Menthe soppu ricebath recipe in Kannada | ಮೆಂತೆ ಸೊಪ್ಪಿನ ರೈಸ್ ಬಾತ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 1 ಕಪ್ ಸೋನಾ ಮಸೂರಿ ಅಕ್ಕಿ
- ಒಂದು ಮಧ್ಯಮ ಗಾತ್ರದ ಮೆಂತೆ ಸೊಪ್ಪಿನ ಕಟ್ಟು
- 4 ಟೇಬಲ್ ಚಮಚ ಅಡುಗೆ ಎಣ್ಣೆ
- 1/2 ಚಮಚ ಸಾಸಿವೆ
- 1 ಟೀಸ್ಪೂನ್ ಉದ್ದಿನ ಬೇಳೆ
- 1 ಟೀಸ್ಪೂನ್ ಕಡಲೆಬೇಳೆ
- 4 - 5 ಕರಿಬೇವಿನ ಎಲೆ
- 1 ಸಣ್ಣದಾಗಿ ಹೆಚ್ಚಿದ ಈರುಳ್ಳಿ
- 2 ಸಣ್ಣದಾಗಿ ಹೆಚ್ಚಿದ ಮಧ್ಯಮ ಗಾತ್ರದ ಟೊಮ್ಯಾಟೊ
- 1/2 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
- 1/2 ನೆಲ್ಲಿಕಾಯಿ ಗಾತ್ರದ ಬೆಲ್ಲ
- 1/2 ಕಪ್ ತೆಂಗಿನ ತುರಿ
- 1/4 ಟೀಸ್ಪೂನ್ ಅರಶಿನ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
ಮಸಾಲೆ ಪುಡಿಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 2 - 4 ಕೆಂಪು ಮೆಣಸಿನಕಾಯಿ (ಮಧ್ಯಮ ಖಾರ)
- 2 ಟೀಸ್ಪೂನ್ ಉದ್ದಿನ ಬೇಳೆ
- 2 ಟೀಸ್ಪೂನ್ ಕಡಲೆಬೇಳೆ
- 4 ಟೀಸ್ಪೂನ್ ಕೊತ್ತಂಬರಿ ಬೀಜ
ಮೆಂತೆ ಸೊಪ್ಪಿನ ರೈಸ್ ಬಾತ್ ಮಾಡುವ ವಿಧಾನ:
- ಮೊದಲಿಗೆ ಉದುರು ಉದುರಾದ ಅನ್ನ ಮಾಡಿಟ್ಟು ಕೊಳ್ಳಿ.
- ಮೆಂತೆ ಸೊಪ್ಪನ್ನು ಆಯ್ದು, ತೊಳೆದು, ಕತ್ತರಿಸಿಟ್ಟು ಕೊಳ್ಳಿ.
- ಒಂದು ಬಾಣಲೆಯಲ್ಲಿ 2 - 4 ಕೆಂಪು ಮೆಣಸಿನಕಾಯಿ, 2 ಟೀಸ್ಪೂನ್ ಉದ್ದಿನ ಬೇಳೆ, 2 ಟೀಸ್ಪೂನ್ ಕಡಲೆಬೇಳೆ, 4 ಟೀಸ್ಪೂನ್ ಕೊತ್ತಂಬರಿ ಬೀಜವನ್ನು ಎಣ್ಣೆ ಹಾಕದೆ ಹುರಿಯಿರಿ.
- ಹುರಿದ ಎಲ್ಲ ಪದಾರ್ಥಗಳು ತಣ್ಣಗಾದ ಮೇಲೆ ಪುಡಿ ಮಾಡಿಟ್ಟು ಕೊಳ್ಳಿ.
- ನಂತರ 4 ಟೇಬಲ್ ಚಮಚ ಅಡುಗೆ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ತೆಗೆದುಕೊಂಡು ಬಿಸಿ ಮಾಡಿ.
- ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
- ಅದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ.
- ನಂತರ ಹೆಚ್ಚಿದ ಮೆಂತೆಸೊಪ್ಪು ಹಾಕಿ ಬಾಡಿಸಿ.
- ನಂತರ ಹೆಚ್ಚಿದ ಟೊಮೇಟೊ ಹಾಕಿ ಬಾಡಿಸಿ.
- ನಂತರ ಉಪ್ಪು, ಅರಶಿನ, ಬೆಲ್ಲ, ಹುಣಿಸೆರಸ ಮತ್ತು ಮಸಾಲೆ ಪುಡಿ ಹಾಕಿ. ಕಾಯಿ ತುರಿಯನ್ನೂ ಹಾಕಿ ಚೆನ್ನಾಗಿ ಮಗುಚಿ. ಸ್ಟವ್ ಆಫ್ ಮಾಡಿ.
- ಬೇಯಿಸಿಟ್ಟ ಅನ್ನ ಹಾಕಿ ಕಲಸಿ. ಬಿಸಿ ಬಿಸಿಯಾಗಿ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ