Mumbai masala majjige recipe in Kannada | ಮುಂಬೈ ಮಸಾಲೆ ಮಜ್ಜಿಗೆ ಮಾಡುವ ವಿಧಾನ
ಮುಂಬೈ ಮಸಾಲೆ ಮಜ್ಜಿಗೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಮೊಸರು (ಅಥವಾ ಮಜ್ಜಿಗೆ)
- 1 ಕಪ್ ನೀರು (ಜಾಸ್ತಿ ಬೇಕಾದಲ್ಲಿ ಹಾಕಬಹುದು)
- 1/2 ಟೀಸ್ಪೂನ್ ಶುಂಠಿ
- 1 ಹಸಿಮೆಣಸಿನಕಾಯಿ
- 1/4 ಟೀಸ್ಪೂನ್ ಜೀರಿಗೆ ಪುಡಿ
- 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 4 - 5 ಪುದಿನ ಎಲೆ
- 1/4 ಟೀಸ್ಪೂನ್ ಚಾಟ್ ಮಸಾಲಾ
- 1/4 ಟೀಸ್ಪೂನ್ ಸೈನ್ದವ ಲವಣ (ಬ್ಲ್ಯಾಕ್ ಸಾಲ್ಟ್)
- ಉಪ್ಪು ರುಚಿಗೆ ತಕ್ಕಂತೆ
ಮುಂಬೈ ಮಸಾಲೆ ಮಜ್ಜಿಗೆ ಮಾಡುವ ವಿಧಾನ:
- ಮಿಕ್ಸಿ ಜಾರಿನಲ್ಲಿ ಮೊಸರು ಮತ್ತು ನೀರು ತೆಗೆದುಕೊಳ್ಳಿ.
- ಅದಕ್ಕೆ ಶುಂಠಿ, ಹಸಿಮೆಣಸಿನಕಾಯಿ, ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ಪುದಿನಾ ಎಲೆ, ಚಾಟ್ ಮಸಾಲಾ, ಸೈನ್ದವ ಲವಣ ಮತ್ತು ಉಪ್ಪು ಸೇರಿಸಿ.
- ಸ್ವಲ್ಪ ಹೊತ್ತು ಮಿಕ್ಸಿ ಮಾಡಿ.
- ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ