Hasi menthe thambli recipe in Kannada | ಹಸಿ ಮೆಂತೆ ತಂಬ್ಳಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 2 ಟೀಸ್ಪೂನ್ ಮೆಂತೆ
- 1/4 ಕಪ್ ತೆಂಗಿನತುರಿ
- 1 ಕಪ್ ಮೊಸರು ಅಥವಾ ಮಜ್ಜಿಗೆ
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ
- 1 ಟೀಸ್ಪೂನ್ ತುಪ್ಪ ಅಥವಾ ಅಡುಗೆ ಎಣ್ಣೆ
- 1/4 ಟೀಸ್ಪೂನ್ ಸಾಸಿವೆ
ಹಸಿ ಮೆಂತೆ ತಂಬ್ಳಿ ಮಾಡುವ ವಿಧಾನ:
- ಮೆಂತೆಯನ್ನು ತೊಳೆದು 4 ಘಂಟೆಗಳ ಕಾಲ ನೆನೆಸಿಡಿ.
- ನಂತರ ನೆನೆಸಿದ ಮೆಂತೆಯನ್ನು ತೆಂಗಿನತುರಿಯೊಂದಿಗೆ ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
- ಅರೆದ ಮೆಂತೆಯನ್ನು ಒಂದು ಬಟ್ಟಲಿಗೆ ಹಾಕಿ. ಮಜ್ಜಿಗೆ ಅಥವಾ ಮೊಸರನ್ನು ಹಾಕಿ ಕಲಸಿ.
- ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ. ನಾನು 1 ಕಪ್ ನಷ್ಟು ಸೇರಿಸುತ್ತೇನೆ.
- ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ. ಅಥವಾ ತೆಳ್ಳಗೆ ಮಾಡಿ ಕುಡಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ