Saat or badusha recipe in Kannada | ಸಾಟ್ ಅಥವಾ ಬಾದುಷಾ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
- 5 ಕಪ್ ಮೈದಾ ಹಿಟ್ಟು
- 1 ಕಪ್ ತುಪ್ಪ
- 2 ಕಪ್ ಸಕ್ಕರೆ
- ಚಿಟಿಕೆ ಏಲಕ್ಕಿ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
- ಕರಿಯಲು ಎಣ್ಣೆ
ಸಾಟ್ ಅಥವಾ ಬಾದುಷಾ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಉಪ್ಪು ಮತ್ತು ತುಪ್ಪ ಹಾಕಿ ಕಲಸಿ.
- ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಮೃದುವಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.
- ಈಗ ನಿಂಬೆ ಹಣ್ಣಿನ ಗಾತ್ರದ ಉಂಡೆ ತೆಗೆದು ಕೊಂಡು ಸ್ವಲ್ಪ ಚಪ್ಪಟೆಯಾಕಾರದ ಉಂಡೆ ಮಾಡಿಟ್ಟು ಕೊಳ್ಳಿ.
- 2 ಕಪ್ ಸಕ್ಕರೆಗೆ 1/2 ಕಪ್ ನೀರು ಹಾಕಿ ಒಂದೆಳೆ ಪಾಕ ಮಾಡಿಟ್ಟು ಕೊಳ್ಳಿ. ಸಕ್ಕರೆ ಪಾಕಕ್ಕೆ ಏಲಕ್ಕಿ ಪುಡಿ ಸೇರಿಸಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನಂತರ ಚಪ್ಪಟೆಯಾಕಾರದ ಉಂಡೆಯನ್ನು ಬಿಸಿಯಾದ ಎಣ್ಣೆಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ.
- ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆದು ಬಿಸಿಯಾದ ಸಕ್ಕರೆ ಪಾಕದಲ್ಲಿ ಅದ್ದಿ ತೆಗೆಯಿರಿ ಅಥವಾ ಒಂದು ತಟ್ಟೆಯಲ್ಲಿಟ್ಟು ಮೇಲಿನಿಂದ ಸಕ್ಕರೆ ಪಾಕ ಸುರಿಯಿರಿ. ರುಚಿಯಾದ ಸಾಟ್ ಅಥವಾ ಬಾದುಷಾ ಸವಿಯಲು ಸಿದ್ದ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ