Gorikai kara recipe in Kannada | ಗೋರಿಕಾಯಿ ಖಾರ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:
- 250gm ಗೋರಿಕಾಯಿ
- 1 ದೊಡ್ಡ ಈರುಳ್ಳಿ
- 2 ದೊಡ್ಡ ಟೊಮೆಟೊ
- 2-4 ಹಸಿರು ಮೆಣಸಿನಕಾಯಿ
- 2 ಎಸಳು ಬೆಳ್ಳುಳ್ಳಿ
- ಒಂದು ಚಿಟಿಕೆ ಅರಶಿನ ಪುಡಿ
- 3-4 ದೊಡ್ಡಪತ್ರೆ ಎಲೆಗಳು (ಬೇಕಾದಲ್ಲಿ)
- 1/4 ಕಪ್ ತೆಂಗಿನ ತುರಿ
- 1 ಟೇಬಲ್ ಸ್ಪೂನ್ ಕೊತ್ತುಂಬರಿ ಸೊಪ್ಪು (ಬೇಕಾದಲ್ಲಿ)
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/4 ಟೀಸ್ಪೂನ್ ಸಾಸಿವೆ
- 1/4 ಟೀಸ್ಪೂನ್ ಜೀರಿಗೆ
- 4 - 5 ಕರಿಬೇವು
- 5-6 ಎಸಳು ಬೆಳ್ಳುಳ್ಳಿ ಜಜ್ಜಿದ್ದು
- 4 ಟೀಸ್ಪೂನ್ ಅಡುಗೆ ಎಣ್ಣೆ
ಗೋರಿಕಾಯಿ ಖಾರ ಮಾಡುವ ವಿಧಾನ:
- ಗೋರಿಕಾಯಿಯನ್ನು ತೊಳೆದು, ಕತ್ತರಿಸಿ. ಈರುಳ್ಳಿ ಮತ್ತು ಟೊಮ್ಯಾಟೋವನ್ನು ಸಹ ಕತ್ತರಿಸಿ.
- ಒಂದು ಕುಕ್ಕರ್ ನಲ್ಲಿ ಕತ್ತರಿಸಿದ ಗೋರಿಕಾಯಿ, ಈರುಳ್ಳಿ, ಟೊಮ್ಯಾಟೋ, ಹಸಿರು ಮೆಣಸಿನಕಾಯಿ, ಅರಶಿನ ಪುಡಿ ಮತ್ತು ಎರಡು ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ.
- ಉಪ್ಪು ಮತ್ತು ನೀರು ಹಾಕಿ ಒಂದೆರಡು ವಿಷಲ್ ಮಾಡಿ ಬೇಯಿಸಿ.
- ಬೇಯಿಸಿದ ತರಕಾರಿ ತಣ್ಣಗಾದ ನಂತರ ತೆಂಗಿನತುರಿಯೊಂದಿಗೆ ಅರೆದು ತೆಗೆದಿಟ್ಟುಕೊಳ್ಳಿ.
- ಈಗ ಒಂದು ಬಾಣಲೆ ತೆಗೆದು ಕೊಂಡು, ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು ಮತ್ತು ಜಜ್ಜಿದ ಬೆಳ್ಳುಳ್ಳಿಯ ಒಗ್ಗರಣೆ ಮಾಡಿ.
- ಅದಕ್ಕೆ ಅರೆದಿಟ್ಟ ತರಕಾರಿ ಮಿಶ್ರಣವನ್ನು ಹಾಕಿ ಕುದಿಸಿ.
- ಬೇಕಾದಲ್ಲಿ ಕೊತ್ತುಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಸ್ಟವ್ ಆಫ್ ಮಾಡಿ. ಬಿಸಿ ಅನ್ನ, ಚಪಾತಿ ಅಥವಾ ರೊಟ್ಟಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ