Congress kadlekai recipe in Kannada | ಕಾಂಗ್ರೆಸ್ ಕಡ್ಲೇಕಾಯಿ ಮಾಡುವ ವಿಧಾನ
ಕಾಂಗ್ರೆಸ್ ಕಡ್ಲೇಕಾಯಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಶೇಂಗಾ ಅಥವಾ ಕಡ್ಲೆಕಾಯಿ
- 1 ಟೀಸ್ಪೂನ್ ಎಣ್ಣೆ
- 1/4 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ)
- 1/4 ಚಮಚ ಕಾಳುಮೆಣಸಿನ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ)
- 1/4 ಟೀಸ್ಪೂನ್ ಮಾವಿನಕಾಯಿ ಪುಡಿ ಅಥವಾ ವಾಟೆಹುಳಿ ಅಥವಾ ಯಾವುದೇ ಹುಳಿ ಪುಡಿ (ಬೇಕಾದಲ್ಲಿ)
- 2 ದೊಡ್ಡ ಚಿಟಿಕೆ ಅರಿಶಿನ ಪುಡಿ
- 2 ದೊಡ್ಡ ಚಿಟಿಕೆ ಇಂಗು
- 7 - 8 ಕರಿಬೇವಿನ ಎಲೆ
- ಉಪ್ಪು ರುಚಿಗೆ ತಕ್ಕಷ್ಟು
ಕಾಂಗ್ರೆಸ್ ಕಡ್ಲೇಕಾಯಿ ಮಾಡುವ ವಿಧಾನ:
- ಒಂದು ದಪ್ಪ ತಳದ ಬಾಣಲೆಯಲ್ಲಿ ಕಡ್ಲೆಕಾಯಿಯನ್ನು ಸಣ್ಣ ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
- ತಣ್ಣಗಾದ ನಂತರ ನೆಲಗಡಲೆ ಅಥವಾ ಕಡ್ಲೆಕಾಯಿಯ ಸಿಪ್ಪೆ ತೆಗೆದು, ಬೇಳೆಗಳಾಗಿ ಮಾಡಿ, ಸಿಪ್ಪೆ ಬೇರ್ಪಡಿಸಿ.
- ಒಂದು ಬಾಣಲೆಯಲ್ಲಿ 1 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಕರಿಬೇವನ್ನು ಹುರಿಯಿರಿ.
- ಅದಕ್ಕೆ ಕೆಂಪು ಮೆಣಸಿನಕಾಯಿ ಪುಡಿ, ಕಾಳುಮೆಣಸಿನ ಪುಡಿ, ಮಾವಿನಕಾಯಿ ಪುಡಿ, ಅರಿಶಿನ ಮತ್ತು ಇಂಗು ಹಾಕಿ.
- ನಂತರ ಹುರಿದು, ಸಿಪ್ಪೆ ತೆಗೆದ ಕಡ್ಲೆಕಾಯಿ ಹಾಕಿ ಸಣ್ಣ ಉರಿಯಲ್ಲಿ ಒಂದು ನಿಮಿಷ ಮಗುಚಿ. ಸ್ಟವ್ ಆಫ್ ಮಾಡಿ.
- ಉಪ್ಪು ಹಾಕಿ ಒಮ್ಮೆ ಮಗುಚಿ.
- ತಣ್ಣಗಾದ ಮೇಲೆ ಕರಿಬೇವನ್ನು ಕೈಯಲ್ಲಿ ಪುಡಿಮಾಡಿ, ಚೆನ್ನಾಗಿ ಕಲಸಿ.
ತುಂಬಾ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿ