Baby corn golden fry recipe in Kannada | ಬೇಬಿ ಕಾರ್ನ್ ಗೋಲ್ಡನ್ ಫ್ರೈ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 6 ಬೇಬಿ ಕಾರ್ನ್ ಅಥವಾ ಎಳೆ ಜೋಳ
- 2 ಟೇಬಲ್ ಚಮಚ ಮೈದಾ ಹಿಟ್ಟು
- 1 ಟೇಬಲ್ ಚಮಚ ಜೋಳದ ಹಿಟ್ಟು
- 1 ಟೇಬಲ್ ಚಮಚ ಅಕ್ಕಿ ಹಿಟ್ಟು
- 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
- 1/2 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
- 1/4 ಟೀಸ್ಪೂನ್ ಸೋಂಪು ಅಥವಾ ಬಡೆಸೋಂಪು
- 1 ಟೇಬಲ್ ಚಮಚ ಮೊಸರು
- ಸ್ವಲ್ಪ ನೀರು
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ ಕಾಯಿಸಲು
ಬೇಬಿ ಕಾರ್ನ್ ಗೋಲ್ಡನ್ ಫ್ರೈ ಮಾಡುವ ವಿಧಾನ:
- ಬೇಬಿ ಕಾರ್ನ್ ಸಿಪ್ಪೆ ಸುಲಿಯಿರಿ. ಬೇಕಾದಲ್ಲಿ ಎರಡಾಗಿ ಸೀಳಿ ಅಥವಾ ಕತ್ತರಿಸಿ.
- ಒಂದು ಬಟ್ಟಲಿನಲ್ಲಿ ಮೈದಾ, ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಕೆಂಪು ಮೆಣಸಿನಕಾಯಿ ಪುಡಿ, ಉಪ್ಪು, ಸೋಂಪು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ತೆಗೆದುಕೊಳ್ಳಿ.
- ಸ್ವಲ್ಪ ನೀರು ಮತ್ತು 1 ಟೇಬಲ್ ಚಮಚ ಮೊಸರು ಸೇರಿಸಿ ಬೇಬಿ ಕಾರ್ನ್ ಗೆ ಹಿಟ್ಟು ಮತ್ತು ಮಸಾಲೆಗಳು ಚೆನ್ನಾಗಿ ಹೊಂದುವಂತೆ ಕಲಸಿಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಹಿಟ್ಟು ಮತ್ತು ಮಸಾಲೆ ಹೊಂದಿಸಿದ ಬೇಬಿ ಕಾರ್ನ್ ಗಳನ್ನು ಬಿಸಿಯಾದ ಎಣ್ಣೆಯಲ್ಲಿ ಗರಿ ಗರಿಯಾಗುವವರೆಗೆ ಮತ್ತು ಹೊಂಬಣ್ಣ ಬರುವವರೆಗೆ ಕಾಯಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ