Nimbehannu and kamakasthuri seeds juice recipe in Kannada | ನಿಂಬೆಹಣ್ಣು ಮತ್ತು ಕಾಮಕಸ್ತುರಿ ಬೀಜ ಜ್ಯೂಸು ಮಾಡುವ ವಿಧಾನ
ಹೆಸರುಕಾಳು ಜ್ಯೂಸು ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 2 ನಿಂಬೆಹಣ್ಣು
- 2 ಟೇಬಲ್ ಚಮಚ ಕಾಮಕಸ್ತುರಿ ಬೀಜ ಅಥವಾ ಸಬ್ಜ ಬೀಜ
- 1/2 ಕಪ್ ಸಕ್ಕರೆ ಅಥವಾ ಬೆಲ್ಲ
- ಅಗತ್ಯವಿದ್ದಷ್ಟು ನೀರು
- ಐಸ್ ಕ್ಯೂಬ್ಸ್
ಬೇಕಾಗುವ ಪದಾರ್ಥಗಳು (ಬೇಕಾದಲ್ಲಿ ಉಪಯೋಗಿಸಿ):
- 1 ಏಲಕ್ಕಿ
- ಸ್ವಲ್ಪ ಕಿತ್ತಳೆ ಹಣ್ಣಿನ ರಸ
- ಜಜ್ಜಿದ ಶುಂಠಿ ಮತ್ತು ಪುದಿನ
- ಸ್ವಲ್ಪ ಅನಾನಸ್ ಹಣ್ಣಿನ ರಸ
ನಿಂಬೆಹಣ್ಣು ಮತ್ತು ಕಾಮಕಸ್ತುರಿ ಬೀಜ ಜ್ಯೂಸು ಮಾಡುವ ವಿಧಾನ:
- 1/2 ಕಪ್ ಸಕ್ಕರೆ (ಅಥವಾ ಬೆಲ್ಲ) ಮತ್ತು 1/2 ಕಪ್ ನೀರನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
- ಸಕ್ಕರೆ ಅಥವಾ ಬೆಲ್ಲ ಕರಗುವವರೆಗೆ ಬಿಸಿ ಮಾಡಿ. ಸ್ಟವ್ ಆಫ್ ಮಾಡಿ, ಬಿಸಿಆರಲು ಬಿಡಿ.
- ಒಂದು ಬಟ್ಟಲಿನಲ್ಲಿ ಕಾಮಕಸ್ತುರಿ ಬೀಜವನ್ನು ಅರ್ಧ ಕಪ್ ನೀರಿನಲ್ಲಿ ಹತ್ತು ನಿಮಿಷ ನೆನೆಸಿಡಿ.
- ಒಂದು ಬಾಟಲಿ ಅಥವಾ ಮುಚ್ಚಳ ಗಟ್ಟಿ ಇರುವ ಪಾತ್ರೆಯಲ್ಲಿ, ನೆನೆಸಿದ ಕಾಮಕಸ್ತುರಿ ಬೀಜ, ಸಕ್ಕರೆ ನೀರು, ನಿಂಬೆಹಣ್ಣಿನ ರಸ, ಅರ್ಧ ಕಪ್ ಐಸ್ ಕ್ಯೂಬ್ಸ್ ಮತ್ತು ಅರ್ಧ ಕಪ್ ನೀರು ತೆಗೆದುಕೊಳ್ಳಿ.
- ಬೇಕಾದಲ್ಲಿ ಏಲಕ್ಕಿ ಅಥವಾ ಕಿತ್ತಳೆ ಹಣ್ಣಿನ ರಸ ಅಥವಾ ಜಜ್ಜಿದ ಶುಂಠಿ-ಪುದಿನ ಅಥವಾ ಅನಾನಸ್ ಹಣ್ಣಿನ ರಸ ಸೇರಿಸಬಹುದು.
- ನಂತ್ರ ಮುಚ್ಚಳ ಮುಚ್ಚಿ ಚೆನ್ನಾಗಿ ಕುಲುಕಿ. ಕುಡಿಯಲು ನೀಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ