Chakkuli recipe in Kannada | ಚಕ್ಕುಲಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 2 ಕಪ್ ದೋಸೆ ಅಕ್ಕಿ
- 1/2 ಕಪ್ ಉದ್ದಿನಬೇಳೆ
- 1/2 ಕಪ್ ತೆಂಗಿನ ತುರಿ
- 1 ಟೇಬಲ್ ಸ್ಪೂನ್ ಜೀರಿಗೆ
- 1 ನಿಂಬೆ ಗಾತ್ರದ ಬೆಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ ಚಕ್ಕುಲಿ ಕಾಯಿಸಲು
ಚಕ್ಕುಲಿ ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ಒಂದೆರಡು ಘಂಟೆ ನೀರಾರಲು ಬಿಡಿ. ನಂತರ ಅಕ್ಕಿಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಬಿಳಿ ಬಣ್ಣ ಬರುವವರೆಗೆ ಹುರಿದು, ಬಿಸಿ ಆರಿದ ಮೇಲೆ ನುಣ್ಣನೆ ಪುಡಿ ಮಾಡಿ.
- ಉದ್ದಿನಬೇಳೆಯನ್ನು ತೊಳೆದು, ನೀರು ಬಗ್ಗಿಸಿ, ಒಂದೆರಡು ಘಂಟೆ ನೀರಾರಲು ಬಿಡಿ. ನಂತರ ಉದ್ದಿನಬೇಳೆಯನ್ನು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿದು, ಬಿಸಿ ಆರಿದ ಮೇಲೆ ನುಣ್ಣನೆ ಪುಡಿ ಮಾಡಿ. ಹಿಟ್ಟಿನ ಗಿರಣಿ ಅಥವಾ ಮಿಕ್ಸಿಯಲ್ಲೂ ಪುಡಿ ಮಾಡಬಹುದು.
- ಅಕ್ಕಿ ಹಿಟ್ಟು ಮತ್ತು ಉದ್ದಿನ ಹಿಟ್ಟನ್ನು ಸಾರಣಿಸಿ ಕೊಳ್ಳಿ (ಜರಡಿ).
- ಬೆಣ್ಣೆ, ಜಜ್ಜಿದ ಜೀರಿಗೆ ಮತ್ತು ಉಪ್ಪು ಹಾಕಿ.
- ಮಿಕ್ಸಿ ಜಾರಿಗೆ ತೆಂಗಿನ ತುರಿ, 1/4 ಚಮಚ ಜೀರಿಗೆ ಹಾಕಿ ಅವಶ್ಯವಿದ್ದಷ್ಟು ನೀರು ಉಪಯೋಗಿಸಿ ನುಣ್ಣನೆ ಅರೆಯಿರಿ.
- ಅರೆದ ಕಾಯಿಯನ್ನು ಬೆಣ್ಣೆ ಮತ್ತು ಜೀರಿಗೆ ಹಾಕಿದ ಹಿಟ್ಟಿಗೆ ಹಾಕಿ ಗಟ್ಟಿ ಆದರೆ ಮೃದುವಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ಚಕ್ಕುಲಿ ಒತ್ತಲು ಆಗುವಷ್ಟು ಮೆತ್ತಗಿದ್ದರೆ ಸಾಕು.
- ಪ್ಲಾಸ್ಟಿಕ್ ಹಾಳೆ ಮೇಲೆ ಚಕ್ಕುಲಿ ಅಚ್ಚನ್ನು ಉಪಯೋಗಿಸಿ ಚಕ್ಕುಲಿಯನ್ನು ಒತ್ತಿ.
- ಎಣ್ಣೆ ಬಿಸಿ ಮಾಡಿ ಒತ್ತಿದ ಚಕ್ಕುಲಿಯನ್ನು ಮಧ್ಯಮ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ