Avalakki upkari recipe in Kannada | ಅವಲಕ್ಕಿ ಉಪ್ಕರಿ ಮಾಡುವ ವಿಧಾನ
ಅವಲಕ್ಕಿ ಉಪ್ಕರಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 - 3 ಕಪ್ ತೆಳು ಅವಲಕ್ಕಿ
- 1/2 ಕಪ್ ತೆಂಗಿನ ತುರಿ
- 2 - 3 ಟೇಬಲ್ ಸ್ಪೂನ್ ಪುಡಿ ಮಾಡಿದ ಬೆಲ್ಲ
- ಉಪ್ಪು ರುಚಿಗೆ ತಕ್ಕಷ್ಟು
- 2 ಟೀಸ್ಪೂನ್ ರಸಂ ಪೌಡರ್
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಉದ್ದಿನಬೇಳೆ
- 1 ಒಣ ಮೆಣಸಿನಕಾಯಿ
- 4 - 5 ಕರಿಬೇವಿನ ಎಲೆ
- 2 ಟೀಸ್ಪೂನ್ ಅಡುಗೆ ಎಣ್ಣೆ
ರಸಂ ಪೌಡರ್ ಇಲ್ಲದಿದ್ದಲ್ಲಿ ಬೇಕಾಗುವ ಪದಾರ್ಥಗಳು:
- 3 ಒಣ ಮೆಣಸಿನಕಾಯಿ
- 2 ಟೀಸ್ಪೂನ್ ಕೊತ್ತಂಬರಿ ಬೀಜ
- 1 ಟೀಸ್ಪೂನ್ ಜೀರಿಗೆ
ಅವಲಕ್ಕಿ ಉಪ್ಕರಿ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ತೆಂಗಿನ ತುರಿ, ಬೆಲ್ಲ, ರಸಂ ಪೌಡರ್ ಮತ್ತು ಉಪ್ಪು ಹಾಕಿ.
- ಚೆನ್ನಾಗಿ ಹಿಸುಕಿ ಕಲಸಿ.
- ರಸಂ ಪೌಡರ್ ಅಥವಾ ಸಾರಿನ ಪುಡಿ ಇಲ್ಲದಿದ್ದಲ್ಲಿ ಮೇಲೆ ಪಟ್ಟಿ ಮಾಡಿದ ಪದಾರ್ಥಗಳನ್ನು ಹುರಿದು ಪುಡಿಮಾಡಿಕೊಳ್ಳಿ. ನಂತ್ರ ಕಲಸಿ.
- ಅದಕ್ಕೆ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಹಿಸುಕಿ ಕಲಸಿ.
- ಎಣ್ಣೆ ಬಿಸಿ ಮಾಡಿ. ಸಾಸಿವೆ, ಒಣಮೆಣಸು,ಉದ್ದಿನಬೇಳೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
- ಒಗ್ಗರಣೆ ಸೇರಿಸಿ ಚೆನ್ನಾಗಿ ಕಲಸಿ.
- ಬಾಳೆಹಣ್ಣು ಅಥವಾ ಕಡಲೆ ಉಸ್ಲಿ ಅಥವಾ ಉಪ್ಪಿಟ್ಟು ಅಥವಾ ಮೊಸರಿನೊಂದಿಗೆ ಅಥವಾ ಹಾಗೇ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ