Nargis mandakki recipe in Kannada | ನರ್ಗಿಸ್ ಮಂಡಕ್ಕಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 2 ಕಪ್ ಮಂಡಕ್ಕಿ
- 1/4 ಟೀಸ್ಪೂನ್ ಸಾಸಿವೆ
- 1/4 ಟೀಸ್ಪೂನ್ ಜೀರಿಗೆ
- 4 - 5 ಕರಿಬೇವಿನ ಎಲೆ
- 1 - 2 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ
- 1 ಸಣ್ಣದಾಗಿ ಹೆಚ್ಚಿದ ಸಣ್ಣ ಈರುಳ್ಳಿ
- 1 ಸಣ್ಣದಾಗಿ ಹೆಚ್ಚಿದ ಸಣ್ಣ ಟೊಮೇಟೊ
- ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ
- 1/4 ಟೀಸ್ಪೂನ್ ಸಕ್ಕರೆ
- 1/4 ಟೀಸ್ಪೂನ್ ಸಾಂಬಾರ್ ಪುಡಿ
- 1/2 ಚಮಚ ನಿಂಬೆ ರಸ (ಬೇಕಾದಲ್ಲಿ)
- 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 2 ಟೇಬಲ್ ಚಮಚ ಹಸಿ ತೆಂಗಿನ ತುರಿ
- 2 ಟೇಬಲ್ ಚಮಚ ಸೇವ್ (ಬೇಕಾದಲ್ಲಿ)
- 2 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ನರ್ಗಿಸ್ ಮಂಡಕ್ಕಿ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಜೀರಿಗೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಸ್ಟವ್ ಆಫ್ ಮಾಡಿ.
- ಹೆಚ್ಚಿದ ಈರುಳ್ಳಿ, ಟೊಮೇಟೊ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಕಲಸಿ.
- ನಂತರ ಉಪ್ಪು, ಸಕ್ಕರೆ, ಸಾಂಬಾರ್ ಪುಡಿ ಮತ್ತು ನಿಂಬೆ ರಸ ಸೇರಿಸಿ ಕಲಸಿ.
- ನಂತರ ಮಂಡಕ್ಕಿ, ಹಾಕಿ ಚೆನ್ನಾಗಿ ಕಲಸಿ.
- ಸರ್ವಿಂಗ್ ಪ್ಲೇಟ್ ಗೆ ಕಲಸಿದ ಮಂಡಕ್ಕಿ ಹಾಕಿ.
- ಕೊತ್ತಂಬರಿ ಸೊಪ್ಪು, ಹಸಿ ತೆಂಗಿನ ತುರಿ ಮತ್ತು ಸೇವ್ ನಿಂದ ಅಲಂಕರಿಸಿ. ಹಾಗು ಕೂಡಲೇ ಬಡಿಸಿ. ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ