Ragi ambli recipe in Kannada | ರಾಗಿ ಅಂಬಲಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 3 ಟೇಬಲ್ ಚಮಚ ರಾಗಿ ಹಿಟ್ಟು
- 2 ಕಪ್ ನೀರು
- 1 ಕಪ್ ಮಜ್ಜಿಗೆ
- ಒಂದು ಚಿಟಿಕೆ ಇಂಗು
- ರುಚಿಗೆ ಉಪ್ಪು
- ಅರ್ಧ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
- 4 - 5 ಕರಿಬೇವಿನ ಎಲೆ ಸಣ್ಣಗೆ ಹೆಚ್ಚಿದ್ದು
- ಸ್ವಲ್ಪ ಕೊತ್ತಂಬರಿ ಸೊಪ್ಪು (ಬೇಕಾದಲ್ಲಿ)
ರಾಗಿ ಅಂಬಲಿ ಮಾಡುವ ವಿಧಾನ:
- ಒಂದು ಬಟ್ಟಲಿನಲ್ಲಿ ರಾಗಿ ಹಿಟ್ಟು ತೆಗೆದುಕೊಳ್ಳಿ.
- ಅದಕ್ಕೆ ಅರ್ಧ ಕಪ್ ನೀರು ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ.
- ಇನ್ನೊಂದು ಪಾತ್ರೆಯಲ್ಲಿ ಒಂದೂವರೆ ಕಪ್ ನೀರು ಕುದಿಯಲು ಇಡೀ.
- ನೀರು ಕುದಿಯಲು ಪ್ರಾರಂಭಿಸಿದಾಗ, ನೀರಲ್ಲಿ ಕಲಸಿದ ರಾಗಿ ಹಿಟ್ಟು ಹಾಕಿ.
- ಮಗುಚುತ್ತಾ ಒಂದೈದು ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಸ್ಟವ್ ಆಫ್ ಮಾಡಿ.
- ಸಂಪೂರ್ಣ ಬಿಸಿ ಆರಿದ ಮೇಲೆ ಉಪ್ಪು, ಮಜ್ಜಿಗೆ ಮತ್ತು ಇಂಗು ಹಾಕಿ ಕಲಸಿ.
- ಆಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕರಿಬೇವು ಹಾಕಿ ಮಗುಚಿ.
- ಆರೋಗ್ಯಕರ ರಾಗಿ ಅಂಬಲಿ ಕುಡಿದು ಆನಂದಿಸಿ.
Very good. Thanks for giving the recipe in Kannada
ಪ್ರತ್ಯುತ್ತರಅಳಿಸಿ