Ugadi pachadi recipe in Kannada | ಯುಗಾದಿ ಪಚಡಿ ಮಾಡುವ ವಿಧಾನ
ಯುಗಾದಿ ಪಚಡಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 3/4 ಕಪ್ ನೀರು
- 1 ಟೀಸ್ಪೂನ್ ಹುಣಸೆಹಣ್ಣಿನ ರಸ
- 2 ಟೇಬಲ್ ಸ್ಪೂನ್ ಬೆಲ್ಲ
- 1 ಟೇಬಲ್ ಸ್ಪೂನ್ ಸಣ್ಣಗೆ ಕತ್ತರಿಸಿದ ಮಾವಿನಕಾಯಿ ಚೂರುಗಳು
- 1 ಟೇಬಲ್ ಸ್ಪೂನ್ ಬೇವಿನ ಹೂವು
- ದೊಡ್ಡ ಚಿಟಿಕೆ ಕಾಳುಮೆಣಸಿನಪುಡಿ
- ದೊಡ್ಡ ಚಿಟಿಕೆ ಉಪ್ಪು (ಅಥವಾ ರುಚಿಗೆ ತಕ್ಕಷ್ಟು)
ಯುಗಾದಿ ಪಚಡಿ ಮಾಡುವ ವಿಧಾನ:
- ಒಂದು ಬೌಲ್ ನಲ್ಲಿ ನೀರು ತೆಗೆದುಕೊಳ್ಳಿ.
- ಅದಕ್ಕೆ ಹುಣಸೆಹಣ್ಣಿನ ರಸ, ಬೆಲ್ಲ, ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿದ ಮಾವಿನಕಾಯಿ ಚೂರುಗಳು, ಬೇವಿನ ಹೂವು, ಕಾಳುಮೆಣಸಿನಪುಡಿ ಮತ್ತು ಉಪ್ಪು ಸೇರಿಸಿ.
- ಚೆನ್ನಾಗಿ ಕಲಕಿ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ