Godhi hittina snacks recipe in Kannada | ಗೋಧಿ ಹಿಟ್ಟಿನ ಸ್ನಾಕ್ಸ್ ಮಾಡುವ ವಿಧಾನ
ಗೋಧಿ ಹಿಟ್ಟಿನ ಸ್ನಾಕ್ಸ್ ವಿಡಿಯೋ
ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಗೋಧಿ ಹಿಟ್ಟು
- 1/2 ಟೀಸ್ಪೂನ್ ಗರಂ ಮಸಾಲಾ
- 1/2 ಟೀಸ್ಪೂನ್ ಅಚ್ಚಖಾರದ ಪುಡಿ
- 1/2 ಟೀಸ್ಪೂನ್ ಜೀರಿಗೆ ಪುಡಿ
- 1/4 ಟೀಸ್ಪೂನ ಓಮ
- 2 - 3 ಟೇಬಲ್ ಚಮಚ ಎಣ್ಣೆ
- ಅಗತ್ಯವಿದ್ದಷ್ಟು ನೀರು
- 1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು
- ಎಣ್ಣೆ ಕಾಯಿಸಲು
ಗೋಧಿ ಹಿಟ್ಟಿನ ಸ್ನಾಕ್ಸ್ ಮಾಡುವ ವಿಧಾನ:
- ಒಂದು ಬಟ್ಟಲಿನಲ್ಲಿ ಗೋಧಿ ಹಿಟ್ಟು ತೆಗೆದುಕೊಳ್ಳಿ.
- ಅದಕ್ಕೆ ಅಚ್ಚಖಾರದ ಪುಡಿ, ಗರಂ ಮಸಾಲಾ ಪುಡಿ, ಜೀರಿಗೆ ಪುಡಿ ಮತ್ತು ಓಮ ಹಾಕಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಒಮ್ಮೆ ಕಲಸಿ.
- ಎರಡು ಟೇಬಲ್ ಚಮಚ ಬಿಸಿಬಿಸಿ ಎಣ್ಣೆ ಸುರಿಯಿರಿ. ಜಾಸ್ತಿ ಗರಿಗರಿ ಬೇಕಾದಲ್ಲಿ ಇನ್ನೊಂದು ಟೇಬಲ್ ಚಮಚ ಹಾಕಬಹುದು.
- ಬೇಕಾದಲ್ಲಿ ಅರ್ಧ ಚಮಚ ಸಕ್ಕರೆ ಪುಡಿ ಸೇರಿಸಿ.
- ಒಮ್ಮೆ ಚಮಚದಲ್ಲಿ ಕಲಸಿ, ಆಮೇಲೆ ಕೈಯಲ್ಲಿ ಚೆನ್ನಾಗಿ ತಿಕ್ಕಿ ಕಲಸಿ.
- ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತ ಗಟ್ಟಿಯಾದ ಹಿಟ್ಟನ್ನು ನಾದಿಕೊಳ್ಳಿ.
- ಮೇಲಿನಿಂದ ಒಂದು ಚಮಚ ಎಣ್ಣೆ ಸೇರಿಸಿ, ಪುನಃ ಕಲಸಿ.
- ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ತೆಳುವಾಗಿ ಲಟ್ಟಿಸಿ.
- ಒಂದು ಲೋಟ ಅಥವಾ ಬೌಲ್ ತೆಗೆದುಕೊಂಡು ವೃತ್ತಾಕಾರ ಮಾಡಿಕೊಳ್ಳಿ. ಬೇರೆ ಆಕಾರದಲ್ಲೂ ಕತ್ತರಿಸಬಹುದು.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಣ್ಣ ಮಧ್ಯಮ ಉರಿಯಲ್ಲಿ ಕಾಯಿಸಿ.
- ಗುಳ್ಳೆಗಳು ನಿಂತ ಮೇಲೆ ತೆಗೆದು ಟೀ ಜೊತೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ