ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )
- 4 ಕಪ್ ನೀರು
- ಒಂದು ಬೇಲದ ಹಣ್ಣು
- 4 ಟೇಬಲ್ ಚಮಚ ಪುಡಿ ಮಾಡಿದ ಬೆಲ್ಲ
- 1/4 ಟೀಸ್ಪೂನ್ ಕಾಳು ಮೆಣಸು ಪುಡಿಮಾಡಿದ್ದು
- 1/4 ಟೀಸ್ಪೂನ್ ಕಾಳು ಏಲಕ್ಕಿ ಪುಡಿ
ಬೇಲದ ಹಣ್ಣಿನ ಪಾನಕ ಮಾಡುವ ವಿಧಾನ:
- ಬೇಲದ ಹಣ್ಣು ತೆಗೆದುಕೊಂಡು ತೆಂಗಿನಕಾಯಿ ಒಡೆಯುವ ಹಾಗೆ ಒಡೆಯಿರಿ.
- ಒಳಗಿನ ತಿರುಳು ತೆಗೆದುಕೊಂಡು, ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ಹಿಸುಕಿ.
- ನಂತ್ರ ಜರಡಿಯ ಮೂಲಕ ಸೋಸಿ. ಒಂದು ಚಮಚ ಬಳಸಿದಲ್ಲಿ ಸೋಸುವುದು ಸುಲಭವಾಗುವುದು.
- ನಂತ್ರ ಪುಡಿಮಾಡಿದ ಬೆಲ್ಲ, ಪುಡಿಮಾಡಿದ ಕಾಳು ಮೆಣಸು ಮತ್ತು ಏಲಕ್ಕಿ ಪುಡಿ ಹಾಕಿ ಬೆರೆಸಿ. ಕುಡಿಯಲು ಕೊಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ