Masale avalakki recipe in Kannada | ಹಸಿರು ಮಸಾಲೆ ಅವಲಕ್ಕಿ ಮಾಡುವ ವಿಧಾನ
ಮಸಾಲೆ ಅವಲಕ್ಕಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 3 ಕಪ್ ತೆಳು ಅವಲಕ್ಕಿ
- 1 ಕಪ್ ತೆಂಗಿನತುರಿ
- 2 ಹಸಿಮೆಣಸಿನಕಾಯಿ
- ಸ್ವಲ್ಪ ಕರಿಬೇವು
- ಸ್ವಲ್ಪ ಕೊತ್ತಂಬರಿ ಸೊಪ್ಪು
- 1 - 2 ಟೀಸ್ಪೂನ್ ನಿಂಬೆಹಣ್ಣಿನ ರಸ
- ರುಚಿಗೆ ತಕ್ಕಂತೆ ಉಪ್ಪು
- ರುಚಿಗೆ ತಕ್ಕಂತೆ ಸಕ್ಕರೆ
ಹಸಿರು ಮಸಾಲೆ ಅವಲಕ್ಕಿ ಮಾಡುವ ವಿಧಾನ:
- ಒಂದು ಮಿಕ್ಸಿಜಾರಿನಲ್ಲಿ ತೆಂಗಿನತುರಿ, ಹಸಿಮೆಣಸಿನಕಾಯಿ ಮತ್ತು ಕರಿಬೇವನ್ನು ತೆಗೆದುಕೊಳ್ಳಿ.
- ಅದಕ್ಕೆ ಕೊತ್ತಂಬರಿ ಸೊಪ್ಪನ್ನು ಸೇರಿಸಿ.
- ರುಚಿಗೆ ತಕ್ಕಂತೆ ಉಪ್ಪನ್ನು ಸೇರಿಸಿ.
- ರುಚಿಗೆ ತಕ್ಕಂತೆ ಸಕ್ಕರೆಯನ್ನು ಸೇರಿಸಿ.
- ನಿಂಬೆಹಣ್ಣಿನ ರಸವನ್ನೂ ಸೇರಿಸಿ.
- ನೀರು ಹಾಕದೇ ಪುಡಿಮಾಡಿಕೊಳ್ಳಿ.
- ಒಂದು ಪಾತ್ರೆಯಲ್ಲಿ ಅವಲಕ್ಕಿ ತೆಗೆದುಕೊಂಡು ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ.
- ಚೆನ್ನಾಗಿ ಹಿಸುಕಿ ಕಲಸಿ.
- ಬೆಳಗ್ಗಿನ ತಿಂಡಿಗೆ ಅಥವಾ ಸಂಜೆ ಟೀ ಯೊಂದಿಗೆ ಸವಿದು ಆನಂದಿಸಿ. ಕಡ್ಲೆ ಉಸ್ಲಿಯೊಂದಿಗೆ ಬಡಿಸಿದರೆ ಬಹಳ ಚೆನ್ನಾಗಿರುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ