Ragi halu recipe in Kannada | ರಾಗಿ ಹಾಲು ಮಾಡುವ ವಿಧಾನ
ರಾಗಿ ಹಾಲು ವಿಡಿಯೋ
ಬೇಕಾಗುವ ಪದಾರ್ಥಗಳು (ವಿಧಾನ 1): (ಅಳತೆ ಕಪ್ = 240 ಎಂಎಲ್ )
- 1/2 ಕಪ್ ರಾಗಿ
- 4 ಬಾದಾಮಿ
- 1/4 ಕಪ್ ಪುಡಿ ಮಾಡಿದ ಬೆಲ್ಲ (ಅಥವಾ ರುಚಿಗೆ ತಕ್ಕಂತೆ)
- ಸುಮಾರು 2 ಕಪ್ ನೀರು (ಅರೆಯಲು ಬೇಕಾದ ನೀರು ಸೇರಿಸಿ)
- ಎರಡು ಏಲಕ್ಕಿ
ಬೇಕಾಗುವ ಪದಾರ್ಥಗಳು (ವಿಧಾನ 2): (ಅಳತೆ ಕಪ್ = 240 ಎಂಎಲ್ )
- 1/2 ಕಪ್ ರಾಗಿ
- 1/4 ಕಪ್ ಹಸಿ ತೆಂಗಿನತುರಿ
- 1/4 ಕಪ್ ಪುಡಿ ಮಾಡಿದ ಬೆಲ್ಲ (ಅಥವಾ ರುಚಿಗೆ ತಕ್ಕಂತೆ)
- ಸುಮಾರು 2 ಕಪ್ ನೀರು (ಅರೆಯಲು ಬೇಕಾದ ನೀರು ಸೇರಿಸಿ)
- ಎರಡು ಏಲಕ್ಕಿ
ಎಳ್ಳು ಜ್ಯೂಸು ಮಾಡುವ ವಿಧಾನ 1:
- ಒಂದು ಪಾತ್ರೆಯಲ್ಲಿ ರಾಗಿ ಮತ್ತು ಬಾದಾಮಿ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ.
- ನಂತ್ರ ಎರಡು ಘಂಟೆ ನೆನೆಸಿ.
- ನೆನೆಸಿದ ನಂತ್ರ ನೀರು ಬಸಿದು, ಮಿಕ್ಸಿ ಜಾರಿಗೆ ಹಾಕಿ.
- ಬೆಲ್ಲ ಮತ್ತು ಏಲಕ್ಕಿಯನ್ನು ಸೇರಿಸಿ.
- ಅಗತ್ಯವಿರುವಷ್ಟು ನೀರು ಬಳಸಿಕೊಂಡು ನಯವಾಗಿ ಅರೆಯಿರಿ.
- ಅರೆದ ಮಿಶ್ರಣವನ್ನು ಸೋಸಿ.
- ಪುನಃ ಒಮ್ಮೆ ಅರೆದು ಸೋಸಿ.
- ರುಚಿಕರ ಮತ್ತು ಆರೋಗ್ಯಕರ ಹಾಲು ಅಥವಾ ಜ್ಯೂಸನ್ನು ಸವಿಯಿರಿ.
ಎಳ್ಳು ಜ್ಯೂಸು ಮಾಡುವ ವಿಧಾನ 2:
- ಒಂದು ಪಾತ್ರೆಯಲ್ಲಿ ರಾಗಿ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ.
- ನಂತ್ರ ಒಂದು ಪ್ಲೇಟ್ ಅಥವಾ ಬಟ್ಟೆ ಮೇಲೆ ಹರಡಿ, ಒಣಗಲು ಬಿಡಿ.
- ನೀರು ಒಣಗಿದ ನಂತರ ಬಾಣಲೆಗೆ ಹಾಕಿ ಮಧ್ಯಮ ಉರಿಯಲ್ಲಿ ಹುರಿಯಿರಿ.
- ಬಿಸಿ ಆರಿದ ಮೇಲೆ ಮಿಕ್ಸಿ ಜಾರಿಗೆ ಹಾಕಿ, ಏಲಕ್ಕಿ ಸೇರಿಸಿ ಪುಡಿ ಮಾಡಿ.
- ತೆಂಗಿನತುರಿ ಮತ್ತು ಬೆಲ್ಲ ಸೇರಿಸಿ.
- ಅಗತ್ಯವಿರುವಷ್ಟು ನೀರು ಬಳಸಿಕೊಂಡು ನಯವಾಗಿ ಅರೆಯಿರಿ.
- ಅರೆದ ಮಿಶ್ರಣವನ್ನು ಸೋಸಿ.
- ರುಚಿಕರ ಮತ್ತು ಆರೋಗ್ಯಕರ ಹಾಲು ಅಥವಾ ಜ್ಯೂಸನ್ನು ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ