Saat or badusha recipe in Kannada | ಸಾಟ್ ಅಥವಾ ಬಾದುಷಾ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
5 ಕಪ್ ಮೈದಾ ಹಿಟ್ಟು
1 ಕಪ್ ತುಪ್ಪ
2 ಕಪ್ ಸಕ್ಕರೆ
ಚಿಟಿಕೆ ಏಲಕ್ಕಿ ಪುಡಿ
ಉಪ್ಪು ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ
ಸಾಟ್ ಅಥವಾ ಬಾದುಷಾ ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಉಪ್ಪು ಮತ್ತು ತುಪ್ಪ ಹಾಕಿ ಕಲಸಿ.
ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಮೃದುವಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.
ಈಗ ನಿಂಬೆ ಹಣ್ಣಿನ ಗಾತ್ರದ ಉಂಡೆ ತೆಗೆದು ಕೊಂಡು ಸ್ವಲ್ಪ ಚಪ್ಪಟೆಯಾಕಾರದ ಉಂಡೆ ಮಾಡಿಟ್ಟು ಕೊಳ್ಳಿ.
2 ಕಪ್ ಸಕ್ಕರೆಗೆ 1/2 ಕಪ್ ನೀರು ಹಾಕಿ ಒಂದೆಳೆ ಪಾಕ ಮಾಡಿಟ್ಟು ಕೊಳ್ಳಿ. ಸಕ್ಕರೆ ಪಾಕಕ್ಕೆ ಏಲಕ್ಕಿ ಪುಡಿ ಸೇರಿಸಿ.
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನಂತರ ಚಪ್ಪಟೆಯಾಕಾರದ ಉಂಡೆಯನ್ನು ಬಿಸಿಯಾದ ಎಣ್ಣೆಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ.
ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆದು ಬಿಸಿಯಾದ ಸಕ್ಕರೆ ಪಾಕದಲ್ಲಿ ಅದ್ದಿ ತೆಗೆಯಿರಿ ಅಥವಾ ಒಂದು ತಟ್ಟೆಯಲ್ಲಿಟ್ಟು ಮೇಲಿನಿಂದ ಸಕ್ಕರೆ ಪಾಕ ಸುರಿಯಿರಿ. ರುಚಿಯಾದ ಸಾಟ್ ಅಥವಾ ಬಾದುಷಾ ಸವಿಯಲು ಸಿದ್ದ.
Sabsige soppu akki rotti recipe in Kannada | ಸಬ್ಬಸಿಗೆ ಸೊಪ್ಪು ಅಕ್ಕಿ ರೊಟ್ಟಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
1.5 ಕಪ್ ಅಕ್ಕಿಹಿಟ್ಟು
2.5 ಕಪ್ ನೀರು (ಅಕ್ಕಿಹಿಟ್ಟಿನ ಗುಣಮಟ್ಟವನ್ನು ಅವಲಂಬಿಸಿ ಸ್ವಲ್ಪ ಹೆಚ್ಚು ಕಡಿಮೆ)
ಒಂದು ಸಣ್ಣ ಕಟ್ಟು ಸಬ್ಬಸಿಗೆ ಸೊಪ್ಪು
2-4 ಸಣ್ಣಗೆ ಹೆಚ್ಚಿದ ಹಸಿರುಮೆಣಸಿನ ಕಾಯಿ
2 ಸಣ್ಣಗೆ ಹೆಚ್ಚಿದ ಈರುಳ್ಳಿ
1/2 ಕಪ್ ತೆಂಗಿನ ತುರಿ
1 ಟೀಸ್ಪೂನ್ ಜೀರಿಗೆ
ಉಪ್ಪು ರುಚಿಗೆ ತಕ್ಕಷ್ಟು
1/4 ಕಪ್ ಅಡುಗೆ ಎಣ್ಣೆ
15x15cm ಗಾತ್ರದ ದಪ್ಪ ಪ್ಲಾಸ್ಟಿಕ್ ಹಾಳೆ / ಬಾಳೆ ಎಲೆ
ಸಬ್ಬಸಿಗೆ ಸೊಪ್ಪು ಅಕ್ಕಿ ರೊಟ್ಟಿ ಮಾಡುವ ವಿಧಾನ:
ಒಂದು ಬಾಣಲೆ ಅಥವಾ ಪಾತ್ರೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಸಿ. ನೀರು ಕುಡಿಯಲು ಪ್ರಾರಂಭಿಸಿದ ಕೂಡಲೇ ಅಕ್ಕಿ ಹಿಟ್ಟು ಹಾಕಿ ಸ್ಟೋವ್ ಆಫ್ ಮಾಡಿ.
ಈಗ ಕತ್ತರಿಸಿದ ಈರುಳ್ಳಿ , ಸಬ್ಬಸಿಗೆ ಸೊಪ್ಪು, ಹಸಿರು ಮೆಣಸಿನಕಾಯಿ ಮತ್ತು ತೆಂಗಿನ ತುರಿಯನ್ನು ಸೇರಿಸಿ ಚೆನ್ನಾಗಿ ಕಲಸಿ. ಬೇಕಾದಲ್ಲಿ ನೀರು ಅಥವಾ ಹಿಟ್ಟು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
ಒಂದು ಸಣ್ಣ ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದು ಕೊಳ್ಳಿ. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆಯನ್ನು ಹಚ್ಚಿ ಒಂದು ಟೆನ್ನಿಸ್ ಚಂಡಿನ ಗಾತ್ರದ ಹಿಟ್ಟು ಇರಿಸಿ.
ಈಗ ನಿಮ್ಮ ಬೆರಳುಗಳಿಗೆ ಎಣ್ಣೆ ಹಚ್ಚಿಕೊಂಡು, ಬೆರಳುಗಳಿಂದ ಮೆಲ್ಲನೆ ಒತ್ತುತ್ತಾ ವೃತ್ತಾಕಾರದ ಅಕ್ಕಿ ರೊಟ್ಟಿಯನ್ನು ತಟ್ಟಿ. ಆಗಾಗ್ಯೆ ಕೈ ಬೆರಳುಗಳಿಂದ ಎಣ್ಣೆ ಮುಟ್ಟುತ್ತಾ ರೊಟ್ಟಿ ತಟ್ಟುವುದರಿಂದ ಕೈಗೆ ಅಂಟುವುದಿಲ್ಲ.
ಎಚ್ಚರಿಕೆಯಿಂದ ಪ್ಲಾಸ್ಟಿಕ್ ಹಾಳೆಯಲ್ಲಿರುವ ಅಕ್ಕಿ ರೊಟ್ಟಿಯನ್ನು ಕೈಯಲ್ಲಿ ತೆಗೆದುಕೊಂಡು ಬಿಸಿ ತವಾ ಮೇಲೆ ಹಾಕಿ. ಈ ಹಂತದಲ್ಲಿ ನೀವು ಎಚ್ಚರಿಕೆಯಿಂದಿರಬೇಕು ಮತ್ತು ವೇಗವಾಗಿರಬೇಕು. ಇಲ್ಲವಾದಲ್ಲಿ ರೊಟ್ಟಿ ಹರಿದುಹೋಗಬಹುದು.
ಮೇಲಿನಿಂದ ಎಣ್ಣೆ ಹಾಕಿ, ಸುಮಾರು ಒಂದು ನಿಮಿಷದ ನಂತರ ರೊಟ್ಟಿಯನ್ನು ತಿರುವಿ ಹಾಕಿ. ಇನ್ನೊಂದು ಬದಿಯೂ ಕಾಯಿಸಿ. ಬೆಣ್ಣೆ ಅಥವಾ ಮೊಸರು ಅಥವಾ ಚಟ್ನಿಯೊಂದಿಗೆ ಬಡಿಸಿ.
Ennegayi recipe in Kannada | ಬದನೇಕಾಯಿ ಎಣ್ಣೆಗಾಯಿ ಮಾಡುವ ವಿಧಾನ
ಬದನೇಕಾಯಿ ಎಣ್ಣೆಗಾಯಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
5 - 6 ಸಣ್ಣ ಎಳೆ ಬದನೆಕಾಯಿ
1 ದೊಡ್ಡ ಈರುಳ್ಳಿ
1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
2 ಟೀಸ್ಪೂನ್ ಬೆಲ್ಲ
1/4 ಟೀಸ್ಪೂನ್ ಅರಿಶಿನ ಪುಡಿ
4 - 5 ಕರಿಬೇವಿನ
1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
1/4 ಟೀಸ್ಪೂನ್ ಸಾಸಿವೆ
4 ಟೇಬಲ್ ಚಮಚ ಅಡುಗೆ ಎಣ್ಣೆ (6 ಟೇಬಲ್ ಚಮಚ ನಾನ್-ಸ್ಟಿಕ್ ಪ್ಯಾನ್ ಅಲ್ಲವಾದಲ್ಲಿ)
ಉಪ್ಪು ರುಚಿಗೆ ತಕ್ಕಷ್ಟು
ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
2 ಟೀಸ್ಪೂನ್ ಎಳ್ಳು
2 ಟೇಬಲ್ ಚಮಚ ನೆಲಗಡಲೆ
3 - 6 ಒಣ ಮೆಣಸಿನಕಾಯಿ
2 ಟೀಸ್ಪೂನ್ ಕೊತ್ತಂಬರಿ ಬೀಜ
1 ಟೀಸ್ಪೂನ್ ಜೀರಿಗೆ
2 ಟೀಸ್ಪೂನ್ ಕಡಲೆಬೇಳೆ
1 ಟೀಸ್ಪೂನ್ ಉದ್ದಿನ ಬೇಳೆ
1/4 ಟೀಸ್ಪೂನ್ ಮೆಂತ್ಯ
2 ಟೀಸ್ಪೂನ್ ಹುರಿಗಡಲೆ
1/2 ಕಪ್ ತೆಂಗಿನ ತುರಿ
ಬದನೇಕಾಯಿ ಎಣ್ಣೆಗಾಯಿ ಮಾಡುವ ವಿಧಾನ:
ಬದನೇಕಾಯಿಯನ್ನು ತೊಳೆದು '+' ಆಕಾರದಲ್ಲಿ ಸೀಳಿರಿ. ಚೊಟ್ಟು ಅಥವಾ ತೊಟ್ಟಿನ ಭಾಗ ಹಾಗೆ ಇರಲಿ. ಹುಳ ಇದ್ದರೆ ಆ ಭಾಗ ತೆಗೆದು ಹಾಕಿ. ಸೀಳಿದ ಬದನೆಕಾಯಿಯನ್ನು ನೀರಿನಲ್ಲಿ ನೆನೆಸಿಡಿ.
ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕದೆ ಮೊದಲಿಗೆ ಎಳ್ಳನ್ನು ಹುರಿದು ತೆಗೆದಿಟ್ಟು ಕೊಳ್ಳಿ.
ಆಮೇಲೆ ನೆಲಗಡಲೆಯನ್ನು ಹುರಿದು ತೆಗೆದಿಟ್ಟು ಕೊಳ್ಳಿ.
ನಂತರ ಒಂದು ಚಮಚ ಎಣ್ಣೆ ಹಾಕಿ ಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಕಡಲೆಬೇಳೆ, ಉದ್ದಿನ ಬೇಳೆ ಮತ್ತು ಮೆಂತ್ಯವನ್ನು ಮಧ್ಯಮ ಉರಿಯಲ್ಲಿ ಬೇಳೆಗಳು ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ.
ಹುರಿದ ಎಳ್ಳು, ನೆಲಗಡಲೆ, ಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಕಡಲೆಬೇಳೆ, ಉದ್ದಿನ ಬೇಳೆ, ಮೆಂತ್ಯ, ಹುರಿಗಡಲೆ ಮತ್ತು ತೆಂಗಿನ ತುರಿಯನ್ನು ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ಅರೆದುಕೊಳ್ಳಿ.
ನಂತರ ಅದೇ ಬಾಣಲೆಗೆ ಉಳಿದ ಎಣ್ಣೆ ಹಾಕಿ ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಕತ್ತರಿಸಿದ ಈರುಳ್ಳಿ ಹಾಕಿ ಬಾಡಿಸಿ. ಅರಶಿನ ಪುಡಿ ಸೇರಿಸಿ.
ಈಗ ಬದನೇಕಾಯಿಯೊಳಗೆ ಅರೆದ ಮಸಾಲೆ ತುಂಬಿಸಿ, ಬಾಣಲೆಯಲ್ಲಿದ್ದ ಒಗ್ಗರಣೆಯಲ್ಲಿಟ್ಟು ನೀರು ಹಾಕದೆ ಬೇಯಿಸಿ. ಆಗಾಗ ಬದನೆಕಾಯಿಯನ್ನು ತಿರುವುತ್ತಾ ಇರಿ.
ಬದನೇಕಾಯಿ ಸ್ವಲ್ಪ ಮೆತ್ತಗಾದ ಕೂಡಲೇ ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಸೇರಿಸಿ ಬೇಯಿಸುವುದನ್ನು ಮುಂದುವರೆಸಿ.
ಬದನೇಕಾಯಿ ಸಂಪೂರ್ಣ ಮೆತ್ತಗಾದ ಮೇಲೆ ಉಳಿದ ಮಸಾಲೆ ಮತ್ತು ೧ ಕಪ್ ನೀರು ಸೇರಿಸಿ. ಒಮ್ಮೆ ಮಗುಚಿ, ಮುಚ್ಚಳ ಮುಚ್ಚಿ ೫ ನಿಮಿಷಗಳ ಕಾಲ ಬೇಯಿಸಿ.
ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಸ್ಟವ್ ಆಫ್ ಮಾಡಿ. ಚಪಾತಿ ಅಥವಾ ರೊಟ್ಟಿಯೊಂದಿಗೆ ಬಡಿಸಿ.
Moolangi parota recipe in Kannada | ಮೂಲಂಗಿ ಪರೋಟ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
ಗೋಧಿ ಹಿಟ್ಟು (8 ದೊಡ್ಡ ಚಪಾತಿಗಾಗುವಷ್ಟು)
2 ಮಧ್ಯಮ ಗಾತ್ರದ ಮೂಲಂಗಿ
1/4 ಟೀಸ್ಪೂನ್ ಗರಂ ಮಸಾಲಾ
1/4 ಟೀಸ್ಪೂನ್ ಓಮ ಅಥವಾ ಅಜವೈನ್
1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
1/4 ಟೀಸ್ಪೂನ್ ಅರಶಿನ ಪುಡಿ
1/2 ಚಮಚ ಜೀರಿಗೆ ಪುಡಿ
1/2 ಚಮಚ ಸಾಸಿವೆ (ಒಗ್ಗರಣೆಗೆ)
1/2 ಟೀಸ್ಪೂನ್ ಜೀರಿಗೆ (ಒಗ್ಗರಣೆಗೆ)
10 ಟೀಸ್ಪೂನ್ ಅಡುಗೆ ಎಣ್ಣೆ
ಉಪ್ಪು ರುಚಿಗೆ ತಕ್ಕಷ್ಟು
ಮೂಲಂಗಿ ಪರೋಟ ಮಾಡುವ ವಿಧಾನ:
ಮೂಲಂಗಿಯನ್ನು ತೊಳೆದು ತುರಿಯಿರಿ.
ಒಂದು ಬಾಣಲೆಗೆ 2 ಟೀಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ.
ಕಾದ ಎಣ್ಣೆಗೆ ಸಾಸಿವೆ ಮತ್ತು ಜೀರಿಗೆ ಹಾಕಿ.
ಸಾಸಿವೆ ಸಿಡಿದ ಕೂಡಲೇ ತುರಿದ ಮೂಲಂಗಿ ಹಾಕಿ ಒಂದು ನಿಮಿಷ ಮಧ್ಯಮ ಉರಿಯಲ್ಲಿ ಬಾಡಿಸಿ.
ನಂತರ ಅದಕ್ಕೆ ಉಪ್ಪು, ಅಚ್ಚ ಖಾರದ ಪುಡಿ, ಗರಂ ಮಸಾಲಾ, ಓಮ ಮತ್ತು ಜೀರಿಗೆ ಪುಡಿ ಹಾಕಿ ಕಲಸಿ.
ನಂತರ ಅದಕ್ಕೆ ಗೋಧಿ ಹಿಟ್ಟು ಹಾಕಿ. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ಕೊನೆಯಲ್ಲಿ 4 ಚಮಚ ಎಣ್ಣೆ ಹಾಕಿ, ಪುನಃ ಒಮ್ಮೆ ಕಲಸಿ ಒಂದು ಹತ್ತು ನಿಮಿಷ ಮುಚ್ಚಿಡಿ.
ಈಗ ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಗೋಧಿ ಹಿಟ್ಟು ಮುಟ್ಟಿಸಿಕೊಂಡು ಚಪಾತಿಯಂತೆ ವೃತ್ತಾಕಾರವಾಗಿ ಲಟ್ಟಿಸಿ.
ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ಪರೋಟವನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. ಖಾಯಿಸುವಾಗ ಎರಡೂ ಬದಿಯೂ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿ ಬಿಸಿಯಾಗಿರುವಾಗಲೇ ಮೊಸರು ಅಥವಾ ಬೆಣ್ಣೆ ಅಥವಾ ನಿಮ್ಮಿಷ್ಟದ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.
ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ಒಂದೆರಡು ಘಂಟೆ ನೀರಾರಲು ಬಿಡಿ. ನಂತರ ಅಕ್ಕಿಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಬಿಳಿ ಬಣ್ಣ ಬರುವವರೆಗೆ ಹುರಿದು, ಬಿಸಿ ಆರಿದ ಮೇಲೆ ನುಣ್ಣನೆ ಪುಡಿ ಮಾಡಿ.
ಉದ್ದಿನಬೇಳೆಯನ್ನು ತೊಳೆದು, ನೀರು ಬಗ್ಗಿಸಿ, ಒಂದೆರಡು ಘಂಟೆ ನೀರಾರಲು ಬಿಡಿ. ನಂತರ ಉದ್ದಿನಬೇಳೆಯನ್ನು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿದು, ಬಿಸಿ ಆರಿದ ಮೇಲೆ ನುಣ್ಣನೆ ಪುಡಿ ಮಾಡಿ. ಹಿಟ್ಟಿನ ಗಿರಣಿ ಅಥವಾ ಮಿಕ್ಸಿಯಲ್ಲೂ ಪುಡಿ ಮಾಡಬಹುದು.
ಅಕ್ಕಿ ಹಿಟ್ಟು ಮತ್ತು ಉದ್ದಿನ ಹಿಟ್ಟನ್ನು ಸಾರಣಿಸಿ ಕೊಳ್ಳಿ (ಜರಡಿ).
ಬೆಣ್ಣೆ, ಜಜ್ಜಿದ ಜೀರಿಗೆ ಮತ್ತು ಉಪ್ಪು ಹಾಕಿ.
ಮಿಕ್ಸಿ ಜಾರಿಗೆ ತೆಂಗಿನ ತುರಿ, 1/4 ಚಮಚ ಜೀರಿಗೆ ಹಾಕಿ ಅವಶ್ಯವಿದ್ದಷ್ಟು ನೀರು ಉಪಯೋಗಿಸಿ ನುಣ್ಣನೆ ಅರೆಯಿರಿ.
ಅರೆದ ಕಾಯಿಯನ್ನು ಬೆಣ್ಣೆ ಮತ್ತು ಜೀರಿಗೆ ಹಾಕಿದ ಹಿಟ್ಟಿಗೆ ಹಾಕಿ ಗಟ್ಟಿ ಆದರೆ ಮೃದುವಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ಚಕ್ಕುಲಿ ಒತ್ತಲು ಆಗುವಷ್ಟು ಮೆತ್ತಗಿದ್ದರೆ ಸಾಕು.
ಪ್ಲಾಸ್ಟಿಕ್ ಹಾಳೆ ಮೇಲೆ ಚಕ್ಕುಲಿ ಅಚ್ಚನ್ನು ಉಪಯೋಗಿಸಿ ಚಕ್ಕುಲಿಯನ್ನು ಒತ್ತಿ.
ಎಣ್ಣೆ ಬಿಸಿ ಮಾಡಿ ಒತ್ತಿದ ಚಕ್ಕುಲಿಯನ್ನು ಮಧ್ಯಮ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ.