Karjoora milkshake recipe in Kannada | ಖರ್ಜೂರ ಮಿಲ್ಕ್ ಶೇಕ್ ಮಾಡುವ ವಿಧಾನ
ಖರ್ಜೂರ ಮಿಲ್ಕ್ ಶೇಕ್ ವಿಡಿಯೋ
ಬೇಕಾಗುವ ಪದಾರ್ಥಗಳು - ವಿಧಾನ ೧:( ಅಳತೆ ಕಪ್ = 240 ಎಂಎಲ್ )
- 3 - 4 ಖರ್ಜೂರ
- 1 ಏಲಕ್ಕಿ
- 1 ಕಪ್ ಹಾಲು
ಬೇಕಾಗುವ ಪದಾರ್ಥಗಳು - ವಿಧಾನ ೨:( ಅಳತೆ ಕಪ್ = 240 ಎಂಎಲ್ )
- 3 - 4 ಖರ್ಜೂರ
- 1 ಸಣ್ಣ ಅಥವಾ 1/2 ದೊಡ್ಡ ಬಾಳೆಹಣ್ಣು
- 1 ಕಪ್ ಹಾಲು
ಬೇಕಾಗುವ ಪದಾರ್ಥಗಳು - ವಿಧಾನ ೧:( ಅಳತೆ ಕಪ್ = 240 ಎಂಎಲ್ )
- 3 - 4 ಖರ್ಜೂರ
- 4 - 5 ಗೋಡಂಬಿ
- 4 - 5 ಸಿಪ್ಪೆ ತೆಗೆದ ಬಾದಾಮಿ
- ಸಣ್ಣ ಚೂರು ಚಕ್ಕೆ
- 1 ಕಪ್ ಹಾಲು
ಖರ್ಜೂರ ಮಿಲ್ಕ್ ಶೇಕ್ ಮಾಡುವ ವಿಧಾನ ೧:
- ಖರ್ಜೂರ ಮತ್ತು ಏಲಕ್ಕಿಯನ್ನು ಸ್ವಲ್ಪ ಹಾಲು ಹಾಕಿ ಅರೆಯಿರಿ.
- ಆಮೇಲೆ ಉಳಿದ ಹಾಲು ಹಾಕಿ ಒಂದೆರಡು ಸುತ್ತು ಅರೆದು ಕುಡಿಯಲು ನೀಡಿ.
ಖರ್ಜೂರ ಮಿಲ್ಕ್ ಶೇಕ್ ಮಾಡುವ ವಿಧಾನ ೨:
- ಖರ್ಜೂರವನ್ನು ಸ್ವಲ್ಪ ಹಾಲು ಹಾಕಿ ಅರೆಯಿರಿ.
- ಆಮೇಲೆ ಬಾಳೆಹಣ್ಣು ಮತ್ತು ಉಳಿದ ಹಾಲು ಹಾಕಿ ಅರೆದು ಕುಡಿಯಲು ನೀಡಿ.
ಖರ್ಜೂರ ಮಿಲ್ಕ್ ಶೇಕ್ ಮಾಡುವ ವಿಧಾನ ೩:
- ಖರ್ಜೂರ, ಗೋಡಂಬಿ, ಬಾದಾಮಿ ಮತ್ತು ಚಕ್ಕೆಯನ್ನು ಸ್ವಲ್ಪ ಹಾಲು ಹಾಕಿ ಅರೆಯಿರಿ.
- ಆಮೇಲೆ ಉಳಿದ ಹಾಲು ಹಾಕಿ ಒಂದೆರಡು ಸುತ್ತು ಅರೆದು ಕುಡಿಯಲು ನೀಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ