Chinthamani kadlekai recipe in Kannada | ಚಿಂತಾಮಣಿ ಕಡ್ಲೆಕಾಯಿ ಮಾಡುವ ವಿಧಾನ
ಚಿಂತಾಮಣಿ ಕಡ್ಲೆಕಾಯಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಕಪ್ ಶೇಂಗಾ ಅಥವಾ ಕಡ್ಲೆಕಾಯಿ
- ಸಣ್ಣ ಹಿಡಿ ಕೊತ್ತಂಬರಿ ಸೊಪ್ಪು
- 7 - 8 ಕರಿಬೇವಿನ ಎಲೆ
- 3 - 4 ಹಸಿಮೆಣಸಿನಕಾಯಿ
- 1/2 ನಿಂಬೆಹಣ್ಣಿನ ರಸ
- 1/4 ಟೀಸ್ಪೂನ್ ಅರಶಿನ ಪುಡಿ
- ದೊಡ್ಡ ಚಿಟಿಕೆ ಇಂಗು
- 1/4 ಟೀಸ್ಪೂನ್ ಮೆಂತ್ಯಕಾಳು
- ಉಪ್ಪು ರುಚಿಗೆ ತಕ್ಕಷ್ಟು
ಶೇಂಗಾ ಹುರಿಗಾಳು ಮಾಡುವ ವಿಧಾನ:
- ಒಂದು ದಪ್ಪ ತಳದ ಬಾಣಲೆಯಲ್ಲಿ ಶೇಂಗಾ ಅಥವಾ ಕಡಲೆಕಾಯಿಯನ್ನು ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಕೈ ಬಿಡದೇ ಹುರಿಯಿರಿ.
- ಹುರಿದ ಕಡಲೆಕಾಯಿಯನ್ನು ಒಂದು ಪಾತ್ರೆಗೆ ಹಾಕಿ.
- ನಂತರ ಒಂದು ಮಿಕ್ಸಿ ಜಾರಿನಲ್ಲಿ ಕೊತ್ತಂಬರಿ ಸೊಪ್ಪು, ಕರಿಬೇವು ಮತ್ತು ಹಸಿಮೆಣಸಿನಕಾಯಿ ತೆಗೆದುಕೊಳ್ಳಿ.
- ಅದಕ್ಕೆ ಉಪ್ಪು, ನಿಂಬೆ ಹಣ್ಣಿನ ರಸ, ಇಂಗು ಮತ್ತು ಅರಿಶಿನ ಸೇರಿಸಿ.
- ನೆನೆಸಿದ ಮೆಂತ್ಯ ಕಾಳನ್ನು ಸೇರಿಸಿ.
- ೧ - ೨ ಟೇಬಲ್ ಚಮಚದಷ್ಟು ನೀರು ಸೇರಿಸಿ, ದಪ್ಪನಾದ ಮಸಾಲೆಯನ್ನು ಅರೆದುಕೊಳ್ಳಿ.
- ಹುರಿದ ಶೇಂಗಾ ಸ್ವಲ್ಪ ಬಿಸಿ ಕಡಿಮೆ ಆದಮೇಲೆ ಮಸಾಲೆಯನ್ನು ಹಾಕಿ ಚೆನ್ನಾಗಿ ಕಲಸಿ.
- ಪುನಃ ಸ್ಟವ್ ಮೇಲಿಟ್ಟು ಶೇಂಗಾ ಒಣಗುವವರೆಗೆ ಹುರಿಯಿರಿ.
- ಸ್ಟವ್ ಆಫ್ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ಸಂಜೆ ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ