Hesaru kaalu gojju recipe in Kannada | ಹೆಸರುಕಾಳು ಗೊಜ್ಜು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಹೆಸರುಕಾಳು
- 1/2 ಚಮಚ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 2 - 4 ಸಣ್ಣದಾಗಿ ಕೊಚ್ಚಿದ ಬೆಳ್ಳುಳ್ಳಿ ಅಥವಾ 1/2 ಟೀಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್
- 1 - 2 ಹಸಿರು ಮೆಣಸಿನಕಾಯಿ
- 4 - 5 ಕರಿಬೇವಿನ ಎಲೆ
- 1 ದೊಡ್ಡ ಕತ್ತರಿಸಿದ ಈರುಳ್ಳಿ
- 2 ಕತ್ತರಿಸಿದ ಟೊಮೇಟೊ
- 2 ಚಿಟಿಕೆ ಅರಿಶಿನ ಪುಡಿ
- 1 ಟೀಸ್ಪೂನ್ ಪಾವ್ ಭಾಜಿ ಮಸಾಲಾ ಅಥವಾ 1/2 ಟೀಸ್ಪೂನ್ ಗರಂ ಮಸಾಲಾ
- 1/2 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ (ಮಸಾಲೆ ಪುಡಿಯಲ್ಲಿ ಮೆಣಸಿನ ಪುಡಿ ಇಲ್ಲವಾದಲ್ಲಿ ಮಾತ್ರ)
- 1 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ)
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 2 ಟೇಬಲ್ ಚಮಚ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ಹೆಸರುಕಾಳು ಗೊಜ್ಜು ಮಾಡುವ ವಿಧಾನ:
- ಹೆಸರುಕಾಳನ್ನು ನೆನೆಸಿ ಸ್ವಲ್ಪ ಉಪ್ಪು, ಅರಿಶಿನ ಪುಡಿ ಮತ್ತು ನೀರು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿ.
- ಸಾಸಿವೆ ಸಿಡಿದ ಮೇಲೆ ಸಣ್ಣದಾಗಿ ಕೊಚ್ಚಿದ ಬೆಳ್ಳುಳ್ಳಿ ( ಅಥವಾ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ), ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ.
- ಕತ್ತರಿಸಿದ ಈರುಳ್ಳಿ ಹಾಕಿ ಬಾಡಿಸಿ. ಅರಶಿನ ಪುಡಿ ಸೇರಿಸಿ.
- ನಂತರ ಕತ್ತರಿಸಿದ ಟೊಮೇಟೊ ಹಾಕಿ ಬಾಡಿಸಿ.
- ಅದಕ್ಕೆ ಬೇಯಿಸಿದ ಹೆಸರುಕಾಳು ಮತ್ತು ಬೇಯಿಸಿದ ನೀರು ಹಾಕಿ, ಮಗುಚಿ.
- ಪಾವ್ ಭಾಜಿ ಮಸಾಲಾ ಅಥವಾ ಗರಂ ಮಸಾಲಾ ಪುಡಿ ಸೇರಿಸಿ. ಬೇಕಾದಲ್ಲಿ ಒಂದು ಚಮಚ ಪುಡಿ ಮಾಡಿದ ಬೆಲ್ಲ ಹಾಕಿ. ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
- ಒಂದೆರಡು ನಿಮಿಷ ಕುದಿಸಿ.
- ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಸ್ಟವ್ ಆಫ್ ಮಾಡಿ. ಚಪಾತಿ ಅಥವಾ ರೊಟ್ಟಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ