತಾ ಕುದಿಸಿ.
- ಪಾಯಸ ಕುದಿಯಲು ಪ್ರಾರಂಭಿಸಿದ ಕೂಡಲೇ ಸ್ಟೋವ್ ಆಫ್ ಮಾಡಿ. ರುಚಿಕರ ಗಸಗಸೆ ಪಾಯಸವನ್ನು ಬಿಸಿ ಅಥವಾ ತಣ್ಣಗೆ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ