Bellulli mandakki recipe in Kannada | ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಮಾಡುವ ವಿಧಾನ
ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )
- 2 - 3 ಕಪ್ ಮಂಡಕ್ಕಿ
- 1/2 ಕಪ್ ತೆಂಗಿನತುರಿ
- 4 - 5 ಎಸಳು ಬೆಳ್ಳುಳ್ಳಿ (ಅಥವಾ 1/2 ಚಮಚ ಜೀರಿಗೆ)
- ಸ್ವಲ್ಪ ಕೊತ್ತಂಬರಿ ಸೊಪ್ಪು
- 2 - 3 ಹಸಿರು ಮೆಣಸಿನಕಾಯಿ
- 1 ಟೇಬಲ್ ಚಮಚ ತೆಂಗಿನ ಎಣ್ಣೆ (ಯಾವುದೇ ಅಡುಗೆ ಎಣ್ಣೆ ಅಥವಾ ಕರಗಿಸಿದ ತುಪ್ಪ)
- ಉಪ್ಪು ರುಚಿಗೆ ತಕ್ಕಷ್ಟು
ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಮಂಡಕ್ಕಿ ತೆಗೆದುಕೊಳ್ಳಿ. ಮಂಡಕ್ಕಿ ಗರಿಗರಿ ಇಲ್ಲವಾದಲ್ಲಿ, ಸಣ್ಣಉರಿಯಲ್ಲಿ ಸ್ವಲ್ಪ ಹೊತ್ತು ಹುರಿದುಕೊಳ್ಳಿ.
- ನಂತರ ಒಂದು ಮಿಕ್ಸಿ ಜಾರಿನಲ್ಲಿ ತೆಂಗಿನತುರಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ತರಿತರಿಯಾಗಿ ನೀರು ಹಾಕದೆ ರುಬ್ಬಿಕೊಳ್ಳಿ.
- ಅದನ್ನು ಮಂಡಕ್ಕಿ ಇರುವ ಪಾತ್ರೆಗೆ ಹಾಕಿ.
- ತೆಂಗಿನ ಎಣ್ಣೆ ಸೇರಿಸಿ.
- ಚೆನ್ನಾಗಿ ಕಲಸಿ.
- ಚೆನ್ನಾಗಿ ಕಲಸಿ ತಕ್ಷಣವೇ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ