Hesaru kaalu juice recipe in Kannada | ಹೆಸರುಕಾಳು ಜ್ಯೂಸು ಮಾಡುವ ವಿಧಾನ
ಹೆಸರುಕಾಳು ಜ್ಯೂಸು ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಹೆಸರುಕಾಳು
- 1/4 ಕಪ್ ತೆಂಗಿನತುರಿ
- 1/2 ಕಪ್ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
- ಸುಮಾರು 3 ಕಪ್ ನೀರು
- 2 ಏಲಕ್ಕಿ
ಹೆಸರುಕಾಳು ಜ್ಯೂಸು ಮಾಡುವ ವಿಧಾನ:
- ಹೆಸರುಕಾಳನ್ನು ಮಧ್ಯಮ ಉರಿಯಲ್ಲಿ ಹಸಿವಾಸನೆ ಹೋಗುವವವರೆಗೆ ಹುರಿಯಿರಿ.
- ಬಿಸಿ ಆರಿದ ಮೇಲೆ, ನುಣ್ಣನೆ ಪುಡಿ ಮಾಡಿ.
- ಅದಕ್ಕೆ ತೆಂಗಿನತುರಿ ಸೇರಿಸಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ಪುನಃ ನುಣ್ಣಗೆ ಅರೆಯಿರಿ.
- ಒಂದು ಪಾತ್ರೆಗೆ ಹಾಕಿ, ಉಳಿದ ನೀರು ಮತ್ತು ಪುಡಿ ಮಾಡಿದ ಬೆಲ್ಲ ಸೇರಿಸಿ.
- ಕೊನೆಯಲ್ಲಿ ಏಲಕ್ಕಿ ಪುಡಿ ಉದುರಿಸಿ. ಬೇಕಾದಲ್ಲಿ ಸೋಸಿ. ನಾನು ಸೋಸುವುದಿಲ್ಲ.
- ಬೇಕಾದಲ್ಲಿ ಫ್ರಿಡ್ಜ್ನಲ್ಲಿಟ್ಟು ತಂಪು ಮಾಡಿ. ಕುಡಿಯಲು ನೀಡಿ.
- ಫ್ರಿಡ್ಜ್ ನಲ್ಲಿ ಒಂದು ವಾರದವರೆಗೆ ಇಟ್ಟು ಬೇಕಾದಾಗ ಕುಡಿಯಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ