Hesaru bele saaru recipe in Kannada | ಹೆಸರುಬೇಳೆ ಸಾರು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/4 ಕಪ್ ಹೆಸರುಬೇಳೆ
- 1/2 ಕಪ್ ತೆಂಗಿನತುರಿ
- 1 - 2 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
- 1/4 ಟೀಸ್ಪೂನ್ ಸಾಸಿವೆ
- 1.5 ಲೀ ನೀರು
- 4 ಚಮಚ ಲಿಂಬೆಹಣ್ಣಿನ ರಸ (ರುಚಿಗೆ ತಕ್ಕಂತೆ ಬದಲಾಯಿಸಿ)
- ಒಂದು ಚಿಟಿಕೆ ಅರಶಿನ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ
- 1/4 ಟೀಸ್ಪೂನ್ ಸಾಸಿವೆ
- 1/4 ಟೀಸ್ಪೂನ್ ಜೀರಿಗೆ
- ಒಂದು ದೊಡ್ಡ ಚಿಟಿಕೆ ಇಂಗು
- 4 - 5 ಕರಿಬೇವಿನ ಎಲೆ
- 1 ಟೀಸ್ಪೂನ್ ಅಡುಗೆ ಎಣ್ಣೆ
ಹೆಸರುಬೇಳೆ ಸಾರು ಮಾಡುವ ವಿಧಾನ:
- ಹೆಸರುಬೇಳೆಯನ್ನು ತೊಳೆದು ಸ್ವಲ್ಪ ನೀರು, ಒಂದೆರಡು ಹನಿ ಎಣ್ಣೆ, ಅರಶಿನ ಮತ್ತು ಹಸಿರು ಮೆಣಸಿನ ಕಾಯಿ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. ಬೇಕಾದಲ್ಲಿ ಹಸಿರು ಮೆಣಸಿನ ಕಾಯಿಯನ್ನು ಅರೆಯುವಾಗ ಸೇರಿಸಿಯಬಹುದು
- ತೆಂಗಿನತುರಿ ಮತ್ತು ಸಾಸಿವೆಯನ್ನು ಮಿಕ್ಸಿಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ.
- ರುಬ್ಬಿದ ಮಿಶ್ರಣವನ್ನು ಬೇಯಿಸಿದ ಹೆಸರುಬೇಳೆಗೆ ಸೇರಿಸಿ.
- ರುಚಿಗೆ ತಕ್ಕಷ್ಟು ಉಪ್ಪು, ಉಳಿದ ನೀರು ಸೇರಿಸಿ ಕುದಿಸಿ.
- ಸ್ಟವ್ ಆಫ್ ಮಡಿದ ಮೇಲೆ ಲಿಂಬೆ ಹಣ್ಣಿನ ರಸ ಸೇರಿಸಿ.
- ಎಣ್ಣೆ, ಒಣಮೆಣಸು, ಸಾಸಿವೆ, ಜೀರಿಗೆ, ಕರಿಬೇವು ಮತ್ತು ಇಂಗಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ