Coffee recipe without coffee-filter in Kannada | ಕಾಫಿ ಫಿಲ್ಟರ್ ಉಪಯೋಗಿಸದೆ ಕಾಫಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 2 ಟೇಬಲ್ ಚಮಚ ಕಾಫಿ ಪುಡಿ
- 1/2 ಕಪ್ ನೀರು
- 1.25 ಕಪ್ ಕುದಿಸಿದ ಗಟ್ಟಿ ಹಾಲು
- 3 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
ಕಾಫಿ ಫಿಲ್ಟರ್ ಉಪಯೋಗಿಸದೆ ಕಾಫಿ ಮಾಡುವ ವಿಧಾನ:
- ಅರ್ಧ ಕಪ್ ನೀರನ್ನು ಕುದಿಸಿ.
- ಒಂದು ಲೋಟ ಅಥವಾ ಪಾತ್ರೆಯಲ್ಲಿ ಕಾಫಿ ಪುಡಿಯನ್ನು ತೆಗೆದುಕೊಂಡು, ಬಿಸಿ ಕುದಿಯುವ ನೀರನ್ನು ಸುರಿಯಿರಿ.
- ಒಂದು ಚಮಚದಲ್ಲಿ ಮಗುಚಿ, ಮುಚ್ಚಳ ಮುಚ್ಚಿ.
- ೫ ನಿಮಿಷದ ನಂತರ ಪುನಃ ಮಗುಚಿ, ಮುಚ್ಚಳ ಮುಚ್ಚಿ. ಐದು ನಿಮಿಷ ಬಿಡಿ.
- ನಂತರ ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ತೆಗೆದುಕೊಳ್ಳಿ.
- ಅದಕ್ಕೆ ಜಾಗ್ರತೆಯಿಂದ ನಿಧಾನವಾಗಿ, ತಿಳಿಯಾದ ಕಾಫಿ ಡಿಕಾಕ್ಷನ್ ಬಗ್ಗಿಸಿ. ಗಮನಿಸಿ, ತಿಳಿಯಾದ ಡಿಕಾಕ್ಷನ್ ಮಾತ್ರ ಬಗ್ಗಿಸಬೇಕು. ಕೆಳಗೆ ನಿಂತ ಕಾಫಿ ಪುಡಿಯನ್ನು ಕಲಕಬೇಡಿ.
- ನಂತ್ರ ಬಿಸಿಬಿಸಿಯಾದ ಕುದಿಸಿದ ಹಾಲು ಸೇರಿಸಿ.
- ಎರಡು ಮೂರು ಸಲ ಎತ್ತಿ ಸುರಿದು, ಸಕ್ಕರೆ ಕರಗಿಸಿ. ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ