ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)
- 2 ಕಪ್ ಕತ್ತರಿಸಿದ ಮಾವಿನಹಣ್ಣು
- 1/4 ಕಪ್ ಕತ್ತರಿಸಿದ ಮಾವಿನಕಾಯಿ
- 1/2 ಕಪ್ ಸಕ್ಕರೆ (ಅಥವಾ ರುಚಿಗೆ ತಕ್ಕಂತೆ)
- ಅಗತ್ಯವಿದ್ದಷ್ಟು ನೀರು
ಫ್ರೂಟಿ, ಮಾಜ ಜ್ಯೂಸು ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಕತ್ತರಿಸಿದ ಮಾವಿನ ಹಣ್ಣು ಮತ್ತು ಮಾವಿನಕಾಯಿಯನ್ನು ತೆಗೆದುಕೊಳ್ಳಿ.
- ಅದಕ್ಕೆ ಸಕ್ಕರೆ ಸೇರಿಸಿ.
- ಮುಚ್ಚುವಷ್ಟು ನೀರು ಸೇರಿಸಿ, ಕುದಿಸಿ.
- ಮುಚ್ಚಳ ಮುಚ್ಚಿ ಮಾವಿನಕಾಯಿ ಮೆತ್ತಗಾಗುವವರೆಗೆ ಬೇಯಿಸಿ.
- ಸ್ಟವ್ ಆಫ್ ಮಾಡಿ. ಬಿಸಿ ಕಡಿಮೆ ಆದ ಮೇಲೆ, ನೀರನ್ನು ಬಗ್ಗಿಸಿ ತೆಗೆಯಿರಿ.
- ಬೇಯಿಸಿದ ಮಾವಿನ ಚೂರುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ.
- ದೊಡ್ಡ ಜರಡಿಯ ಸಹಾಯದಿಂದ ಸೋಸಿ, ಬಗ್ಗಿಸಿಟ್ಟ ನೀರಿಗೆ ಸೇರಿಸಿ. ಸೋಸುವಾಗ ಚಮಚದ ಸಹಾಯ ಮತ್ತು ಸ್ವಲ್ಪ ನೀರು ಸೇರಿಸಿದಲ್ಲಿ ಸುಲಭವಾಗುವುದು.
- ಚೆನ್ನಾಗಿ ಮಗುಚಿ, ಸಕ್ಕರೆ ಮತ್ತು ನೀರನ್ನು ಹೊಂದಿಸಿ.
- ತಣ್ಣಗೆ ಮಾಡಿ ಕುಡಿಯಿರಿ. ಫ್ರಿಡ್ಜ್ ನಲ್ಲಿ ಒಂದು ತಿಂಗಳು ಇತ್ತು ಕುಡಿಯಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ