ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)
- 4 - 5 ನಿಂಬೆಹಣ್ಣು
- 1 ಕಪ್ ಸಕ್ಕರೆ (ಅಥವಾ ರುಚಿಗೆ ತಕ್ಕಂತೆ)
- ದೊಡ್ಡ ಚಿಟಿಕೆ ಉಪ್ಪು
- 1/2 ಚಮಚ ಸಣ್ಣಗೆ ಕತ್ತರಿಸಿದ ಶುಂಠಿ
ನಿಂಬೆಹಣ್ಣು ಜ್ಯೂಸು ಪುಡಿ ಮಾಡುವ ವಿಧಾನ:
- 4 - 5 ನಿಂಬೆಹಣ್ಣು ತೆಗೆದುಕೊಂಡು ಚೆನ್ನಾಗಿ ಒತ್ತಿ ತಿಕ್ಕಿ. ರಸ ತೆಗೆಯಲು ಸುಲಭವಾಗುವುದು.
- ನಿಂಬೆಹಣ್ಣಿನ ರಸ ತೆಗೆಯಿರಿ.
- ರಸವನ್ನು ಅಳತೆ ಮಾಡಿ ಒಂದು ಅಗಲವಾದ ತಟ್ಟೆಗೆ ಹಾಕಿ.
- ರಸದ ನಾಲ್ಕರಷ್ಟು ಸಕ್ಕರೆ ಸೇರಿಸಿ (ಒಂದು ಅಳತೆ ರಸಕ್ಕೆ ನಾಲ್ಕು ಅಳತೆ ಸಕ್ಕರೆ)
- ಬೇಕಾದಲ್ಲಿ ಉಪ್ಪು ಮತ್ತು ಶುಂಠಿ ಸೇರಿಸಿ. ಏಲಕ್ಕಿ ಅಥವಾ ನಿಮ್ಮಿಷ್ಟದ ಬೇರೆ ಮಸಾಲೆಯನ್ನು ಸೇರಿಸಬಹುದು.
- ಒಮ್ಮೆ ಕಲಸಿ, ಫ್ಯಾನ್ ಕೆಳಗೆ ಅಥವಾ ಹಾಗೆ ಒಣಗಲು ಬಿಡಿ. ಬಿಸಿಲಿಗೆ ಇಡುವುದು ಬೇಡ.
- ದಿನಕ್ಕೊಮ್ಮೆ ಮಗುಚಿ, ಪುನಃ ಒಣಗಲು ಬಿಡಿ.
- 3 - 4 ದಿನಗಳಲ್ಲಿ ಒಣಗುವುದು.
- ಸಂಪೂರ್ಣ ಒಣಗಿದ ಮೇಲೆ, ಮಿಕ್ಸಿಯಲ್ಲಿ ಪುಡಿ ಮಾಡಿ.
- ಡಬ್ಬದಲ್ಲಿ ಹಾಕಿ ಎತ್ತಿಡಿ. ನಿಂಬೆ ರಸಕ್ಕೆ ಸಕ್ಕರೆ ಪುಡಿ ಸೇರಿಸಿ, ಪೇಸ್ಟ್ ನಂತೆ ಮಾಡಿಯೂ ಇಡಬಹುದು.
- ಜ್ಯೂಸು ಮಾಡಲು ಅಗತ್ಯವಿದ್ದಷ್ಟು ಪುಡಿಯನ್ನು ನೀರಿನಲ್ಲಿ ಸೇರಿಸಿ, ಕುಡಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ