Bisi bele bath powder in Kannada | ಬಿಸಿ ಬೇಳೆ ಬಾತ್ ಪೌಡರ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:
- 10-15 ಒಣ ಮೆಣಸಿನಕಾಯಿ
- 4 ಟೀಸ್ಪೂನ್ ಕಡ್ಲೆ ಬೇಳೆ
- 8 ಟೀಸ್ಪೂನ್ ಉದ್ದಿನ ಬೇಳೆ
- 1 ಟೀಸ್ಪೂನ್ ಮೆಂತೆ
- 1 ಟೀಸ್ಪೂನ್ ಸಾಸಿವೆ
- 2 ಟೀಸ್ಪೂನ್ ಜೀರಿಗೆ
- 8 ಟೀಸ್ಪೂನ್ ಕೊತ್ತಂಬರಿ ಬೀಜ
- 1/4 ಟೀಸ್ಪೂನ್ ಇಂಗು
- 2 ಬೆರಳುದ್ದ ಚಕ್ಕೆ
- 2 ಟೀಸ್ಪೂನ್ ಲವಂಗ
- 4 ಏಲಕ್ಕಿ
- 4 ಟೀಸ್ಪೂನ್ ಗಸಗಸೆ
- 1 ಟೀಸ್ಪೂನ್ ಅಡುಗೆ ಎಣ್ಣೆ
ಬಿಸಿ ಬೇಳೆ ಬಾತ್ ಪೌಡರ್ ಮಾಡುವ ವಿಧಾನ:
- ಒಂದು ಬಾಣಲೆ ತೆಗೆದುಕೊಂಡು 1/2 ಚಮಚ ಎಣ್ಣೆ ಹಾಕಿ. ಸ್ಟೋವ್ ಮಧ್ಯಮ ಉರಿಯಲ್ಲಿಟ್ಟು, ಮೊದಲಿಗೆ ಒಣ ಮೆಣಸು ಹಾಕಿ ಹುರಿಯಿರಿ.
- ನಂತರ ಮಿಕ್ಕೆಲ್ಲ ಪದಾರ್ಥಗಳನ್ನು ಒಂದೊಂದಾಗಿ ಹುರಿಯಿರಿ. ಮೊದಲಿಗೆ ಕಡ್ಲೆಬೇಳೆಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ.
- ಆಮೇಲೆ ಉದ್ದಿನ ಬೇಳೆಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ.
- ಉಳಿದ 1/2 ಚಮಚ ಎಣ್ಣೆ ಹಾಕಿ. ಮೆಂತೆ ಮತ್ತು ಸಾಸಿವೆಯನ್ನು ಸಾಸಿವೆ ಸಿಡಿಯುವವರೆಗೆ ಹುರಿಯಿರಿ.
- ಜೀರಿಗೆ ಮತ್ತು ಕೊತ್ತಂಬರಿ ಬೀಜವನ್ನು ಘಮ್ಮನೆ ಸುವಾಸನೆ ಬರುವವರೆಗೆ ಹುರಿಯಿರಿ.
- ಚಕ್ಕೆ, ಲವಂಗ, ಏಲಕ್ಕಿ, ಇಂಗು ಮತ್ತು ಗಸಗಸೆಯನ್ನುಕೆಲ ಸೆಕೆಂಡ್ ಗಳ ಕಾಲ ಹುರಿಯಿರಿ.
- ಹುರಿದ ಎಲ್ಲ ಪದಾರ್ಥಗಳು ತಣ್ಣಗಾದಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ, ಗಾಳಿಯಾಡದ ಡಬ್ಬದಲ್ಲಿ ಎತ್ತಿಡಿ. ರುಚಿಕರ ಬಿಸಿಬೇಳೆ ಬಾತ್ ಮಾಡಲು ಉಪಯೋಗಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ