Masale vade or chattambade recipe in Kannada | ಮಸಾಲೆ ವಡೆ (ಚಟ್ಟಂಬಡೆ ಅಥವಾ ಆಂಬೊಡೆ) ಮಾಡುವ ವಿಧಾನ
ಮಸಾಲೆ ವಡೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಕಡ್ಲೆಬೇಳೆ
- 1 - 2 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ
- 5 - 6 ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1 ಚಮಚ ಸಣ್ಣಗೆ ಹೆಚ್ಚಿದ ಶುಂಠಿ
- ಒಂದು ದೊಡ್ಡ ಚಿಟಿಕೆ ಇಂಗು
- 2 ಟೇಬಲ್ ಚಮಚಸಬ್ಬಸಿಗೆ ಸೊಪ್ಪು
- ನಿಮ್ಮ ರುಚಿ ಪ್ರಕಾರ ಉಪ್ಪು
- 1/2 ಸಣ್ಣಗೆ ಹೆಚ್ಚಿದ ಈರುಳ್ಳಿ ಅಥವಾ ಸ್ವಲ್ಪ ಎಲೆಕೋಸು (ಬೇಕಾದಲ್ಲಿ)
ಚಟ್ಟಂಬಡೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಕಡ್ಲೆಬೇಳೆ
- 2 - 3 ಒಣ ಮೆಣಸಿನಕಾಯಿ
- 1 ಚಮಚ ಸಣ್ಣಗೆ ಹೆಚ್ಚಿದ ಶುಂಠಿ
- 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ
- ಒಂದು ದೊಡ್ಡ ಚಿಟಿಕೆ ಇಂಗು
- ನಿಮ್ಮ ರುಚಿ ಪ್ರಕಾರ ಉಪ್ಪು
- 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ತೆಂಗಿನಕಾಯಿ ಚೂರುಗಳು
ಮಸಾಲೆ ವಡೆ ಮಾಡುವ ವಿಧಾನ:
- ಕಡ್ಲೆಬೇಳೆಯನ್ನು ತೊಳೆದು 4 ಘಂಟೆಗಳ ಕಾಲ ನೆನೆಸಿಡಿ.
- ನೆನೆದ ನಂತರ ನೀರು ಬಗ್ಗಿಸಿ, ನೀರು ಹಾಕದೆ ತರಿ ತರಿಯಾಗಿ ರುಬ್ಬಿ ಕೊಳ್ಳಿ.
- ಅದಕ್ಕೆ ಹೆಚ್ಚಿದ ಹಸಿರುಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಸಬ್ಬಸಿಗೆ ಸೊಪ್ಪು, ಇಂಗು ಮತ್ತು ಉಪ್ಪು ಹಾಕಿ ಕಲಸಿ.
- ಈಗ ಮೆತ್ತಗಿನ ವಡೆ ಬೇಕಾದಲ್ಲಿ ಹೆಚ್ಚಿದ ಈರುಳ್ಳಿ ಅಥವಾ ಸ್ವಲ್ಪ ಎಲೆಕೋಸನ್ನು ಸೇರಿಸಿ.
- ನಿಂಬೆಹಣ್ಣಿನ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಅಂಗೈನಿಂದ ಒತ್ತಿ ವಡೆಗಳನ್ನು ಮಾಡಿ, ಬಿಸಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕಾಯಿಸಿ.
- ಜಾಸ್ತಿ ಹೊತ್ತು ಕಾಯಿಸಿದರೆ ವಡೆ ಗರಿ ಗರಿಯಾಗುವುದು. ನಾನು ಸ್ವಲ್ಪ ಗರಿ ಗರಿ ಅಂದರೆ ಸ್ವಲ್ಪ ಹೊಂಬಣ್ಣ ಬರುವವರೆಗೆ ಕಾಯಿಸುತ್ತೇನೆ. ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.
ಚಟ್ಟಂಬಡೆ ಅಥವಾ ಆಂಬೊಡೆ ಮಾಡುವ ವಿಧಾನ:
- ಕಡ್ಲೆಬೇಳೆಯನ್ನು ತೊಳೆದು 4 ಘಂಟೆಗಳ ಕಾಲ ನೆನೆಸಿಡಿ.
- ನೆನೆದ ನಂತರ ನೀರು ಬಗ್ಗಿಸಿ ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ.
- ಸಣ್ಣಗೆ ಕತ್ತರಿಸಿದ ಶುಂಠಿ, ಒಣ ಮೆಣಸಿನಕಾಯಿ ಮತ್ತು ಉಪ್ಪು ಹಾಕಿ ತರಿ ತರಿಯಾಗಿ ರುಬ್ಬಿ ಕೊಳ್ಳಿ. ನೀರು ಹಾಕುವುದು ಬೇಡ.
- ಅದಕ್ಕೆ ಹೆಚ್ಚಿದ ಕರಿಬೇವಿನ ಸೊಪ್ಪು, ಇಂಗು ಮತ್ತು ಹೆಚ್ಚಿದ ತೆಂಗಿನಕಾಯಿ ಚೂರು ಹಾಕಿ ಕಲಸಿ.
- ನಿಂಬೆಹಣ್ಣಿನ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಅಂಗೈನಿಂದ ಒತ್ತಿ ವಡೆಗಳನ್ನು ಮಾಡಿ.
- ಬಿಸಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕಾಯಿಸಿ.
- ಹೊಂಬಣ್ಣ ಬರುವವರೆಗೆ ಮತ್ತು ಗುಳ್ಳೆಗಳು ಸ್ವಲ್ಪ ಕಡಿಮೆ ಆಗುವವರೆಗೆ ಕಾಯಿಸಿ. ಜಾಸ್ತಿ ಹೊತ್ತು ಕಾಯಿಸಿದರೆ ವಡೆ ಗರಿ ಗರಿಯಾಗುವುದು. ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ