Mini kodubale recipe in Kannada | ಮಿನಿ ಕೋಡುಬಳೆ ಮಾಡುವ ವಿಧಾನ
ಮಿನಿ ಕೋಡುಬಳೆ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಕಪ್ ಅಕ್ಕಿ ಹಿಟ್ಟು
- 1/2 ಕಪ್ ಚಿರೋಟಿ ರವೇ
- 1/2 ಕಪ್ ಮೈದಾ ಹಿಟ್ಟು
- 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
- 1/4 ಟೀಸ್ಪೂನ್ ಇಂಗು
- 1 ಟೀಸ್ಪೂನ್ ಓಂಕಾಳು
- 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- 3 - 4 ಟೇಬಲ್ ಚಮಚ ಬಿಸಿ ಎಣ್ಣೆ
- ಎಣ್ಣೆ ಕೋಡುಬಳೆ ಕಾಯಿಸಲು
ಮಿನಿ ಕೋಡುಬಳೆ ಮಾಡುವ ವಿಧಾನ:
- ಅಕ್ಕಿ ಹಿಟ್ಟು, ಚಿರೋಟಿ ರವೇ ಮತ್ತು ಮೈದಾ ಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ .
- ನಂತರ ಅದಕ್ಕೆ ಅಚ್ಚಖಾರದ ಪುಡಿ, ಇಂಗು ಮತ್ತುಓಮವನ್ನು ಸೇರಿಸಿ.
- ರುಚಿಗೆ ತಕ್ಕಂತೆ ಉಪ್ಪನ್ನು ಹಾಕಿ ಕಲಸಿ.
- ನಂತ್ರ 3 - 4 ಟೇಬಲ್ ಚಮಚ ಬಿಸಿ ಎಣ್ಣೆಯನ್ನು ಹಾಕಿ, ಚೆನ್ನಾಗಿ ತಿಕ್ಕಿ ಕಲಸಿ.
- ಕಲಸಿದ ಹಿಟ್ಟಿಗೆ ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತ ಗಟ್ಟಿಯಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ಕೋಡುಬಳೆ ಮಾಡುವಷ್ಟು ಮೆತ್ತಗಿದ್ದರೆ ಸಾಕು.
- ಈಗ ನೆಲ್ಲಿಕಾಯಿ ಗಾತ್ರದ ಹಿಟ್ಟು ತೆಗೆದು ಕೊಂಡು ಬಳೆಗಳನ್ನು ಮಾಡಿ.
- ಎಣ್ಣೆ ಬಿಸಿ ಮಾಡಿ ಕೋಡುಬಳೆಗಳನ್ನು ಸಣ್ಣ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ. ಪ್ರತಿಸಲ ಕೋಡುಬಳೆ ಕಾಯಿಸುವ ಮೊದಲು ಎಣ್ಣೆ ಬಿಸಿ ಇರಲಿ. ನಂತರ ಸಣ್ಣ ಉರಿಯಲ್ಲಿ ಕಾಯಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ