ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )
- 2 ಕಪ್ ನೀರು
- 1/4 ಭಾಗ ಖರಬೂಜ ಹಣ್ಣು
- 2 ಟೇಬಲ್ ಚಮಚ ಪುಡಿ ಮಾಡಿದ ಬೆಲ್ಲ
- ದೊಡ್ಡ ಚಿಟಿಕೆ ಕಾಳು ಮೆಣಸು ಪುಡಿಮಾಡಿದ್ದು
- ದೊಡ್ಡ ಚಿಟಿಕೆ ಏಲಕ್ಕಿ ಪುಡಿಮಾಡಿದ್ದು
ಖರಬೂಜ ಹಣ್ಣಿನ ಪಾನಕ ಮಾಡುವ ವಿಧಾನ:
- ಖರಬೂಜ ಹಣ್ಣಿನ ಸಿಪ್ಪೆ ತೆಗೆದು ಕತ್ತರಿಸಿ.
- ಕತ್ತರಿಸಿದ ಹಣ್ಣು ಮತ್ತು ಬೆಲ್ಲವನ್ನು ಮಿಕ್ಸಿಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ಪುಡಿಮಾಡಿದ ಕಾಳು ಮೆಣಸು ಮತ್ತು ಏಲಕ್ಕಿ ಪುಡಿ ಹಾಕಿ ಬೆರೆಸಿ.
- ಮೇಲಿನಿಂದ ಖರಬೂಜ ಹಣ್ಣಿನ ಸಣ್ಣ ಚೂರುಗಳನ್ನು ಹಾಕಿ ಕುಡಿಯಲು ಕೊಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ