Aloo sandwich recipe in Kannada | ಆಲೂಗಡ್ಡೆ ಬ್ರೆಡ್ ಟೋಸ್ಟ್ ಮಾಡುವ ವಿಧಾನ
ಆಲೂಗಡ್ಡೆ ಬ್ರೆಡ್ ಟೋಸ್ಟ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 8 ಬ್ರೆಡ್
- 2 ಮಾದ್ಯಮ ಗಾತ್ರದ ಆಲೂಗಡ್ಡೆ
- ಎರಡು ಟೇಬಲ್ ಚಮಚ ಬೆಣ್ಣೆ
- 1 ಸಣ್ಣಗೆ ಹೆಚ್ಚಿದ ಈರುಳ್ಳಿ
- 1 ಹಸಿರುಮೆಣಸಿನಕಾಯಿ
- ಸ್ವಲ್ಪ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1/2 ಟೀಸ್ಪೂನ್ ಅಚ್ಚ ಖಾರದ ಪುಡಿ
- 1/2 ಟೀಸ್ಪೂನ್ ಗರಂ ಮಸಾಲಾ
- 1/4 ಟೀಸ್ಪೂನ್ ಕಾಳುಮೆಣಸಿನಪುಡಿ
- ಉಪ್ಪು ರುಚಿಗೆ ತಕ್ಕಷ್ಟು.
- ಸ್ವಲ್ಪ ನಿಂಬೆರಸ ಅಥವಾ ಮಾವಿನಕಾಯಿ ಪುಡಿ
- ಸ್ವಲ್ಪ ಟೊಮೇಟೊ ಸಾಸ್ (ಬೇಕಾದಲ್ಲಿ)
ಆಲೂಗಡ್ಡೆ ಬ್ರೆಡ್ ಟೋಸ್ಟ್ ಮಾಡುವ ವಿಧಾನ:
- ಆಲೂಗಡ್ಡೆ ಬೇಯಿಸಿ, ಸಿಪ್ಪೆ ತೆಗೆದಿಟ್ಟುಕೊಳ್ಳಿ.ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ.
- ಒಂದು ಪಾತ್ರೆಯಲ್ಲಿ ಬೇಯಿಸಿ, ಸಿಪ್ಪೆ ತೆಗೆದ ಆಲೂಗಡ್ಡೆ ತೆಗೆದುಕೊಳ್ಳಿ. ಚೆನ್ನಾಗಿ ಪುಡಿಮಾಡಿಕೊಳ್ಳಿ.
- ಅದಕ್ಕೆ ಸಣ್ಣಗೆ ಕತ್ತರಿಸಿದ ಹಸಿರುಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ.
- ಆಮೇಲೆ ಅಚ್ಚಖಾರದ ಪುಡಿ, ಗರಂ ಮಸಾಲಾ, ಕಾಳುಮೆಣಸಿನಪುಡಿ ಮತ್ತು ಉಪ್ಪು ಸೇರಿಸಿ.
- ಸ್ವಲ್ಪ ನಿಂಬೆರಸ ಅಥವಾ ಮಾವಿನಕಾಯಿ ಪುಡಿ ಹಾಕಿ, ಚೆನ್ನಾಗಿ ಕಲಸಿ.
- ಬ್ರೆಡ್ ತೆಗೆದುಕೊಂಡು ಟೊಮೇಟೊ ಸಾಸ್ (ಬೇಕಾದಲ್ಲಿ) ಹಚ್ಚಿ.
- ಮೇಲಿನಿಂದ ಆಲೂಗಡ್ಡೆ ಮಿಶ್ರಣವನ್ನು ಹರಡಿ.
- ಮೇಲಿನಿಂದ ಟೊಮೇಟೊ ಸಾಸ್ ಹಚ್ಚಿದ ಬ್ರೆಡ್ ಮುಚ್ಚಿ.
- ತವಾ ಮೇಲೆ ಬೆಣ್ಣೆ ಬಿಸಿ ಮಾಡಿ, ಸ್ಯಾಂಡ್ವಿಚ್ ಅನ್ನು ಮಧ್ಯಮ ಉರಿಯಲ್ಲಿ ಕಾಯಿಸಿ.
- ಮೇಲಿನಿಂದ ಬೆಣ್ಣೆ ಹಚ್ಚಿ ಇನ್ನೊಂದು ಬದಿಯೂ ಕಾಯಿಸಿ. ಕತ್ತರಿಸಿ ಟೊಮೇಟೊ ಸಾಸ್ ನೊಂದಿಗೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ