Gasagase haalu recipe in Kannada | ಗಸಗಸೆ ಹಾಲು ಮಾಡುವ ವಿಧಾನ
ಗಸಗಸೆ ಹಾಲಿನ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಟೇಬಲ್ ಚಮಚ ಗಸಗಸೆ
- 10 - 12 ಬಾದಾಮಿ
- ಒಂದು ಏಲಕ್ಕಿ
- 1/4 ಕಪ್ ತೆಂಗಿನತುರಿ
- 2 ಟೇಬಲ್ ಚಮಚ ಬೆಲ್ಲ
- 2 ಕಪ್ ನೀರು
ಗಸಗಸೆ ಹಾಲು ಮಾಡುವ ವಿಧಾನ:
- ಗಸಗಸೆ ಮತ್ತು ಬಾದಾಮಿಯನ್ನು 4 - 5 ಘಂಟೆಗಳ ಕಾಲ ನೆನೆಸಿಡಿ.
- ನೆನೆಸಿ ಆದ ಮೇಲೆ ಬಾದಾಮಿ ಸಿಪ್ಪೆ ತೆಗೆಯಿರಿ. ಬಾದಾಮಿ ನೆನೆಸಿದ ನೀರು ಉಪಯೋಗಿಸುವುದು ಬೇಡ. ಗಸಗಸೆ ನೆನೆಸಿದ ನೀರು ಬಳಸಬಹುದು.
- ಸಿಪ್ಪೆ ತೆಗೆದ ಬಾದಾಮಿ ಮತ್ತು ನೆನೆಸಿದ ಗಸಗಸೆಯನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ.
- ಏಲಕ್ಕಿ ಸೇರಿಸಿ.
- ತೆಂಗಿನತುರಿ ಸೇರಿಸಿ.
- ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ. ಬೆಲ್ಲದ ಬದಲು ಬೇರೆ ಸಿಹಿ ಪದಾರ್ಥ ಸೇರಿಸಬಹುದು.
- ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣಗೆ ಅರೆಯಿರಿ.
- ಶೋಧಿಸಿ, ಉಳಿದಿದ್ದನ್ನು ಪುನಃ ಅರೆಯಿರಿ, ಪುನಃ ಶೋಧಿಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ. ನಾನು ಸುಮಾರು ಎರಡು ಕಪ್ ನೀರು ಸೇರಿಸಿದ್ದೇನೆ.
- ನಂತ್ರ ಕುಡಿದು ಆನಂದಿಸಿ. ಕುದಿಸುವ ಅವಶ್ಯಕತೆ ಇಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ