Kara kadubu recipe in Kannada | ಖಾರ ಕಡುಬು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಅಕ್ಕಿ ಹಿಟ್ಟು
- 1.5 - 2 ಕಪ್ ನೀರು (ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ)
- 1/4 ಕಪ್ ತೆಂಗಿನ ತುರಿ
- 1/4 ಕಪ್ ಕಡಲೆಬೇಳೆ
- 1 - 2 ಹಸಿರು ಮೆಣಸಿನಕಾಯಿ
- 1ಸೆಮೀ ಉದ್ದದ ಶುಂಠಿ
- 2 ಟೇಬಲ್ ಚಮಚ ಕತ್ತರಿಸಿದ ಕೊತ್ತುಂಬರಿ ಸೊಪ್ಪು
- ದೊಡ್ಡ ಚಿಟಿಕೆ ಇಂಗು
- ಉಪ್ಪು ರುಚಿಗೆ ತಕ್ಕಷ್ಟು
- 2 ಟೀಸ್ಪೂನ್ ತುಪ್ಪ
- ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆ
ಖಾರ ಕಡುಬು ಮಾಡುವ ವಿಧಾನ :
- ಕಡಲೆಬೇಳೆಯನ್ನು 4 - 5 ಘಂಟೆಗಳ ಕಾಲ ನೆನೆಸಿಡಿ.
- ಒಂದು ಬಾಣಲೆಯಲ್ಲಿ ನೀರು, 1/2 ಟೀಸ್ಪೂನ್ ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲು ಇಡಿ.
- ನೀರು ಕುದಿಯಲು ಪ್ರಾರಂಭಿಸಿದ ನಂತರ ಅಕ್ಕಿ ಹಿಟ್ಟನ್ನು ಹಾಕಿ, ಒಮ್ಮೆ ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ.
- ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ.
- ಮಿಕ್ಸಿ ಜಾರಿಗೆ ನೆನೆಸಿದ ಕಡಲೆಬೇಳೆ, ತೆಂಗಿನ ತುರಿ, ಹಸಿರು ಮೆಣಸಿನಕಾಯಿ, ಶುಂಠಿ, ಇಂಗು ಮತ್ತು ಉಪ್ಪು ಹಾಕಿ. ಬೇಕಾದಷ್ಟು ನೀರು ಹಾಕಿ ತರಿ ತರಿಯಾದ ದಪ್ಪ ಚಟ್ನಿ ಹದಕ್ಕೆ ರುಬ್ಬಿ.
- ರುಬ್ಬಿದ ಮಿಶ್ರಣವನ್ನು ೫ ನಿಮಿಷ ಆವಿಯಲ್ಲಿ ಬೇಯಿಸಿ. ನಂತರ ಚೆನ್ನಾಗಿ ಕಲಸಿ, ಪುಡಿ ಪುಡಿಯಾಗಿದ್ದಲ್ಲಿ ಸ್ವಲ್ಪ ನೀರು ಸೇರಿಸಿ, ಕಲಸಿ ಮೆತ್ತಗಿನ ಹೂರಣ ಸಿದ್ಧ ಮಾಡಿಟ್ಟು ಕೊಳ್ಳಿ.
- ಇಷ್ಟು ಹೊತ್ತಿಗೆ ಅಕ್ಕಿ ಹಿಟ್ಟು ಬಿಸಿ ಆರಿರುತ್ತದೆ. ಆ ಹಿಟ್ಟನ್ನು ಚೆನ್ನಾಗಿ ನಾದಿ. ಹಿಟ್ಟು ಮೃದುವಾಗಿರಬೇಕು.
- ಒಂದು ಲಿಂಬೆ ಗಾತ್ರದ ಹಿಟ್ಟು ತೆಗೆದು ಕೊಂಡು, ತುಪ್ಪ ಸವರಿದ ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆ ಮೇಲೆ ವೃತ್ತಾಕಾರವಾಗಿ ತಟ್ಟಿ ಅಥವಾ ಲಟ್ಟಿಸಿ.
- ಮಧ್ಯದಲ್ಲಿ ಹೂರಣ ಇಟ್ಟು, ಮಡಿಸಿ, ಅಂಚುಗಳನ್ನು ಒತ್ತಿ ಅಂಟಿಸಿ.
- ಸೆಕೆಯಲ್ಲಿ (ಆವಿಯಲ್ಲಿ) ಬಾಳೆ ಎಲೆ ಅಥವಾ ತುಪ್ಪ ಹಚ್ಚಿದ ಪ್ಲೇಟ್ ನಲ್ಲಿಟ್ಟು 8 - 10 ನಿಮಿಷ ಬೇಯಿಸಿ. ಸವಿದು ಆನಂದಿಸಿ.
ನನ್ನ ತಾಯಿ ಕೈ ರುಚಿ ಮಿಸ್ ಮಾಡ್ಕೊತಿದ್ದೆ, ಧನ್ಯವಾದಗಳು ಸ್ನೇಹಿತರೇ ಅವರ ಕೈ ರುಚಿ ಮತ್ತೊಮ್ಮೆ ದೊರೆಯಿತು
ಪ್ರತ್ಯುತ್ತರಅಳಿಸಿ