Paneer tawa fry recipe in Kannada | ಪನೀರ್ ತವಾ ಫ್ರೈ ಮಾಡುವ ವಿಧಾನ
ಪನೀರ್ ತವಾ ಫ್ರೈ ವಿಡಿಯೋ
ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 200gm ಪನೀರ್
- 2 ಟೇಬಲ್ ಸ್ಪೂನ್ ಕಡ್ಲೆಹಿಟ್ಟು
- 1 ಟೇಬಲ್ ಸ್ಪೂನ್ ಬಿಸಿ ಎಣ್ಣೆ
- 1.5 ಟೀಸ್ಪೂನ್ ಅಚ್ಚಖಾರದ ಪುಡಿ
- 1 ಟೀಸ್ಪೂನ್ ಧನಿಯಾ ಪುಡಿ
- 1/2 ಟೀಸ್ಪೂನ್ ಜೀರಿಗೆ ಪುಡಿ
- 1/2 ಟೀಸ್ಪೂನ್ ಗರಂ ಮಸಾಲಾ
- 1/4 ಟೀಸ್ಪೂನ್ ಚಾಟ್ ಮಸಾಲಾ
- ದೊಡ್ಡ ಚಿಟಿಕೆ ಅರಿಶಿನ
- 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
- 2 ಟೇಬಲ್ ಸ್ಪೂನ್ ಗಟ್ಟಿ ಮೊಸರು
- 1 ಟೇಬಲ್ ಸ್ಪೂನ್ ಕಸೂರಿ ಮೇಥಿ
- ಉಪ್ಪು ರುಚಿಗೆ ತಕ್ಕಂತೆ
ಹಸಿರು ಚಟ್ನಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- ಸಣ್ಣ ಹಿಡಿ ಪುದೀನಾ ಸೊಪ್ಪು
- ಸಣ್ಣ ಹಿಡಿ ಕೊತ್ತಂಬರಿ ಸೊಪ್ಪು
- 1 - 2 ಹಸಿಮೆಣಸಿನಕಾಯಿ
- 1cm ಉದ್ದದ ಶುಂಠಿ
- 2 ಟೇಬಲ್ ಚಮಚ ಗಟ್ಟಿ ಮೊಸರು
- 1/4 ಟೀಸ್ಪೂನ್ ಜೀರಿಗೆ ಪುಡಿ
- 1/4 ಟೀಸ್ಪೂನ್ ಚಾಟ್ ಮಸಾಲಾ
- ಉಪ್ಪು ರುಚಿಗೆ ತಕ್ಕಷ್ಟು
- ಸಕ್ಕರೆ ರುಚಿಗೆ ತಕ್ಕಷ್ಟು
ಪನೀರ್ ತವಾ ಫ್ರೈ ಮಾಡುವ ವಿಧಾನ:
- ಕಡ್ಲೆಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
- ಬಿಸಿ ಬಿಸಿ ಎಣ್ಣೆ ಹಾಕಿ ಕಲಸಿ.
- ಅದಕ್ಕೆ ಅಚ್ಚಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ ಪುಡಿ ಮತ್ತು ಚಾಟ್ ಮಸಾಲಾ ಸೇರಿಸಿ.
- ಅರಿಶಿನ ಸೇರಿಸಿ ಮತ್ತು ಉಪ್ಪು ಸೇರಿಸಿ.
- ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ.
- ಮೊಸರು ಮತ್ತು ಕಸೂರಿ ಮೇಥಿ ಸೇರಿಸಿ ಮಗುಚಿ.
- ಅದಕ್ಕೆ ಪನೀರ್ ಚೂರುಗಳನ್ನು ಹಾಕಿ ಕಲಸಿ, ಮೂವತ್ತು ನಿಮಿಷ ನೆನೆಯಲು ಬಿಡಿ.
- ತವ ಅಥವಾ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
- ಮಸಾಲೆ ಹಚ್ಚಿದ ಪನೀರ್ ಚೂರುಗಳನ್ನು ಖಾಯಿಸಿ.
- ಹಸಿರು ಚಟ್ನಿ ಯೊಂದಿಗೆ ಬಡಿಸಿ. ಹಾಗೆಯೂ ತಿನ್ನಬಹುದು.
ಹಸಿರು ಚಟ್ನಿ ಮಾಡುವ ವಿಧಾನ:
- ಮಿಕ್ಸಿ ಜಾರಿನಲ್ಲಿ ಪುದೀನಾ, ಕೊತ್ತಂಬರಿ ಸೊಪ್ಪು, ಮೊಸರು, ಹಸಿಮೆಣಸಿನಕಾಯಿ ಮತ್ತು ಶುಂಠಿ ತೆಗೆದುಕೊಳ್ಳಿ .
- ಅದಕ್ಕೆ ಜೀರಿಗೆ ಪುಡಿ, ಚಾಟ್ ಮಸಾಲಾ ಉಪ್ಪು ಮತ್ತು ಸಕ್ಕರೆ ಸೇರಿಸಿ.
- ನುಣ್ಣಗೆ ರುಬ್ಬಿ.
- ಪನೀರ್ ತವ ಫ್ರೈ ಅಥವಾ ಯಾವುದೇ ಸ್ನಾಕ್ಸ್ ಜೊತೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ