ಪಾನೀಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪಾನೀಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಮೇ 15, 2023

Badam milk recipe in Kannada | ಬಾದಾಮ್ ಮಿಲ್ಕ್ ಮಾಡುವ ವಿಧಾನ

 

Badam milk recipe in Kannada

Badam milk recipe in Kannada | ಬಾದಾಮ್ ಮಿಲ್ಕ್ ಮಾಡುವ ವಿಧಾನ 


ಬಾದಾಮ್ ಮಿಲ್ಕ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. ಸುಮಾರು 20 ಬಾದಾಮಿ
  2. 2 ಏಲಕ್ಕಿ
  3. ದೊಡ್ಡ ಚಿಟಿಕೆ ಕೇಸರಿ
  4. 1 ಕಪ್ ಹಾಲು
  5. 1/4 ಕಪ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
  6. 1 ಕಪ್ ನೀರು + ಅರೆಯಲು ಬೇಕಾದ ನೀರು 
  7. ಕಾಮಕಸ್ತೂರಿ ಬೀಜ (ಬೇಕಾದಲ್ಲಿ)

ಬಾದಾಮ್ ಮಿಲ್ಕ್ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಬಾದಾಮಿ ಹಾಕಿ ನೆನೆಸಿ. ಕುದಿಯುವ ನೀರಿನಲ್ಲಿ ನೆನೆಸಿದರೆ ಬೇಗ ನೆನೆಯುವುದು. 
  2. ನೆನೆದ ನಂತರ ಸಿಪ್ಪೆ ತೆಗೆಯಿರಿ. 
  3. ಒಂದು ಮಿಕ್ಸಿಜಾರಿನಲ್ಲಿ ಸಿಪ್ಪೆ ತೆಗೆದ ಬಾದಾಮಿ ಹಾಕಿ, ಏಲಕ್ಕಿ ಮತ್ತು ಕೇಸರಿ ಹಾಕಿ. 
  4. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  5. ಒಂದು ಪಾತ್ರೆಯಲ್ಲಿ ಹಾಲು ತೆಗೆದುಕೊಳ್ಳಿ.
  6. ಅರೆದ ಬಾದಾಮಿಯನ್ನು ಸೇರಿಸಿ. 
  7. ನೀರುಮತ್ತು ಸಕ್ಕರೆ ಸೇರಿಸಿ. 
  8. ಆಗಾಗ್ಯೆ ಮಗುಚುತ್ತಾ ಚೆನ್ನಾಗಿ ಒಂದೆರಡು ನಿಮಿಷ ಕುದಿಸಿ. 
  9. ಬಿಸಿ ಆರಿದ ಮೇಲೆ ಕುಡಿಯಿರಿ. 
  10. ಬೇಕಾದಲ್ಲಿ ನೆನೆಸಿದ ಕಾಮಕಸ್ತೂರಿ ಬೀಜವನ್ನು ಸೇರಿಸಬಹುದು. ಮತ್ತು ಬೇಕಾದಲ್ಲಿ ಫ್ರಿಡ್ಜ್ ನಲ್ಲಿಟ್ಟು ತಣ್ಣಗೆ ಮಾಡಿ ಕುಡಿಯಬಹುದು. 

ಶುಕ್ರವಾರ, ಜುಲೈ 8, 2022

Hotel style tea recipe in Kannada | ಹೋಟೆಲ್ ಸ್ಟೈಲ್ ಟೀ ಮಾಡುವ ವಿಧಾನ

 

Hotel style tea recipe in Kannada

Hotel style tea recipe | ಹೋಟೆಲ್ ಸ್ಟೈಲ್ ಟೀ ಮಾಡುವ ವಿಧಾನ

ಹೋಟೆಲ್ ಸ್ಟೈಲ್ ಟೀ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 150 ಎಂಎಲ್ )

  1. 1 ಕಪ್ ಹಾಲು
  2. 1 ಕಪ್ ನೀರು
  3. 2 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  4. 1 - 2 ಟೀಸ್ಪೂನ್ ಟೀ ಪೌಡರ್
  5. 2 ಮಾರಿ ಬಿಸ್ಕತ್ತು

ಹೋಟೆಲ್ ಸ್ಟೈಲ್ ಟೀ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಹಾಲು ತೆಗೆದುಕೊಳ್ಳಿ.
  2. ನೀರು ಸೇರಿಸಿ. 
  3. ಸಕ್ಕರೆ ಸೇರಿಸಿ. 
  4. ಟೀ ಪೌಡರ್ ಸೇರಿಸಿ, ಕುದಿಯಲು ಇಡಿ. 
  5. ಬಿಸ್ಕತ್ತನ್ನು ಮಿಕ್ಸಿಯಲ್ಲಿ ಪುಡಿಮಾಡಿ. 
  6. 1 - 2 ಸ್ಪೂನ್ ಬಿಸ್ಕತ್ತು ಪುಡಿಯನ್ನು ಕುದಿಯಲು ಇಟ್ಟ ಟೀ ಗೆ ಸೇರಿಸಿ. 
  7. ಚೆನ್ನಾಗಿ ಮಗುಚಿ ಕುದಿಸಿ. 1 - 2 ನಿಮಿಷ ಕುದಿಸುವುದನ್ನು ಮುಂದುವರೆಸಿ. 
  8. ಸ್ಟವ್ ಆಫ್ ಮಾಡಿ.
  9. ಟೀ ಯನ್ನು ಸೋಸಿ, ಚೆನ್ನಾಗಿ ಎತ್ತಿ ಹಾಕಿ, ಕುಡಿಯಲು ನೀಡಿ.


ಮಂಗಳವಾರ, ಆಗಸ್ಟ್ 3, 2021

Mumbai masala majjige recipe in Kannada | ಮುಂಬೈ ಮಸಾಲೆ ಮಜ್ಜಿಗೆ ಮಾಡುವ ವಿಧಾನ

 

Mumbai masala majjige recipe in Kannada | ಮುಂಬೈ ಮಸಾಲೆ ಮಜ್ಜಿಗೆ ಮಾಡುವ ವಿಧಾನ

ಮುಂಬೈ ಮಸಾಲೆ ಮಜ್ಜಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೊಸರು (ಅಥವಾ ಮಜ್ಜಿಗೆ)
  2. 1 ಕಪ್ ನೀರು (ಜಾಸ್ತಿ ಬೇಕಾದಲ್ಲಿ ಹಾಕಬಹುದು)
  3. 1/2 ಟೀಸ್ಪೂನ್ ಶುಂಠಿ
  4. 1 ಹಸಿಮೆಣಸಿನಕಾಯಿ
  5. 1/4 ಟೀಸ್ಪೂನ್ ಜೀರಿಗೆ ಪುಡಿ
  6. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  7. 4 - 5 ಪುದಿನ ಎಲೆ 
  8. 1/4 ಟೀಸ್ಪೂನ್ ಚಾಟ್ ಮಸಾಲಾ 
  9. 1/4 ಟೀಸ್ಪೂನ್ ಸೈನ್ದವ ಲವಣ (ಬ್ಲ್ಯಾಕ್ ಸಾಲ್ಟ್)
  10. ಉಪ್ಪು ರುಚಿಗೆ ತಕ್ಕಂತೆ 

ಮುಂಬೈ ಮಸಾಲೆ ಮಜ್ಜಿಗೆ ಮಾಡುವ ವಿಧಾನ:

  1. ಮಿಕ್ಸಿ ಜಾರಿನಲ್ಲಿ ಮೊಸರು ಮತ್ತು ನೀರು ತೆಗೆದುಕೊಳ್ಳಿ. 
  2. ಅದಕ್ಕೆ ಶುಂಠಿ, ಹಸಿಮೆಣಸಿನಕಾಯಿ, ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ಪುದಿನಾ ಎಲೆ, ಚಾಟ್ ಮಸಾಲಾ, ಸೈನ್ದವ ಲವಣ ಮತ್ತು ಉಪ್ಪು ಸೇರಿಸಿ. 
  3. ಸ್ವಲ್ಪ ಹೊತ್ತು ಮಿಕ್ಸಿ ಮಾಡಿ. 
  4. ಸವಿದು ಆನಂದಿಸಿ. 


ಸೋಮವಾರ, ಮೇ 3, 2021

Ragi halu recipe in Kannada | ರಾಗಿ ಹಾಲು ಮಾಡುವ ವಿಧಾನ

 

Ragi halu recipe in Kannada

Ragi halu recipe in Kannada | ರಾಗಿ ಹಾಲು ಮಾಡುವ ವಿಧಾನ

ರಾಗಿ ಹಾಲು ವಿಡಿಯೋ

ಬೇಕಾಗುವ ಪದಾರ್ಥಗಳು (ವಿಧಾನ 1): (ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ರಾಗಿ
  2. 4 ಬಾದಾಮಿ
  3. 1/4 ಕಪ್ ಪುಡಿ ಮಾಡಿದ ಬೆಲ್ಲ (ಅಥವಾ ರುಚಿಗೆ ತಕ್ಕಂತೆ)
  4. ಸುಮಾರು 2 ಕಪ್ ನೀರು (ಅರೆಯಲು ಬೇಕಾದ ನೀರು ಸೇರಿಸಿ)
  5. ಎರಡು ಏಲಕ್ಕಿ

ಬೇಕಾಗುವ ಪದಾರ್ಥಗಳು (ವಿಧಾನ 2): (ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ರಾಗಿ
  2. 1/4 ಕಪ್ ಹಸಿ ತೆಂಗಿನತುರಿ
  3. 1/4 ಕಪ್ ಪುಡಿ ಮಾಡಿದ ಬೆಲ್ಲ (ಅಥವಾ ರುಚಿಗೆ ತಕ್ಕಂತೆ)
  4. ಸುಮಾರು 2 ಕಪ್ ನೀರು (ಅರೆಯಲು ಬೇಕಾದ ನೀರು ಸೇರಿಸಿ)
  5. ಎರಡು ಏಲಕ್ಕಿ

ಎಳ್ಳು ಜ್ಯೂಸು ಮಾಡುವ ವಿಧಾನ 1:

  1. ಒಂದು ಪಾತ್ರೆಯಲ್ಲಿ ರಾಗಿ ಮತ್ತು ಬಾದಾಮಿ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ.
  2. ನಂತ್ರ ಎರಡು ಘಂಟೆ ನೆನೆಸಿ. 
  3. ನೆನೆಸಿದ ನಂತ್ರ ನೀರು ಬಸಿದು, ಮಿಕ್ಸಿ ಜಾರಿಗೆ ಹಾಕಿ. 
  4. ಬೆಲ್ಲ ಮತ್ತು ಏಲಕ್ಕಿಯನ್ನು ಸೇರಿಸಿ.
  5. ಅಗತ್ಯವಿರುವಷ್ಟು ನೀರು ಬಳಸಿಕೊಂಡು ನಯವಾಗಿ ಅರೆಯಿರಿ.
  6. ಅರೆದ ಮಿಶ್ರಣವನ್ನು ಸೋಸಿ. 
  7. ಪುನಃ ಒಮ್ಮೆ ಅರೆದು ಸೋಸಿ. 
  8. ರುಚಿಕರ ಮತ್ತು ಆರೋಗ್ಯಕರ ಹಾಲು ಅಥವಾ ಜ್ಯೂಸನ್ನು ಸವಿಯಿರಿ.

ಎಳ್ಳು ಜ್ಯೂಸು ಮಾಡುವ ವಿಧಾನ 2:

  1. ಒಂದು ಪಾತ್ರೆಯಲ್ಲಿ ರಾಗಿ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ.
  2. ನಂತ್ರ ಒಂದು ಪ್ಲೇಟ್ ಅಥವಾ ಬಟ್ಟೆ ಮೇಲೆ ಹರಡಿ, ಒಣಗಲು ಬಿಡಿ. 
  3. ನೀರು ಒಣಗಿದ ನಂತರ ಬಾಣಲೆಗೆ ಹಾಕಿ ಮಧ್ಯಮ ಉರಿಯಲ್ಲಿ ಹುರಿಯಿರಿ. 
  4. ಬಿಸಿ ಆರಿದ ಮೇಲೆ ಮಿಕ್ಸಿ ಜಾರಿಗೆ ಹಾಕಿ, ಏಲಕ್ಕಿ ಸೇರಿಸಿ ಪುಡಿ ಮಾಡಿ. 
  5. ತೆಂಗಿನತುರಿ ಮತ್ತು ಬೆಲ್ಲ ಸೇರಿಸಿ.
  6. ಅಗತ್ಯವಿರುವಷ್ಟು ನೀರು ಬಳಸಿಕೊಂಡು ನಯವಾಗಿ ಅರೆಯಿರಿ.
  7. ಅರೆದ ಮಿಶ್ರಣವನ್ನು ಸೋಸಿ. 
  8. ರುಚಿಕರ ಮತ್ತು ಆರೋಗ್ಯಕರ ಹಾಲು ಅಥವಾ ಜ್ಯೂಸನ್ನು ಸವಿಯಿರಿ.

ಬುಧವಾರ, ಏಪ್ರಿಲ್ 14, 2021

Ugadi pachadi recipe in Kannada | ಯುಗಾದಿ ಪಚಡಿ ಮಾಡುವ ವಿಧಾನ

 

Ugadi pachadi recipe in Kannada

Ugadi pachadi recipe in Kannada | ಯುಗಾದಿ ಪಚಡಿ ಮಾಡುವ ವಿಧಾನ 

ಯುಗಾದಿ ಪಚಡಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 3/4 ಕಪ್ ನೀರು
  2. 1 ಟೀಸ್ಪೂನ್ ಹುಣಸೆಹಣ್ಣಿನ ರಸ 
  3. 2 ಟೇಬಲ್ ಸ್ಪೂನ್ ಬೆಲ್ಲ 
  4. 1 ಟೇಬಲ್ ಸ್ಪೂನ್ ಸಣ್ಣಗೆ ಕತ್ತರಿಸಿದ ಮಾವಿನಕಾಯಿ ಚೂರುಗಳು 
  5. 1 ಟೇಬಲ್ ಸ್ಪೂನ್ ಬೇವಿನ ಹೂವು 
  6. ದೊಡ್ಡ ಚಿಟಿಕೆ ಕಾಳುಮೆಣಸಿನಪುಡಿ
  7. ದೊಡ್ಡ ಚಿಟಿಕೆ ಉಪ್ಪು (ಅಥವಾ ರುಚಿಗೆ ತಕ್ಕಷ್ಟು)

ಯುಗಾದಿ ಪಚಡಿ ಮಾಡುವ ವಿಧಾನ:

  1. ಒಂದು ಬೌಲ್ ನಲ್ಲಿ ನೀರು ತೆಗೆದುಕೊಳ್ಳಿ.
  2. ಅದಕ್ಕೆ ಹುಣಸೆಹಣ್ಣಿನ ರಸ, ಬೆಲ್ಲ, ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿದ ಮಾವಿನಕಾಯಿ ಚೂರುಗಳು, ಬೇವಿನ ಹೂವು, ಕಾಳುಮೆಣಸಿನಪುಡಿ ಮತ್ತು ಉಪ್ಪು ಸೇರಿಸಿ. 
  3. ಚೆನ್ನಾಗಿ ಕಲಕಿ ಸವಿದು ಆನಂದಿಸಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಮೇ 5, 2020

Lemon juice powder recipe in Kannada | ನಿಂಬೆಹಣ್ಣು ಜ್ಯೂಸು ಪುಡಿ ಮಾಡುವ ವಿಧಾನ

Lemon juice powder recipe in Kannada
Lemon juice powder recipe in Kannada | ನಿಂಬೆಹಣ್ಣು ಜ್ಯೂಸು ಪುಡಿ ಮಾಡುವ ವಿಧಾನ

ನಿಂಬೆಹಣ್ಣು ಜ್ಯೂಸು ಪುಡಿ ವಿಡಿಯೋ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)

  1. 4 - 5 ನಿಂಬೆಹಣ್ಣು
  2. 1 ಕಪ್ ಸಕ್ಕರೆ (ಅಥವಾ ರುಚಿಗೆ ತಕ್ಕಂತೆ)
  3. ದೊಡ್ಡ ಚಿಟಿಕೆ ಉಪ್ಪು
  4. 1/2 ಚಮಚ ಸಣ್ಣಗೆ ಕತ್ತರಿಸಿದ ಶುಂಠಿ

ನಿಂಬೆಹಣ್ಣು ಜ್ಯೂಸು ಪುಡಿ ಮಾಡುವ ವಿಧಾನ:

  1. 4 - 5 ನಿಂಬೆಹಣ್ಣು ತೆಗೆದುಕೊಂಡು ಚೆನ್ನಾಗಿ ಒತ್ತಿ ತಿಕ್ಕಿ. ರಸ ತೆಗೆಯಲು ಸುಲಭವಾಗುವುದು. 
  2. ನಿಂಬೆಹಣ್ಣಿನ ರಸ ತೆಗೆಯಿರಿ.
  3. ರಸವನ್ನು ಅಳತೆ ಮಾಡಿ ಒಂದು ಅಗಲವಾದ ತಟ್ಟೆಗೆ ಹಾಕಿ. 
  4.  ರಸದ ನಾಲ್ಕರಷ್ಟು ಸಕ್ಕರೆ ಸೇರಿಸಿ (ಒಂದು ಅಳತೆ ರಸಕ್ಕೆ ನಾಲ್ಕು ಅಳತೆ ಸಕ್ಕರೆ)
  5. ಬೇಕಾದಲ್ಲಿ ಉಪ್ಪು ಮತ್ತು ಶುಂಠಿ ಸೇರಿಸಿ. ಏಲಕ್ಕಿ ಅಥವಾ ನಿಮ್ಮಿಷ್ಟದ ಬೇರೆ ಮಸಾಲೆಯನ್ನು ಸೇರಿಸಬಹುದು.  
  6. ಒಮ್ಮೆ ಕಲಸಿ, ಫ್ಯಾನ್ ಕೆಳಗೆ ಅಥವಾ ಹಾಗೆ ಒಣಗಲು ಬಿಡಿ. ಬಿಸಿಲಿಗೆ ಇಡುವುದು ಬೇಡ. 
  7. ದಿನಕ್ಕೊಮ್ಮೆ ಮಗುಚಿ, ಪುನಃ ಒಣಗಲು ಬಿಡಿ.  
  8. 3 - 4 ದಿನಗಳಲ್ಲಿ ಒಣಗುವುದು. 
  9. ಸಂಪೂರ್ಣ ಒಣಗಿದ ಮೇಲೆ, ಮಿಕ್ಸಿಯಲ್ಲಿ ಪುಡಿ ಮಾಡಿ. 
  10. ಡಬ್ಬದಲ್ಲಿ ಹಾಕಿ ಎತ್ತಿಡಿ. ನಿಂಬೆ ರಸಕ್ಕೆ ಸಕ್ಕರೆ ಪುಡಿ ಸೇರಿಸಿ, ಪೇಸ್ಟ್ ನಂತೆ ಮಾಡಿಯೂ ಇಡಬಹುದು. 
  11. ಜ್ಯೂಸು ಮಾಡಲು ಅಗತ್ಯವಿದ್ದಷ್ಟು ಪುಡಿಯನ್ನು ನೀರಿನಲ್ಲಿ ಸೇರಿಸಿ, ಕುಡಿಯಿರಿ. 

ಮಂಗಳವಾರ, ಏಪ್ರಿಲ್ 28, 2020

Frooti juice recipe in Kannada | ಫ್ರೂಟಿ, ಮಾಜ ಜ್ಯೂಸು ಮಾಡುವ ವಿಧಾನ

Frooti juice recipe in Kannada

Frooti juice recipe in Kannada | ಫ್ರೂಟಿ, ಮಾಜ ಜ್ಯೂಸು ಮಾಡುವ ವಿಧಾನ

ಫ್ರೂಟಿ, ಮಾಜ ಜ್ಯೂಸು ವಿಡಿಯೋ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)

  1. 2 ಕಪ್ ಕತ್ತರಿಸಿದ ಮಾವಿನಹಣ್ಣು
  2. 1/4 ಕಪ್ ಕತ್ತರಿಸಿದ ಮಾವಿನಕಾಯಿ
  3. 1/2 ಕಪ್ ಸಕ್ಕರೆ (ಅಥವಾ ರುಚಿಗೆ ತಕ್ಕಂತೆ)
  4. ಅಗತ್ಯವಿದ್ದಷ್ಟು ನೀರು

ಫ್ರೂಟಿ, ಮಾಜ ಜ್ಯೂಸು ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಕತ್ತರಿಸಿದ ಮಾವಿನ ಹಣ್ಣು ಮತ್ತು ಮಾವಿನಕಾಯಿಯನ್ನು ತೆಗೆದುಕೊಳ್ಳಿ.
  2. ಅದಕ್ಕೆ ಸಕ್ಕರೆ ಸೇರಿಸಿ.  
  3. ಮುಚ್ಚುವಷ್ಟು ನೀರು ಸೇರಿಸಿ, ಕುದಿಸಿ. 
  4. ಮುಚ್ಚಳ ಮುಚ್ಚಿ ಮಾವಿನಕಾಯಿ ಮೆತ್ತಗಾಗುವವರೆಗೆ ಬೇಯಿಸಿ.
  5. ಸ್ಟವ್ ಆಫ್ ಮಾಡಿ. ಬಿಸಿ ಕಡಿಮೆ ಆದ ಮೇಲೆ, ನೀರನ್ನು ಬಗ್ಗಿಸಿ ತೆಗೆಯಿರಿ.  
  6. ಬೇಯಿಸಿದ ಮಾವಿನ ಚೂರುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ. 
  7. ದೊಡ್ಡ ಜರಡಿಯ ಸಹಾಯದಿಂದ ಸೋಸಿ, ಬಗ್ಗಿಸಿಟ್ಟ ನೀರಿಗೆ ಸೇರಿಸಿ. ಸೋಸುವಾಗ ಚಮಚದ ಸಹಾಯ ಮತ್ತು ಸ್ವಲ್ಪ ನೀರು ಸೇರಿಸಿದಲ್ಲಿ ಸುಲಭವಾಗುವುದು. 
  8. ಚೆನ್ನಾಗಿ ಮಗುಚಿ, ಸಕ್ಕರೆ ಮತ್ತು ನೀರನ್ನು ಹೊಂದಿಸಿ. 
  9. ತಣ್ಣಗೆ ಮಾಡಿ ಕುಡಿಯಿರಿ. ಫ್ರಿಡ್ಜ್ ನಲ್ಲಿ ಒಂದು ತಿಂಗಳು ಇತ್ತು ಕುಡಿಯಬಹುದು. 

ಗುರುವಾರ, ಫೆಬ್ರವರಿ 13, 2020

Gasagase haalu recipe in Kannada | ಗಸಗಸೆ ಹಾಲು ಮಾಡುವ ವಿಧಾನ

Gasagase haalu recipe in Kannada

Gasagase haalu recipe in Kannada | ಗಸಗಸೆ ಹಾಲು ಮಾಡುವ ವಿಧಾನ


ಗಸಗಸೆ ಹಾಲಿನ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಟೇಬಲ್ ಚಮಚ ಗಸಗಸೆ
  2. 10 - 12 ಬಾದಾಮಿ
  3. ಒಂದು ಏಲಕ್ಕಿ
  4. 1/4 ಕಪ್ ತೆಂಗಿನತುರಿ
  5. 2 ಟೇಬಲ್ ಚಮಚ ಬೆಲ್ಲ
  6. 2 ಕಪ್ ನೀರು

ಗಸಗಸೆ ಹಾಲು ಮಾಡುವ ವಿಧಾನ:

  1. ಗಸಗಸೆ ಮತ್ತು ಬಾದಾಮಿಯನ್ನು 4 - 5 ಘಂಟೆಗಳ ಕಾಲ ನೆನೆಸಿಡಿ.
  2. ನೆನೆಸಿ ಆದ ಮೇಲೆ ಬಾದಾಮಿ ಸಿಪ್ಪೆ ತೆಗೆಯಿರಿ. ಬಾದಾಮಿ ನೆನೆಸಿದ ನೀರು ಉಪಯೋಗಿಸುವುದು ಬೇಡ. ಗಸಗಸೆ ನೆನೆಸಿದ ನೀರು ಬಳಸಬಹುದು. 
  3. ಸಿಪ್ಪೆ ತೆಗೆದ ಬಾದಾಮಿ ಮತ್ತು ನೆನೆಸಿದ ಗಸಗಸೆಯನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. 
  4. ಏಲಕ್ಕಿ ಸೇರಿಸಿ. 
  5. ತೆಂಗಿನತುರಿ ಸೇರಿಸಿ. 
  6. ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ. ಬೆಲ್ಲದ ಬದಲು ಬೇರೆ ಸಿಹಿ ಪದಾರ್ಥ ಸೇರಿಸಬಹುದು. 
  7. ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣಗೆ ಅರೆಯಿರಿ. 
  8. ಶೋಧಿಸಿ, ಉಳಿದಿದ್ದನ್ನು ಪುನಃ ಅರೆಯಿರಿ, ಪುನಃ ಶೋಧಿಸಿ. 
  9. ಅಗತ್ಯವಿದ್ದಷ್ಟು ನೀರು ಸೇರಿಸಿ. ನಾನು ಸುಮಾರು ಎರಡು ಕಪ್ ನೀರು ಸೇರಿಸಿದ್ದೇನೆ.
  10. ನಂತ್ರ ಕುಡಿದು ಆನಂದಿಸಿ. ಕುದಿಸುವ ಅವಶ್ಯಕತೆ ಇಲ್ಲ. 


ಮಂಗಳವಾರ, ಜನವರಿ 28, 2020

Golden milk recipe in Kannada | ಗೋಲ್ಡನ್ ಮಿಲ್ಕ್ ಮಾಡುವ ವಿಧಾನ

Golden milk recipe in Kannada

Golden milk recipe in Kannada | ಗೋಲ್ಡನ್ ಮಿಲ್ಕ್ ಮಾಡುವ ವಿಧಾನ

ಗೋಲ್ಡನ್ ಮಿಲ್ಕ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 150 ಎಂಎಲ್ )

  1. 1 ಕಪ್ ಹಾಲು
  2. 0.25 ಕಪ್ ನೀರು (ಬೇಕಾದಲ್ಲಿ)
  3. 1/2 ಚಮಚ ಅರಿಶಿನ
  4. 1 ಚಮಚ ಮೇಪಲ್ ಸಿರಪ್ ಅಥವಾ ಜೇನುತುಪ್ಪ
  5. 7 - 8 ಕರಿಮೆಣಸು
  6. ಒಂದು ಸಣ್ಣ ಚೂರು ಶುಂಠಿ
  7. ಅರ್ಧ ಬೆರಳುದ್ದ ಚಕ್ಕೆ

ಗೋಲ್ಡನ್ ಮಿಲ್ಕ್ ಮಾಡುವ ವಿಧಾನ:

  1. ಕರಿಮೆಣಸು, ಚಕ್ಕೆ ಮತ್ತು ಶುಂಠಿಯನ್ನು ಕುಟ್ಟಾಣಿಯಲ್ಲಿ ಜಜ್ಜಿಕೊಳ್ಳಿ.
  2. ಜಜ್ಜಿದ ಮಸಾಲೆಗಳನ್ನು 1 ಕಪ್ ಹಾಲಿನೊಂದಿಗೆ ಒಂದು ಪಾತ್ರೆಯಲ್ಲಿ ಹಾಕಿ. ಬೇಕಾದಲ್ಲಿ ಸ್ವಲ್ಪ ನೀರು ಸೇರಿಸಬಹುದು.  
  3. ಆಮೇಲೆ ಅರಿಶಿನ ಸೇರಿಸಿ. 
  4. ಹಾಗೆ ಮೇಪಲ್ ಸಿರಪ್ ಸೇರಿಸಿ. ಜೇನುತುಪ್ಪ ಸೇರಿಸುವುದಾದಲ್ಲಿ ಕೊನೆಯಲ್ಲಿ ಸೇರಿಸಬೇಕು. 
  5. ಚೆನ್ನಾಗಿ ಕಲಕಿ, 5 ನಿಮಿಷಗಳ ಕಾಲ ಕುದಿಸಿ.
  6. ಸೋಸಿ ಕುಡಿಯಲು ನೀಡಿ. ಜೇನುತುಪ್ಪ ಸೇರಿಸುವುದಾದರೆ ಈಗ ಸೇರಿಸಿ. 



ಬುಧವಾರ, ಮಾರ್ಚ್ 27, 2019

Nimbehannu and kamakasthuri seeds juice recipe in Kannada | ನಿಂಬೆಹಣ್ಣು ಮತ್ತು ಕಾಮಕಸ್ತುರಿ ಬೀಜ ಜ್ಯೂಸು

Nimbehannu and kamakasthuri seeds juice recipe in Kannada

Nimbehannu and kamakasthuri seeds juice recipe in Kannada | ನಿಂಬೆಹಣ್ಣು ಮತ್ತು ಕಾಮಕಸ್ತುರಿ ಬೀಜ ಜ್ಯೂಸು ಮಾಡುವ ವಿಧಾನ 



ಹೆಸರುಕಾಳು ಜ್ಯೂಸು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ನಿಂಬೆಹಣ್ಣು 
  2. 2 ಟೇಬಲ್ ಚಮಚ ಕಾಮಕಸ್ತುರಿ ಬೀಜ ಅಥವಾ ಸಬ್ಜ ಬೀಜ
  3. 1/2 ಕಪ್ ಸಕ್ಕರೆ ಅಥವಾ ಬೆಲ್ಲ 
  4. ಅಗತ್ಯವಿದ್ದಷ್ಟು ನೀರು
  5. ಐಸ್ ಕ್ಯೂಬ್ಸ್

ಬೇಕಾಗುವ ಪದಾರ್ಥಗಳು (ಬೇಕಾದಲ್ಲಿ ಉಪಯೋಗಿಸಿ):

  1. 1 ಏಲಕ್ಕಿ
  2. ಸ್ವಲ್ಪ ಕಿತ್ತಳೆ ಹಣ್ಣಿನ ರಸ
  3. ಜಜ್ಜಿದ ಶುಂಠಿ ಮತ್ತು ಪುದಿನ 
  4. ಸ್ವಲ್ಪ ಅನಾನಸ್ ಹಣ್ಣಿನ ರಸ

ನಿಂಬೆಹಣ್ಣು ಮತ್ತು ಕಾಮಕಸ್ತುರಿ ಬೀಜ ಜ್ಯೂಸು ಮಾಡುವ ವಿಧಾನ:

  1. 1/2 ಕಪ್ ಸಕ್ಕರೆ (ಅಥವಾ ಬೆಲ್ಲ) ಮತ್ತು 1/2 ಕಪ್ ನೀರನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. 
  2. ಸಕ್ಕರೆ ಅಥವಾ ಬೆಲ್ಲ ಕರಗುವವರೆಗೆ ಬಿಸಿ ಮಾಡಿ. ಸ್ಟವ್ ಆಫ್ ಮಾಡಿ, ಬಿಸಿಆರಲು ಬಿಡಿ. 
  3. ಒಂದು ಬಟ್ಟಲಿನಲ್ಲಿ ಕಾಮಕಸ್ತುರಿ ಬೀಜವನ್ನು ಅರ್ಧ ಕಪ್ ನೀರಿನಲ್ಲಿ ಹತ್ತು ನಿಮಿಷ ನೆನೆಸಿಡಿ. 
  4. ಒಂದು ಬಾಟಲಿ ಅಥವಾ ಮುಚ್ಚಳ ಗಟ್ಟಿ ಇರುವ ಪಾತ್ರೆಯಲ್ಲಿ, ನೆನೆಸಿದ ಕಾಮಕಸ್ತುರಿ ಬೀಜ, ಸಕ್ಕರೆ ನೀರು, ನಿಂಬೆಹಣ್ಣಿನ ರಸ, ಅರ್ಧ ಕಪ್ ಐಸ್ ಕ್ಯೂಬ್ಸ್ ಮತ್ತು ಅರ್ಧ ಕಪ್ ನೀರು ತೆಗೆದುಕೊಳ್ಳಿ. 
  5. ಬೇಕಾದಲ್ಲಿ ಏಲಕ್ಕಿ ಅಥವಾ ಕಿತ್ತಳೆ ಹಣ್ಣಿನ ರಸ ಅಥವಾ ಜಜ್ಜಿದ ಶುಂಠಿ-ಪುದಿನ ಅಥವಾ ಅನಾನಸ್ ಹಣ್ಣಿನ ರಸ ಸೇರಿಸಬಹುದು. 
  6. ನಂತ್ರ ಮುಚ್ಚಳ ಮುಚ್ಚಿ ಚೆನ್ನಾಗಿ ಕುಲುಕಿ. ಕುಡಿಯಲು ನೀಡಿ. 

ಮಂಗಳವಾರ, ಮಾರ್ಚ್ 12, 2019

Hesaru kaalu juice recipe in Kannada | ಹೆಸರುಕಾಳು ಜ್ಯೂಸು ಮಾಡುವ ವಿಧಾನ

Hesaru kaalu juice recipe in Kannada

Hesaru kaalu juice recipe in Kannada | ಹೆಸರುಕಾಳು ಜ್ಯೂಸು ಮಾಡುವ ವಿಧಾನ 

ಹೆಸರುಕಾಳು ಜ್ಯೂಸು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಹೆಸರುಕಾಳು
  2. 1/4 ಕಪ್ ತೆಂಗಿನತುರಿ
  3. 1/2 ಕಪ್ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
  4. ಸುಮಾರು 3 ಕಪ್ ನೀರು
  5. 2 ಏಲಕ್ಕಿ

ಹೆಸರುಕಾಳು ಜ್ಯೂಸು ಮಾಡುವ ವಿಧಾನ:

  1. ಹೆಸರುಕಾಳನ್ನು ಮಧ್ಯಮ ಉರಿಯಲ್ಲಿ ಹಸಿವಾಸನೆ ಹೋಗುವವವರೆಗೆ ಹುರಿಯಿರಿ.
  2. ಬಿಸಿ ಆರಿದ ಮೇಲೆ, ನುಣ್ಣನೆ ಪುಡಿ ಮಾಡಿ. 
  3. ಅದಕ್ಕೆ ತೆಂಗಿನತುರಿ ಸೇರಿಸಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ಪುನಃ ನುಣ್ಣಗೆ ಅರೆಯಿರಿ. 
  4. ಒಂದು ಪಾತ್ರೆಗೆ ಹಾಕಿ, ಉಳಿದ ನೀರು ಮತ್ತು ಪುಡಿ ಮಾಡಿದ ಬೆಲ್ಲ ಸೇರಿಸಿ. 
  5. ಕೊನೆಯಲ್ಲಿ ಏಲಕ್ಕಿ ಪುಡಿ ಉದುರಿಸಿ. ಬೇಕಾದಲ್ಲಿ ಸೋಸಿ. ನಾನು ಸೋಸುವುದಿಲ್ಲ. 
  6. ಬೇಕಾದಲ್ಲಿ ಫ್ರಿಡ್ಜ್ನಲ್ಲಿಟ್ಟು ತಂಪು ಮಾಡಿ. ಕುಡಿಯಲು ನೀಡಿ. 
  7. ಫ್ರಿಡ್ಜ್ ನಲ್ಲಿ ಒಂದು ವಾರದವರೆಗೆ ಇಟ್ಟು ಬೇಕಾದಾಗ ಕುಡಿಯಬಹುದು. 

ಮಂಗಳವಾರ, ಜುಲೈ 10, 2018

Karjoora milkshake recipe in Kannada | ಖರ್ಜೂರ ಮಿಲ್ಕ್ ಶೇಕ್ ಮಾಡುವ ವಿಧಾನ

Karjoora milkshake recipe in Kannada

Karjoora milkshake recipe in Kannada | ಖರ್ಜೂರ ಮಿಲ್ಕ್ ಶೇಕ್ ಮಾಡುವ ವಿಧಾನ 

ಖರ್ಜೂರ ಮಿಲ್ಕ್ ಶೇಕ್ ವಿಡಿಯೋ

ಬೇಕಾಗುವ ಪದಾರ್ಥಗಳು - ವಿಧಾನ ೧:( ಅಳತೆ ಕಪ್ = 240 ಎಂಎಲ್ )

  1. 3 - 4 ಖರ್ಜೂರ
  2. 1 ಏಲಕ್ಕಿ 
  3. 1 ಕಪ್ ಹಾಲು

ಬೇಕಾಗುವ ಪದಾರ್ಥಗಳು - ವಿಧಾನ ೨:( ಅಳತೆ ಕಪ್ = 240 ಎಂಎಲ್ )

  1. 3 - 4 ಖರ್ಜೂರ
  2. 1 ಸಣ್ಣ ಅಥವಾ 1/2 ದೊಡ್ಡ ಬಾಳೆಹಣ್ಣು 
  3. 1 ಕಪ್ ಹಾಲು

ಬೇಕಾಗುವ ಪದಾರ್ಥಗಳು - ವಿಧಾನ ೧:( ಅಳತೆ ಕಪ್ = 240 ಎಂಎಲ್ )

  1. 3 - 4 ಖರ್ಜೂರ
  2. 4 - 5 ಗೋಡಂಬಿ 
  3. 4 - 5 ಸಿಪ್ಪೆ ತೆಗೆದ ಬಾದಾಮಿ
  4. ಸಣ್ಣ ಚೂರು ಚಕ್ಕೆ 
  5. 1 ಕಪ್ ಹಾಲು

ಖರ್ಜೂರ ಮಿಲ್ಕ್ ಶೇಕ್ ಮಾಡುವ ವಿಧಾನ ೧:

  1. ಖರ್ಜೂರ ಮತ್ತು ಏಲಕ್ಕಿಯನ್ನು ಸ್ವಲ್ಪ ಹಾಲು ಹಾಕಿ ಅರೆಯಿರಿ. 
  2. ಆಮೇಲೆ ಉಳಿದ ಹಾಲು ಹಾಕಿ ಒಂದೆರಡು ಸುತ್ತು ಅರೆದು ಕುಡಿಯಲು ನೀಡಿ. 

ಖರ್ಜೂರ ಮಿಲ್ಕ್ ಶೇಕ್ ಮಾಡುವ ವಿಧಾನ ೨:

  1. ಖರ್ಜೂರವನ್ನು ಸ್ವಲ್ಪ ಹಾಲು ಹಾಕಿ ಅರೆಯಿರಿ. 
  2. ಆಮೇಲೆ ಬಾಳೆಹಣ್ಣು ಮತ್ತು ಉಳಿದ ಹಾಲು ಹಾಕಿ ಅರೆದು ಕುಡಿಯಲು ನೀಡಿ. 

ಖರ್ಜೂರ ಮಿಲ್ಕ್ ಶೇಕ್ ಮಾಡುವ ವಿಧಾನ ೩:

  1. ಖರ್ಜೂರ, ಗೋಡಂಬಿ, ಬಾದಾಮಿ ಮತ್ತು ಚಕ್ಕೆಯನ್ನು ಸ್ವಲ್ಪ ಹಾಲು ಹಾಕಿ ಅರೆಯಿರಿ. 
  2. ಆಮೇಲೆ ಉಳಿದ ಹಾಲು ಹಾಕಿ ಒಂದೆರಡು ಸುತ್ತು ಅರೆದು ಕುಡಿಯಲು ನೀಡಿ. 

ಮಂಗಳವಾರ, ಜುಲೈ 3, 2018

Badam milk powder recipe in Kannada | ಬಾದಾಮ್ ಮಿಲ್ಕ್ ಪೌಡರ್ ಮಾಡುವ ವಿಧಾನ

Badam milk powder recipe in Kannada

Badam milk powder recipe in Kannada | ಬಾದಾಮ್ ಮಿಲ್ಕ್ ಪೌಡರ್ ಮಾಡುವ ವಿಧಾನ 

ಬಾದಾಮ್ ಮಿಲ್ಕ್ ಪೌಡರ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಬಾದಾಮಿ
  2. 1/2 ಕಪ್ ಸಕ್ಕರೆ 
  3. 1/2 ಕಪ್ ಹಾಲಿನ ಪುಡಿ 
  4. 5 - 6 ಏಲಕ್ಕಿ 
  5. ದೊಡ್ಡ ಚಿಟಿಕೆ ಕೇಸರಿ 
  6. ದೊಡ್ಡ ಚಿಟಿಕೆ ಅರಿಶಿನ

ಬಾದಾಮ್ ಮಿಲ್ಕ್ ಪೌಡರ್ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಬಾದಾಮಿ ಹಾಕಿ ಅದನ್ನು ಕುದಿಯುವ ನೀರಿನಲ್ಲಿ ನೆನೆಸಿಡಿ. 
  2. 30 ನಿಮಿಷದ ನಂತರ ಸಿಪ್ಪೆ ತೆಗೆಯಿರಿ. 
  3. ಒಂದು ಬಾಣಲೆಯಲ್ಲಿ ಸಿಪ್ಪೆ ತೆಗೆದ ಬಾದಾಮಿ ಹಾಕಿ, ನೀರಾರುವವರೆಗೆ ಅಥವಾ ಗಾರ್ ಗರಿಯಾಗುವವರೆಗೆ ಹುರಿಯಿರಿ.
  4. ಬಿಸಿ ಆರಿದ ಮೇಲೆ ಮಿಕ್ಸಿ ಜಾರಿಗೆ ಹಾಕಿ.
  5. ಸಕ್ಕರೆ ಮತ್ತು ಹಾಲಿನ ಪುಡಿ ಸೇರಿಸಿ. 
  6. ಏಲಕ್ಕಿ, ಕೇಸರಿ ಮತ್ತು ಅರಿಶಿನವನ್ನು ಸೇರಿಸಿ. 
  7. ನುಣ್ಣನೆ ಪುಡಿ ಮಾಡಿ.  ಬಾದಾಮ್ ಮಿಲ್ಕ್ ಪೌಡರ್ ತಯಾರಾಯಿತು. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ.  
  8. ಒಂದು ಲೋಟ (150 ml) ಬಿಸಿ ಹಾಲಿಗೆ ಒಂದು ಟೇಬಲ್ ಚಮಚ ಬಾದಾಮ್ ಮಿಲ್ಕ್ ಪೌಡರ್, ಬೇಕಾದಲ್ಲಿ ಸ್ವಲ್ಪ ಸಕ್ಕರೆ ಹಾಕಿ, ಕರಗಿಸಿ, ಕುಡಿದು ಆನಂದಿಸಿ. 

ಶುಕ್ರವಾರ, ಮಾರ್ಚ್ 23, 2018

Kharbuja hannina panaka in Kannada | ಖರಬೂಜ ಹಣ್ಣಿನ ಪಾನಕ ಮಾಡುವ ವಿಧಾನ

Kharbuja hannina panaka in Kannada

Kharbuja hannina panaka in Kannada | ಖರಬೂಜ ಹಣ್ಣಿನ ಪಾನಕ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 2 ಕಪ್ ನೀರು
  2. 1/4 ಭಾಗ ಖರಬೂಜ ಹಣ್ಣು
  3. 2 ಟೇಬಲ್ ಚಮಚ ಪುಡಿ ಮಾಡಿದ ಬೆಲ್ಲ
  4. ದೊಡ್ಡ ಚಿಟಿಕೆ ಕಾಳು ಮೆಣಸು ಪುಡಿಮಾಡಿದ್ದು
  5. ದೊಡ್ಡ ಚಿಟಿಕೆ ಏಲಕ್ಕಿ ಪುಡಿಮಾಡಿದ್ದು

ಖರಬೂಜ ಹಣ್ಣಿನ ಪಾನಕ ಮಾಡುವ ವಿಧಾನ:

  1. ಖರಬೂಜ ಹಣ್ಣಿನ ಸಿಪ್ಪೆ ತೆಗೆದು ಕತ್ತರಿಸಿ.
  2. ಕತ್ತರಿಸಿದ ಹಣ್ಣು ಮತ್ತು ಬೆಲ್ಲವನ್ನು ಮಿಕ್ಸಿಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.  
  3. ಪುಡಿಮಾಡಿದ ಕಾಳು ಮೆಣಸು ಮತ್ತು ಏಲಕ್ಕಿ ಪುಡಿ ಹಾಕಿ ಬೆರೆಸಿ. 
  4. ಮೇಲಿನಿಂದ ಖರಬೂಜ ಹಣ್ಣಿನ ಸಣ್ಣ ಚೂರುಗಳನ್ನು ಹಾಕಿ ಕುಡಿಯಲು ಕೊಡಿ.

ಗುರುವಾರ, ಮಾರ್ಚ್ 22, 2018

Belada hannina panaka in Kannada | ಬೇಲದ ಹಣ್ಣಿನ ಪಾನಕ ಮಾಡುವ ವಿಧಾನ

Belada hannina panaka

Belada hannina panaka in Kannada | ಬೇಲದ ಹಣ್ಣಿನ ಪಾನಕ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 4 ಕಪ್ ನೀರು
  2. ಒಂದು ಬೇಲದ ಹಣ್ಣು
  3. 4 ಟೇಬಲ್ ಚಮಚ ಪುಡಿ ಮಾಡಿದ ಬೆಲ್ಲ
  4. 1/4 ಟೀಸ್ಪೂನ್ ಕಾಳು ಮೆಣಸು ಪುಡಿಮಾಡಿದ್ದು
  5. 1/4 ಟೀಸ್ಪೂನ್ ಕಾಳು ಏಲಕ್ಕಿ ಪುಡಿ

ಬೇಲದ ಹಣ್ಣಿನ ಪಾನಕ ಮಾಡುವ ವಿಧಾನ:

  1. ಬೇಲದ ಹಣ್ಣು ತೆಗೆದುಕೊಂಡು ತೆಂಗಿನಕಾಯಿ ಒಡೆಯುವ ಹಾಗೆ ಒಡೆಯಿರಿ. 
  2. ಒಳಗಿನ ತಿರುಳು ತೆಗೆದುಕೊಂಡು, ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ಹಿಸುಕಿ. 
  3. ನಂತ್ರ ಜರಡಿಯ ಮೂಲಕ ಸೋಸಿ. ಒಂದು ಚಮಚ ಬಳಸಿದಲ್ಲಿ ಸೋಸುವುದು ಸುಲಭವಾಗುವುದು. 
  4. ನಂತ್ರ ಪುಡಿಮಾಡಿದ ಬೆಲ್ಲ, ಪುಡಿಮಾಡಿದ ಕಾಳು ಮೆಣಸು ಮತ್ತು ಏಲಕ್ಕಿ ಪುಡಿ ಹಾಕಿ ಬೆರೆಸಿ. ಕುಡಿಯಲು ಕೊಡಿ.

ಬುಧವಾರ, ಮಾರ್ಚ್ 14, 2018

Coffee recipe without coffee-filter in Kannada | ಕಾಫಿ ಫಿಲ್ಟರ್ ಉಪಯೋಗಿಸದೆ ಕಾಫಿ ಮಾಡುವ ವಿಧಾನ

Coffee recipe without coffee-filter in Kannada

Coffee recipe without coffee-filter in Kannada | ಕಾಫಿ ಫಿಲ್ಟರ್ ಉಪಯೋಗಿಸದೆ ಕಾಫಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಟೇಬಲ್ ಚಮಚ ಕಾಫಿ ಪುಡಿ
  2. 1/2 ಕಪ್ ನೀರು
  3. 1.25 ಕಪ್ ಕುದಿಸಿದ  ಗಟ್ಟಿ ಹಾಲು
  4. 3 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಂತೆ)

ಕಾಫಿ ಫಿಲ್ಟರ್ ಉಪಯೋಗಿಸದೆ ಕಾಫಿ ಮಾಡುವ ವಿಧಾನ:

  1. ಅರ್ಧ ಕಪ್ ನೀರನ್ನು ಕುದಿಸಿ.
  2. ಒಂದು ಲೋಟ ಅಥವಾ ಪಾತ್ರೆಯಲ್ಲಿ ಕಾಫಿ ಪುಡಿಯನ್ನು ತೆಗೆದುಕೊಂಡು, ಬಿಸಿ ಕುದಿಯುವ ನೀರನ್ನು ಸುರಿಯಿರಿ. 
  3. ಒಂದು ಚಮಚದಲ್ಲಿ ಮಗುಚಿ, ಮುಚ್ಚಳ ಮುಚ್ಚಿ. 
  4. ೫ ನಿಮಿಷದ ನಂತರ ಪುನಃ ಮಗುಚಿ, ಮುಚ್ಚಳ ಮುಚ್ಚಿ. ಐದು ನಿಮಿಷ ಬಿಡಿ. 
  5. ನಂತರ ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ತೆಗೆದುಕೊಳ್ಳಿ. 
  6. ಅದಕ್ಕೆ ಜಾಗ್ರತೆಯಿಂದ ನಿಧಾನವಾಗಿ, ತಿಳಿಯಾದ ಕಾಫಿ ಡಿಕಾಕ್ಷನ್ ಬಗ್ಗಿಸಿ. ಗಮನಿಸಿ, ತಿಳಿಯಾದ ಡಿಕಾಕ್ಷನ್ ಮಾತ್ರ ಬಗ್ಗಿಸಬೇಕು.  ಕೆಳಗೆ ನಿಂತ ಕಾಫಿ ಪುಡಿಯನ್ನು ಕಲಕಬೇಡಿ. 
  7. ನಂತ್ರ ಬಿಸಿಬಿಸಿಯಾದ ಕುದಿಸಿದ ಹಾಲು ಸೇರಿಸಿ. 
  8. ಎರಡು ಮೂರು ಸಲ ಎತ್ತಿ ಸುರಿದು, ಸಕ್ಕರೆ ಕರಗಿಸಿ. ಸವಿದು ಆನಂದಿಸಿ. 

    ಗುರುವಾರ, ಫೆಬ್ರವರಿ 15, 2018

    Ragi ambli recipe in Kannada | ರಾಗಿ ಅಂಬಲಿ ಮಾಡುವ ವಿಧಾನ

    Ragi ambli recipe in Kannada

    Ragi ambli recipe in Kannada | ರಾಗಿ ಅಂಬಲಿ ಮಾಡುವ ವಿಧಾನ 

    ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

    1. 3 ಟೇಬಲ್ ಚಮಚ ರಾಗಿ ಹಿಟ್ಟು
    2. 2 ಕಪ್ ನೀರು
    3. 1 ಕಪ್ ಮಜ್ಜಿಗೆ
    4. ಒಂದು ಚಿಟಿಕೆ ಇಂಗು
    5. ರುಚಿಗೆ ಉಪ್ಪು 
    6. ಅರ್ಧ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
    7. 4 - 5 ಕರಿಬೇವಿನ ಎಲೆ ಸಣ್ಣಗೆ ಹೆಚ್ಚಿದ್ದು
    8. ಸ್ವಲ್ಪ ಕೊತ್ತಂಬರಿ ಸೊಪ್ಪು (ಬೇಕಾದಲ್ಲಿ)

    ರಾಗಿ ಅಂಬಲಿ ಮಾಡುವ ವಿಧಾನ:

    1. ಒಂದು ಬಟ್ಟಲಿನಲ್ಲಿ ರಾಗಿ ಹಿಟ್ಟು ತೆಗೆದುಕೊಳ್ಳಿ. 
    2. ಅದಕ್ಕೆ ಅರ್ಧ ಕಪ್ ನೀರು ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ. 
    3. ಇನ್ನೊಂದು ಪಾತ್ರೆಯಲ್ಲಿ ಒಂದೂವರೆ ಕಪ್ ನೀರು ಕುದಿಯಲು ಇಡೀ. 
    4. ನೀರು ಕುದಿಯಲು ಪ್ರಾರಂಭಿಸಿದಾಗ, ನೀರಲ್ಲಿ ಕಲಸಿದ ರಾಗಿ ಹಿಟ್ಟು ಹಾಕಿ. 
    5. ಮಗುಚುತ್ತಾ ಒಂದೈದು ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಸ್ಟವ್ ಆಫ್ ಮಾಡಿ. 
    6. ಸಂಪೂರ್ಣ ಬಿಸಿ ಆರಿದ ಮೇಲೆ ಉಪ್ಪು, ಮಜ್ಜಿಗೆ ಮತ್ತು ಇಂಗು ಹಾಕಿ ಕಲಸಿ. 
    7. ಆಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕರಿಬೇವು ಹಾಕಿ ಮಗುಚಿ. 
    8. ಆರೋಗ್ಯಕರ ರಾಗಿ ಅಂಬಲಿ ಕುಡಿದು ಆನಂದಿಸಿ.

      ಸೋಮವಾರ, ಜೂನ್ 26, 2017

      Kashaya pudi recipe in Kannada | ಕಷಾಯ ಪುಡಿ ಮಾಡುವ ವಿಧಾನ

      Kashaya pudi recipe in Kannada

      Kashaya pudi recipe in Kannada | ಕಷಾಯ ಪುಡಿ ಮಾಡುವ ವಿಧಾನ 

      ಬೇಕಾಗುವ ಪದಾರ್ಥಗಳು (ವಿಧಾನ ೧):

      1. 100 ಗ್ರಾಂ ಕೊತ್ತುಂಬರಿ ಬೀಜ
      2. 100 ಗ್ರಾಂ ಜೀರಿಗೆ
      3. 50 ಗ್ರಾಂ ಮೆಂತ್ಯೆ
      4. 100 ಗ್ರಾಂ ಹೆಸರುಕಾಳು
      5. 20 ಏಲಕ್ಕಿ 
      6. 50 ಗ್ರಾಂ ಬಡೇಸೊಂಪು 
      7. 50 ಗ್ರಾಂ ಒಣ ಶುಂಠಿ 
      8. 100 ಗ್ರಾಂ ಕರಿ ಮೆಣಸು 
      9. 100 ಗ್ರಾಂ ಸುಗಂಧಿ 
      10. 100 ಗ್ರಾಂ ಅಶ್ವಗಂಧ 
      11. 100 ಗ್ರಾಂ ನೆಗ್ಗಿನಮುಳ್ಳು 
      12. 100 ಗ್ರಾಂ ಜೇಷ್ಠಮಧು 
      13. 100 ಗ್ರಾಂ ಅರಿಶಿನ ಕೊಂಬು (ಬೇಕಾದಲ್ಲಿ)

      ಬೇಕಾಗುವ ಪದಾರ್ಥಗಳು (ವಿಧಾನ ೨):

      1. 1/2 ಕಪ್ ಕೊತ್ತುಂಬರಿ ಬೀಜ
      2. 1/4 ಕಪ್ ಜೀರಿಗೆ
      3. 1 ಟೇಬಲ್ ಚಮಚ ಮೆಂತ್ಯ
      4. 2 ಟೇಬಲ್ ಚಮಚ ಬಡೇಸೊಂಪು 
      5. 2 ಟೇಬಲ್ ಚಮಚ ಕರಿ ಮೆಣಸು 
      6. 2cm ಅರಿಶಿನ ಕೊಂಬು
      7. 1cm  ಒಣ ಶುಂಠಿ 
      8. 4-5 ಏಲಕ್ಕಿ 
      9. 10 ಲವಂಗ

      ಕಷಾಯ ಪುಡಿ ಮಾಡುವ ವಿಧಾನ:

      1. ಅಳತೆ ಪ್ರಕಾರ ಎಲ್ಲ ಮಸಾಲಾ ಪದಾರ್ಥಗಳನ್ನು ತೆಗೆದುಕೊಳ್ಳಿ. 
      2. ನಂತರ ಮಸಾಲಾ ಪದಾರ್ಥಗಳನ್ನು ಬಿಸಿಲಿನಲ್ಲಿ ಒಣಗಿಸಿ ಅಥವಾ ಬಾಣಲೆಯಲ್ಲಿ ಸ್ವಲ್ಪ ಬಿಸಿಯಾಗುವವರೆಗೆ ಹುರಿಯಿರಿ. 
      3. ಮಸಾಲಾ ಪದಾರ್ಥಗಳು ತಣ್ಣಗಾದಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ. ಬೇರು ನಾರುಗಳನ್ನು ಮೊದಲಿಗೆ ಒರಳು ಕಲ್ಲಿನಲ್ಲಿ ಜಜ್ಜಿಕೊಂಡು ನಂತ್ರ ಮಿಕ್ಸಿಗೆ ಹಾಕಿ. 
      4. ಜರಡಿಯಲ್ಲಿ ಸಾರಣಿಸಿ, ನುಣ್ಣನೆ ಪುಡಿಯನ್ನು ತಯಾರಿಸಿ.  
      5.  ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ರುಚಿಕರ ಮತ್ತು ಆರೋಗ್ಯಕರ ಕಷಾಯಪುಡಿ ಉಪಯೋಗಿಸಿ ಕಷಾಯ ಮಾಡಿ.
      6. ಕಷಾಯ ಮಾಡಲು, ನೀರು ಮತ್ತು ಬೆಲ್ಲ ಕುದಿಸಿ, ಕೊನೆಯಲ್ಲಿ ಪುಡಿ ಹಾಕಿ ಸ್ವಲ್ಪ ಹೊತ್ತು ಕುದಿಸಿ, ಹಾಲು ಹಾಕಿ ಕುಡಿದರಾಯಿತು. 

      ಗುರುವಾರ, ಏಪ್ರಿಲ್ 13, 2017

      Karabooja milkshake recipe in Kannada | ಕರಬೂಜ ಮಿಲ್ಕ್‌ಶೇಕ್ ಮಾಡುವ ವಿಧಾನ

      Karabooja milkshake recipe in Kannada

      Karabooja milkshake recipe in Kannada | ಕರಬೂಜ ಮಿಲ್ಕ್‌ಶೇಕ್ ಮಾಡುವ ವಿಧಾನ

      ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

      1. 1 ಮಧ್ಯಮ ಗಾತ್ರದ ಕರಬೂಜ
      2. 1/4 ಕಪ್ ತೆಂಗಿನ ತುರಿ
      3. 1 ಕಪ್ ನೀರು
      4. 1 ಕಪ್ ಕುದಿಸಿ ಆರಿಸಿದ ಹಾಲು
      5. 8 ಟೀಸ್ಪೂನ್ ಸಕ್ಕರೆ (ಅಥವಾ ರುಚಿಗೆ ತಕ್ಕಷ್ಟು)

      ಕರಬೂಜ ಮಿಲ್ಕ್‌ಶೇಕ್ ಮಾಡುವ ವಿಧಾನ:

      1. ಕರಬೂಜವನ್ನು ನ್ನು ತೊಳೆದು, ಸಿಪ್ಪೆ ತೆಗೆದು ಕತ್ತರಿಸಿ. 
      2. ಒಂದು ಮಿಕ್ಸೀ ಜಾರ್ ತೆಗೆದುಕೊಂಡು, ಕತ್ತರಿಸಿದ ಕರಬೂಜ, ಸಕ್ಕರೆ ಮತ್ತು ತೆಂಗಿನ ತುರಿ ಹಾಕಿ. 
      3. ಅಗತ್ಯವಿದ್ದಷ್ಟು ನೀರು ಬಳಸಿಕೊಂಡು ನಯವಾಗಿ ಅರೆಯಿರಿ.
      4. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ಹಾಲು ಸೇರಿಸಿ ಚೆನ್ನಾಗಿ ಕಲಕಿ. ಐಸ್ ಕ್ಯೂಬ್ ಗಳೊಂದಿಗೆ ಸವಿಯಿರಿ.

      ಬುಧವಾರ, ಏಪ್ರಿಲ್ 5, 2017

      Masale majjige recipe in Kannada | ಮಸಾಲೆ ಮಜ್ಜಿಗೆ ಮಾಡುವ ವಿಧಾನ - 2

      Masale majjige recipe in Kannada

      Masale majjige recipe in Kannada | ಮಸಾಲೆ ಮಜ್ಜಿಗೆ ಮಾಡುವ ವಿಧಾನ - 2

      ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್)

      1. 1 ಕಪ್ ಗಟ್ಟಿ ಮೊಸರು
      2. 2 ಕಪ್ ನೀರು
      3. 1/2 ಟೀಸ್ಪೂನ್ ಜಜ್ಜಿದ ಕಾಳುಮೆಣಸು ಅಥವಾ ಹೆಚ್ಚಿದ ಹಸಿ ಮೆಣಸಿನಕಾಯಿ
      4. 1/2 ಟೀಸ್ಪೂನ್ ಹೆಚ್ಚಿದ ಶುಂಠಿ
      5. 1 ಟೀಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
      6. 1/2 ಟೀಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
      7. 1 ಟೀಸ್ಪೂನ್ ಎಣ್ಣೆ
      8. ದೊಡ್ಡ ಚಿಟಿಕೆ ಇಂಗು
      9. 1/2 ಟೀಸ್ಪೂನ್ ಸಾಸಿವೆ
      10. 1/2 ಟೀಸ್ಪೂನ್ ಜೀರಿಗೆ
      11. ಉಪ್ಪು ರುಚಿಗೆ ತಕ್ಕಷ್ಟು.

      ಮಸಾಲೆ ಮಜ್ಜಿಗೆ ಮಾಡುವ ವಿಧಾನ:

      1. ಒಂದು ಪಾತ್ರೆಗೆ ಮೊಸರು, ನೀರು ಮತ್ತು ಉಪ್ಪು ಸೇರಿಸಿ ಕಡಗೋಲಿನಿಂದ ಅಥವಾ ಒಂದು ಪಾತ್ರೆಯಿಂದ ಇನ್ನೊಂದಕ್ಕೆ ಎತ್ತಿ ಹಾಕುತ್ತಾ ಚೆನ್ನಾಗಿ ಬೆರೆಸಿ.
      2. ಶುಂಠಿ, ಕರಿಬೇವಿನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪುಗಳನ್ನು ಸಣ್ಣಗೆ ಕತ್ತರಿಸಿ. ಕಾಳುಮೆಣಸನ್ನು ಗುದ್ದಿ ಪುಡಿ ಮಾಡಿ ಕೊಳ್ಳಿ.
      3.  ಈಗ ಎಣ್ಣೆ, ಸಾಸಿವೆ, ಜೀರಿಗೆ, ಇಂಗು, ಜಜ್ಜಿದ ಕಾಳುಮೆಣಸು, ಹೆಚ್ಚಿದ ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಒಗ್ಗರಣೆ ತಯಾರಿಸಿ. 
      4. ಒಗ್ಗರಣೆಯನ್ನು ಉಪ್ಪು ಬೆರೆಸಿದ ಮಜ್ಜಿಗೆಗೆ ಹಾಕಿ ಬೆರಸಿ. 
      Related Posts Plugin for WordPress, Blogger...