Badam milk powder recipe in Kannada | ಬಾದಾಮ್ ಮಿಲ್ಕ್ ಪೌಡರ್ ಮಾಡುವ ವಿಧಾನ
ಬಾದಾಮ್ ಮಿಲ್ಕ್ ಪೌಡರ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಬಾದಾಮಿ
- 1/2 ಕಪ್ ಸಕ್ಕರೆ
- 1/2 ಕಪ್ ಹಾಲಿನ ಪುಡಿ
- 5 - 6 ಏಲಕ್ಕಿ
- ದೊಡ್ಡ ಚಿಟಿಕೆ ಕೇಸರಿ
- ದೊಡ್ಡ ಚಿಟಿಕೆ ಅರಿಶಿನ
ಬಾದಾಮ್ ಮಿಲ್ಕ್ ಪೌಡರ್ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಬಾದಾಮಿ ಹಾಕಿ ಅದನ್ನು ಕುದಿಯುವ ನೀರಿನಲ್ಲಿ ನೆನೆಸಿಡಿ.
- 30 ನಿಮಿಷದ ನಂತರ ಸಿಪ್ಪೆ ತೆಗೆಯಿರಿ.
- ಒಂದು ಬಾಣಲೆಯಲ್ಲಿ ಸಿಪ್ಪೆ ತೆಗೆದ ಬಾದಾಮಿ ಹಾಕಿ, ನೀರಾರುವವರೆಗೆ ಅಥವಾ ಗಾರ್ ಗರಿಯಾಗುವವರೆಗೆ ಹುರಿಯಿರಿ.
- ಬಿಸಿ ಆರಿದ ಮೇಲೆ ಮಿಕ್ಸಿ ಜಾರಿಗೆ ಹಾಕಿ.
- ಸಕ್ಕರೆ ಮತ್ತು ಹಾಲಿನ ಪುಡಿ ಸೇರಿಸಿ.
- ಏಲಕ್ಕಿ, ಕೇಸರಿ ಮತ್ತು ಅರಿಶಿನವನ್ನು ಸೇರಿಸಿ.
- ನುಣ್ಣನೆ ಪುಡಿ ಮಾಡಿ. ಬಾದಾಮ್ ಮಿಲ್ಕ್ ಪೌಡರ್ ತಯಾರಾಯಿತು. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ.
- ಒಂದು ಲೋಟ (150 ml) ಬಿಸಿ ಹಾಲಿಗೆ ಒಂದು ಟೇಬಲ್ ಚಮಚ ಬಾದಾಮ್ ಮಿಲ್ಕ್ ಪೌಡರ್, ಬೇಕಾದಲ್ಲಿ ಸ್ವಲ್ಪ ಸಕ್ಕರೆ ಹಾಕಿ, ಕರಗಿಸಿ, ಕುಡಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ