Ennegayi recipe in Kannada | ಬದನೇಕಾಯಿ ಎಣ್ಣೆಗಾಯಿ ಮಾಡುವ ವಿಧಾನ
ಬದನೇಕಾಯಿ ಎಣ್ಣೆಗಾಯಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 5 - 6 ಸಣ್ಣ ಎಳೆ ಬದನೆಕಾಯಿ
- 1 ದೊಡ್ಡ ಈರುಳ್ಳಿ
- 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
- 2 ಟೀಸ್ಪೂನ್ ಬೆಲ್ಲ
- 1/4 ಟೀಸ್ಪೂನ್ ಅರಿಶಿನ ಪುಡಿ
- 4 - 5 ಕರಿಬೇವಿನ
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1/4 ಟೀಸ್ಪೂನ್ ಸಾಸಿವೆ
- 4 ಟೇಬಲ್ ಚಮಚ ಅಡುಗೆ ಎಣ್ಣೆ (6 ಟೇಬಲ್ ಚಮಚ ನಾನ್-ಸ್ಟಿಕ್ ಪ್ಯಾನ್ ಅಲ್ಲವಾದಲ್ಲಿ)
- ಉಪ್ಪು ರುಚಿಗೆ ತಕ್ಕಷ್ಟು
ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಟೀಸ್ಪೂನ್ ಎಳ್ಳು
- 2 ಟೇಬಲ್ ಚಮಚ ನೆಲಗಡಲೆ
- 3 - 6 ಒಣ ಮೆಣಸಿನಕಾಯಿ
- 2 ಟೀಸ್ಪೂನ್ ಕೊತ್ತಂಬರಿ ಬೀಜ
- 1 ಟೀಸ್ಪೂನ್ ಜೀರಿಗೆ
- 2 ಟೀಸ್ಪೂನ್ ಕಡಲೆಬೇಳೆ
- 1 ಟೀಸ್ಪೂನ್ ಉದ್ದಿನ ಬೇಳೆ
- 1/4 ಟೀಸ್ಪೂನ್ ಮೆಂತ್ಯ
- 2 ಟೀಸ್ಪೂನ್ ಹುರಿಗಡಲೆ
- 1/2 ಕಪ್ ತೆಂಗಿನ ತುರಿ
ಬದನೇಕಾಯಿ ಎಣ್ಣೆಗಾಯಿ ಮಾಡುವ ವಿಧಾನ:
- ಬದನೇಕಾಯಿಯನ್ನು ತೊಳೆದು '+' ಆಕಾರದಲ್ಲಿ ಸೀಳಿರಿ. ಚೊಟ್ಟು ಅಥವಾ ತೊಟ್ಟಿನ ಭಾಗ ಹಾಗೆ ಇರಲಿ. ಹುಳ ಇದ್ದರೆ ಆ ಭಾಗ ತೆಗೆದು ಹಾಕಿ. ಸೀಳಿದ ಬದನೆಕಾಯಿಯನ್ನು ನೀರಿನಲ್ಲಿ ನೆನೆಸಿಡಿ.
- ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕದೆ ಮೊದಲಿಗೆ ಎಳ್ಳನ್ನು ಹುರಿದು ತೆಗೆದಿಟ್ಟು ಕೊಳ್ಳಿ.
- ಆಮೇಲೆ ನೆಲಗಡಲೆಯನ್ನು ಹುರಿದು ತೆಗೆದಿಟ್ಟು ಕೊಳ್ಳಿ.
- ನಂತರ ಒಂದು ಚಮಚ ಎಣ್ಣೆ ಹಾಕಿ ಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಕಡಲೆಬೇಳೆ, ಉದ್ದಿನ ಬೇಳೆ ಮತ್ತು ಮೆಂತ್ಯವನ್ನು ಮಧ್ಯಮ ಉರಿಯಲ್ಲಿ ಬೇಳೆಗಳು ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ.
- ಹುರಿದ ಎಳ್ಳು, ನೆಲಗಡಲೆ, ಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಕಡಲೆಬೇಳೆ, ಉದ್ದಿನ ಬೇಳೆ, ಮೆಂತ್ಯ, ಹುರಿಗಡಲೆ ಮತ್ತು ತೆಂಗಿನ ತುರಿಯನ್ನು ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ಅರೆದುಕೊಳ್ಳಿ.
- ನಂತರ ಅದೇ ಬಾಣಲೆಗೆ ಉಳಿದ ಎಣ್ಣೆ ಹಾಕಿ ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಕತ್ತರಿಸಿದ ಈರುಳ್ಳಿ ಹಾಕಿ ಬಾಡಿಸಿ. ಅರಶಿನ ಪುಡಿ ಸೇರಿಸಿ.
- ಈಗ ಬದನೇಕಾಯಿಯೊಳಗೆ ಅರೆದ ಮಸಾಲೆ ತುಂಬಿಸಿ, ಬಾಣಲೆಯಲ್ಲಿದ್ದ ಒಗ್ಗರಣೆಯಲ್ಲಿಟ್ಟು ನೀರು ಹಾಕದೆ ಬೇಯಿಸಿ. ಆಗಾಗ ಬದನೆಕಾಯಿಯನ್ನು ತಿರುವುತ್ತಾ ಇರಿ.
- ಬದನೇಕಾಯಿ ಸ್ವಲ್ಪ ಮೆತ್ತಗಾದ ಕೂಡಲೇ ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಸೇರಿಸಿ ಬೇಯಿಸುವುದನ್ನು ಮುಂದುವರೆಸಿ.
- ಬದನೇಕಾಯಿ ಸಂಪೂರ್ಣ ಮೆತ್ತಗಾದ ಮೇಲೆ ಉಳಿದ ಮಸಾಲೆ ಮತ್ತು ೧ ಕಪ್ ನೀರು ಸೇರಿಸಿ. ಒಮ್ಮೆ ಮಗುಚಿ, ಮುಚ್ಚಳ ಮುಚ್ಚಿ ೫ ನಿಮಿಷಗಳ ಕಾಲ ಬೇಯಿಸಿ.
- ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಸ್ಟವ್ ಆಫ್ ಮಾಡಿ. ಚಪಾತಿ ಅಥವಾ ರೊಟ್ಟಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ