ಸಲಾಡ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಲಾಡ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಆಗಸ್ಟ್ 10, 2024

Bale dindu mosaru sasive recipe in kannada | ಬಾಳೆದಿಂಡು ಮೊಸರು ಸಾಸಿವೆ ಮಾಡುವ ವಿಧಾನ

 

Bale dindu mosaru sasive recipe in kannada

Bale dindu mosaru sasive recipe in kannada | ಬಾಳೆದಿಂಡು ಮೊಸರು ಸಾಸಿವೆ ಮಾಡುವ ವಿಧಾನ

ಬಾಳೆದಿಂಡು ಮೊಸರು ಸಾಸಿವೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 7 - 8 cm ಉದ್ದದ ಬಾಳೆದಿಂಡು
  2. 1/2 ಕಪ್ ಮೊಸರು 
  3. 1 ಟೀಸ್ಪೂನ್ ಉಪ್ಪು ಅಥವಾ ನಿಮ್ಮ ರುಚಿಗೆ ತಕ್ಕಷ್ಟು 

ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಹಸಿಮೆಣಸಿನಕಾಯಿ
  2. 1/2 ಕಪ್ ತೆಂಗಿನ ತುರಿ 
  3. 1/2 ಟೀಸ್ಪೂನ್ ಸಾಸಿವೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಒಣ ಮೆಣಸಿನಕಾಯಿ
  3. 4 -5 ಕರಿಬೇವು
  4. 1 ಟೇಬಲ್  ಸ್ಪೂನ್ ಅಡುಗೆ ಎಣ್ಣೆ

ಬಾಳೆದಿಂಡು ಮೊಸರು ಸಾಸಿವೆ ಮಾಡುವ ವಿಧಾನ:

  1. ಬಾಳೆದಿಂಡಿನ ಹೊರಗಿನ ಸಿಪ್ಪೆಗಳನ್ನು ತೆಗೆಯಿರಿ.
  2. ಚಕ್ರಗಳಾಗಿ ಕತ್ತರಿಸಿ ನಾರನ್ನು ತೆಗೆಯಿರಿ.
  3. ನಂತರ ಸಣ್ಣದಾಗಿ ಕತ್ತರಿಸಿ.
  4. ನಿಂಬೆಹಣ್ಣಿನ ರಸ ಹಾಕಿದ ನೀರಿನಲ್ಲಿ ಹತ್ತು ನಿಮಿಷ ಹಾಕಿಡಿ.  
  5. ಆಮೇಲೆ ನೀರು ಬಗ್ಗಿಸಿ ತೆಗೆಯಿರಿ.
  6. ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಬೇಯಲು ಇಡಿ. ಬೇಯಿಸದೆಯೂ ಮಾಡಬಹುದು. 
  7. ಹತ್ತು ನಿಮಿಷ ಬೇಯಿಸಿ ಸ್ಟವ್ ಆಫ್ ಮಾಡಿ. 
  8. ತೆಂಗಿನತುರಿ, ಹಸಿಮೆಣಸಿನಕಾಯಿ ಮತ್ತು ಸಾಸಿವೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ರುಬ್ಬಿ. 
  9. ಅದನ್ನು ಒಂದು ಪಾತ್ರೆಗೆ ಹಾಕಿ ಮೊಸರನ್ನು ಸೇರಿಸಿ.
  10. ಬೇಯಿಸಿದ ಬಾಳೆದಿಂಡನ್ನು ಬಿಸಿ ಕಡಿಮೆ ಆದಮೇಲೆ ನೀರು ಬಸಿದು ಸೇರಿಸಿ. 
  11. ರುಚಿಗೆ ತಕ್ಕಂತೆ ಉಪ್ಪು ಹಾಕಿ ಕಲಸಿ. 
  12. ಎಣ್ಣೆ, ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ. 
  13. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

ಶನಿವಾರ, ಜೂನ್ 29, 2024

Veg raita recipe in Kannada | ವೆಜ್ ರಾಯಿತ ಮಾಡುವ ವಿಧಾನ

 

Veg raita recipe in Kannada

Veg raita recipe in Kannada | ವೆಜ್ ರಾಯಿತ ಮಾಡುವ ವಿಧಾನ

ವೆಜ್ ರಾಯಿತ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೊಸರು 
  2. 1/2 ಕಪ್ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಸೌತೆಕಾಯಿ
  3. 1 ಸಣ್ಣ ಗಾತ್ರದ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  4. 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕ್ಯಾರಟ್
  5. 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ದಪ್ಪಮೆಣಸು
  6. 1/2 ಟೊಮೇಟೊ ಸಣ್ಣಗೆ ಹೆಚ್ಚಿದ್ದು
  7. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  8. 1/4 ಟೀಸ್ಪೂನ್ ಕಾಳುಮೆಣಸಿನ ಪುಡಿ
  9. 1/4 ಟೀಸ್ಪೂನ್ ಜೀರಿಗೆ ಪುಡಿ
  10. ಉಪ್ಪು ರುಚಿಗೆ ತಕ್ಕಷ್ಟು.

ಪದಾರ್ಥಗಳು (ಬೇಕಾದಲ್ಲಿ):

  1. ಅಚ್ಚಖಾರದ ಪುಡಿ
  2. ಚಾಟ್ ಮಸಾಲಾ
  3. ಬ್ಲಾಕ್ ಸಾಲ್ಟ್ 
  4. ಸ್ವಲ್ಪ ಕೊತ್ತಂಬರಿ ಸೊಪ್ಪು

ವೆಜ್ ರಾಯಿತ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಮೊಸರು ಮತ್ತು ಉಪ್ಪನ್ನು ತೆಗೆದು ಕೊಳ್ಳಿ. 
  2. ಅದಕ್ಕೆ ಕಾಳುಮೆಣಸಿನ ಪುಡಿ ಮತ್ತು ಜೀರಿಗೆ ಪುಡಿ ಸೇರಿಸಿ ಕಲಸಿ. 
  3. ನಂತರ ಹೆಚ್ಚಿದ ಸೌತೆಕಾಯಿ ಮತ್ತು ಈರುಳ್ಳಿ ಸೇರಿಸಿ. 
  4. ಕ್ಯಾರಟ್ ಮತ್ತು ದಪ್ಪಮೆಣಸನ್ನೂ ಸೇರಿಸಿ. 
  5. ಟೊಮೇಟೊ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ಚೆನ್ನಾಗಿ ಕಲಸಿ. 
  6. ಮೇಲಿನಿಂದ ರುಚಿಗೆ ತಕ್ಕಂತೆ ಅಚ್ಚಖಾರದ ಪುಡಿ, ಚಾಟ್ ಮಸಾಲಾ ಮತ್ತು ಬ್ಲಾಕ್ ಸಾಲ್ಟ್ ಉದುರಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಕೂಡಲೇ ಬಡಿಸಿ.
  7. ಅಥವಾ ಬಡಿಸುವವರೆಗೆ ಫ್ರಿಡ್ಜ್ನಲ್ಲಿಡಿ. 

ಬುಧವಾರ, ಆಗಸ್ಟ್ 31, 2022

Kadle bele usli recipe in Kannada | ಕಡಲೆಬೇಳೆ ಉಸ್ಲಿ ಮಾಡುವ ವಿಧಾನ

 

Kadle bele usli recipe in Kannada

Kadle bele usli recipe in Kannada | ಕಡಲೆಬೇಳೆ ಉಸ್ಲಿ ಮಾಡುವ ವಿಧಾನ

ಕಡಲೆಬೇಳೆ ಉಸ್ಲಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಕಡಲೆಬೇಳೆ
  2. 1 ಟೇಬಲ್ ಚಮಚ ಅಡುಗೆ ಎಣ್ಣೆ
  3. 1/2 ಟೀಸ್ಪೂನ್ ಸಾಸಿವೆ 
  4. 1/2 ಟೀಸ್ಪೂನ್ ಉದ್ದಿನಬೇಳೆ
  5. ಒಂದು ಚಿಟಿಕೆ ಅರಿಶಿನ ಪುಡಿ
  6. ಒಂದು ಚಿಟಿಕೆ ಇಂಗು
  7. 4 - 5 ಕರಿಬೇವಿನ ಎಲೆ
  8. ಒಂದು ಸಣ್ಣ ಚೂರು ಶುಂಠಿ
  9. 1 - 2 ಹಸಿರು ಮೆಣಸಿನಕಾಯಿ
  10. 2 ಟೇಬಲ್ ಚಮಚ ತೆಂಗಿನ ತುರಿ 
  11.  2 ಟೇಬಲ್ ಚಮಚ ಕೊತಂಬರಿ ಸೊಪ್ಪು 
  12. 1/2 - 1 ಟೀಸ್ಪೂನ್ ಲಿಂಬೆ ರಸ (ಬೇಕಾದಲ್ಲಿ)
  13. ಉಪ್ಪು ರುಚಿಗೆ ತಕ್ಕಷ್ಟು.

ಕಡಲೆಬೇಳೆ ಉಸ್ಲಿ ಮಾಡುವ ವಿಧಾನ:

  1. ಕಡಲೆಬೇಳೆಯನ್ನು ಕುಕ್ಕರ್ ನಲ್ಲಿ ತೆಗೆದುಕೊಂಡು ತೊಳೆಯಿರಿ. 
  2. ಅಗತ್ಯವಿದ್ದಷ್ಟು ನೀರು ಹಾಕಿ (ಒಂದೂವರೆ ಪಟ್ಟು), ಎರಡು ವಿಷಲ್ ಮಾಡಿ ಮೆತ್ತಗೆ ಬೇಯಿಸಿಕೊಳ್ಳಿ ಆದರೆ ಮುದ್ದೆಯಾಗುವುದು ಬೇಡ. 
  3. ಬೇಯಿಸಿದ ನಂತರ ನೀರು ಬಸಿದು ಪಕ್ಕಕ್ಕಿಡಿ. ನಾನು ಈ ನೀರಿನಿಂದ ಸಾರು ಮಾಡುತ್ತೇನೆ. 
  4. ನಂತರ ಒಂದು ಬಾಣಲೆಯನ್ನು ತೆಗೆದುಕೊಳ್ಳಿ. ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ. 
  5. ಸಾಸಿವೆ ಸಿಡಿದ ಮೇಲೆ ಹಸಿರು ಮೆಣಸಿನಕಾಯಿ, ಕತ್ತರಿಸಿದ ಶುಂಠಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿ. 
  6. ಅದಕ್ಕೆ ಅರಿಶಿನ ಪುಡಿ ಮತ್ತು ಇಂಗು ಸೇರಿಸಿ. 
  7. ಅದಕ್ಕೆ ಬೇಯಿಸಿದ ಕಡಲೆಬೇಳೆ ಮತ್ತು ಉಪ್ಪನ್ನು ಹಾಕಿ ಮಗುಚಿ.
  8. ತೆಂಗಿನ ತುರಿ ಮತ್ತು ಕೊತಂಬರಿ ಸೊಪ್ಪು ಸೇರಿಸಿ. ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. 
  9. ಕೊನೆಯಲ್ಲಿ ಬೇಕಾದಲ್ಲಿ ಲಿಂಬೆರಸ ಸೇರಿಸಿ. ಚಹಾದೊಂದಿಗೆ ಆನಂದಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಏಪ್ರಿಲ್ 8, 2022

Southekayi sasive recipe in kannada | ಸೌತೆಕಾಯಿ ಸಾಸಿವೆ ಮಾಡುವ ವಿಧಾನ

 

Southekayi sasive recipe in kannada

Southekayi sasive recipe in kannada | ಸೌತೆಕಾಯಿ ಸಾಸಿವೆ (ಹಸಿಗೊಜ್ಜು) ಮಾಡುವ ವಿಧಾನ

ಸೌತೆಕಾಯಿ ಸಾಸಿವೆ ವಿಡಿಯೋ

ಬೇಕಾಗುವ ಪದಾರ್ಥಗಳು - ವಿಧಾನ ೧: ( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಸೌತೆಕಾಯಿ
  2. 1 - 2 ಒಣಮೆಣಸಿನಕಾಯಿ
  3. 1/2 ಕಪ್ ತೆಂಗಿನ ತುರಿ 
  4. 1/2 ಟೀಸ್ಪೂನ್ ಸಾಸಿವೆ
  5. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು 

ಬೇಕಾಗುವ ಪದಾರ್ಥಗಳು - ವಿಧಾನ ೨: ( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಸೌತೆಕಾಯಿ 
  2. 1/4 ಕಪ್ ಮೊಸರು
  3. 1 - 2 ಹಸಿ ಮೆಣಸಿನಕಾಯಿ
  4. 1/2 ಕಪ್ ತೆಂಗಿನ ತುರಿ 
  5. 1/4 ಟೀಸ್ಪೂನ್ ಸಾಸಿವೆ
  6. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು 

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/4 ಚಮಚ ಸಾಸಿವೆ
  2. 1/2 ಕೆಂಪು ಮೆಣಸಿನಕಾಯಿ
  3. 4 -5 ಕರಿಬೇವು
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಸೌತೆಕಾಯಿ ಸಾಸಿವೆ ಮಾಡುವ ವಿಧಾನ - ೧:

  1. ಸೌತೆಕಾಯಿಯನ್ನು ಸಣ್ಣದಾಗಿ ಕೊಚ್ಚಿ ಅಥವಾ ತುರಿದುಕೊಳ್ಳಿ. 
  2. ಮಿಕ್ಸಿ ಜಾರಿನಲ್ಲಿ ತೆಂಗಿನ ತುರಿ, ಒಣಮೆಣಸು ಮತ್ತು ಸಾಸಿವೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  3. ತುರಿದ ಅಥವಾ ಕೊಚ್ಚಿದ ಸೌತೆಕಾಯಿ ಹಾಕಿ ಒಂದೆರಡು ಸುತ್ತು ಅರೆಯಿರಿ.
  4. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 
  5. ಎಣ್ಣೆ, ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ ಸೇರಿಸಿ. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

ಸೌತೆಕಾಯಿ ಸಾಸಿವೆ ಮಾಡುವ ವಿಧಾನ - ೨:

  1. ಸೌತೆಕಾಯಿಯನ್ನು ಸಣ್ಣದಾಗಿ ಕೊಚ್ಚಿ ಅಥವಾ ತುರಿದುಕೊಳ್ಳಿ. 
  2. ಮಿಕ್ಸಿ ಜಾರಿನಲ್ಲಿ ತೆಂಗಿನ ತುರಿ, ಹಸಿಮೆಣಸಿನಕಾಯಿ ಮತ್ತು ಸಾಸಿವೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  3. ತುರಿದ ಅಥವಾ ಕೊಚ್ಚಿದ ಸೌತೆಕಾಯಿ, ಮೊಸರು ಮತ್ತು ಉಪ್ಪು ಸೇರಿಸಿ. ಒಂದೆರಡು ಸುತ್ತು ಅರೆಯಿರಿ.
  4. ಎಣ್ಣೆ, ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ ಸೇರಿಸಿ. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

ಶುಕ್ರವಾರ, ಏಪ್ರಿಲ್ 3, 2020

Vegetable salad recipe in Kannada | ತರಕಾರಿ ಸಾಲಡ್ ಮಾಡುವ ವಿಧಾನ

Vegetable salad recipe in Kannada

Vegetable salad recipe in Kannada | ತರಕಾರಿ ಸಾಲಡ್ ಮಾಡುವ ವಿಧಾನ 

ತರಕಾರಿ ಸಲಾಡ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಕಾಬುಲ್ ಕಡ್ಲೆ
  2. 1/4 ಕಪ್ ಸಣ್ಣದಾಗಿ ಹೆಚ್ಚಿದ ಈರುಳ್ಳಿ
  3. 1/4 ಕಪ್ ಸಣ್ಣದಾಗಿ ಹೆಚ್ಚಿದ ಟೊಮೆಟೊ
  4. 1/4 ಕಪ್ ತುರಿದ ಕ್ಯಾರೆಟ್
  5. 1/4 ಕಪ್ ತುರಿದ ಮೂಲಂಗಿ
  6. 1/4 ಕಪ್ ಸಣ್ಣದಾಗಿ ಹೆಚ್ಚಿದ ಸೌತೆಕಾಯಿ
  7. 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  8. 1 ಟೇಬಲ್ ಚಮಚ ಹುರಿದ ಎಳ್ಳು
  9. 1/2 - 1 ಟೀಸ್ಪೂನ್ ಕರಿಮೆಣಸಿನಪುಡಿ
  10. 1 - 2 ಟೀಸ್ಪೂನ್ ನಿಂಬೆರಸ
  11. ಉಪ್ಪು ರುಚಿಗೆ ತಕ್ಕಷ್ಟು
  12. ಒಂದು ಚಮಚ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ

ತರಕಾರಿ ಸಾಲಡ್ ಮಾಡುವ ವಿಧಾನ:

  1. ಕಡ್ಲೆಯನ್ನು 7 - 8 ಘಂಟೆಗಳ ಕಾಲ ನೆನೆಸಿ.
  2. ನೆನೆಸಿದ ನಂತ್ರ ಸ್ವಲ್ಪ ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಮೆತ್ತಗೆ ಬೇಯಿಸಿಕೊಳ್ಳಿ. 
  3. ಒಂದು ಪಾತ್ರೆಯಲ್ಲಿ ಹೆಚ್ಚಿದ ಈರುಳ್ಳಿ, ಹೆಚ್ಚಿದ ಟೊಮೆಟೊ, ತುರಿದ ಮೂಲಂಗಿ ಮತ್ತು ತುರಿದ ಕ್ಯಾರೆಟ್ ತೆಗೆದುಕೊಳ್ಳಿ.
  4. ಬೇಯಿಸಿದ ಕಡ್ಲೆ ಸೇರಿಸಿ. 
  5. ಹುರಿದ ಎಳ್ಳು ಉದುರಿಸಿ. 
  6. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ. 
  7. ರುಚಿಗೆ ತಕ್ಕಂತೆ ಉಪ್ಪು ಮತ್ತು ಕರಿಮೆಣಸಿನ ಪುಡಿಯನ್ನು ಸೇರಿಸಿ. 
  8. ನಿಂಬೆರಸವನ್ನು ಸೇರಿಸಿ. 
  9. ಕೊನೆಯಲ್ಲಿ ಒಂದು ಚಮಚ ಎಣ್ಣೆ ಸೇರಿಸಿ ಕಲಸಿ. 
  10. ಸವಿದು ಆನಂದಿಸಿ. ಇದನ್ನು ಕೂಡಲೇ ಅಥವಾ ಸ್ವಲ್ಪ ಹೊತ್ತು ಬಿಟ್ಟು ತಿನ್ನಬಹುದು. ಈ ಸಲಾಡ್ ಆರೋಗ್ಯಕ್ಕೆ ಮತ್ತು ದೇಹದ ತೂಕ ಕಾಪಾಡಲು ಬಲು ಸಹಾಯಕಾರಿ. 

ಗುರುವಾರ, ಆಗಸ್ಟ್ 29, 2019

Batani usli recipe in Kannada | ಬಟಾಣಿ ಉಸ್ಲಿ ಮಾಡುವ ವಿಧಾನ

Batani usli recipe in Kannada

Batani usli recipe in Kannada | ಬಟಾಣಿ ಉಸ್ಲಿ ಮಾಡುವ ವಿಧಾನ 

 ಬಟಾಣಿ ಉಸ್ಲಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಒಣ ಬಟಾಣಿ
  2. 2 ಚಮಚ ಅಡುಗೆ ಎಣ್ಣೆ
  3. 1/2 ಟೀಸ್ಪೂನ್ ಸಾಸಿವೆ 
  4. 1/2 ಟೀಸ್ಪೂನ್ ಜೀರಿಗೆ
  5. 1 ಟೀಸ್ಪೂನ್ ಕಡ್ಲೆಬೇಳೆ
  6. 1 ಟೀಸ್ಪೂನ್ಉದ್ದಿನಬೇಳೆ
  7. 1 ಒಣಮೆಣಸಿನಕಾಯಿ
  8. 1 - 2 ಹಸಿರು ಮೆಣಸಿನಕಾಯಿ
  9. 4 - 5 ಕರಿಬೇವಿನ ಎಲೆ
  10. 1 ಸೆಮೀ ಉದ್ದದ ಶುಂಠಿ
  11. ಎರಡು ಚಿಟಿಕೆ ಅರಿಶಿನ ಪುಡಿ
  12. ಒಂದು ದೊಡ್ಡ ಚಿಟಿಕೆ ಇಂಗು
  13. 1/4 ಕಪ್ ತೆಂಗಿನ ತುರಿ 
  14.  2 ಟೇಬಲ್ ಚಮಚ ಕೊತಂಬರಿ ಸೊಪ್ಪು 
  15. 2 ಟೀಸ್ಪೂನ್ ಲಿಂಬೆ ರಸ (ಬೇಕಾದಲ್ಲಿ)
  16. ಉಪ್ಪು ರುಚಿಗೆ ತಕ್ಕಷ್ಟು.

ಬಟಾಣಿ ಉಸ್ಲಿ ಮಾಡುವ ವಿಧಾನ:

  1. ಬಟಾಣಿಯನ್ನು ಒಂದು ದಿನ ನೆನೆಸಿ. 
  2. ಅಗತ್ಯವಿದ್ದಷ್ಟು ನೀರು ಹಾಕಿ, ಉಪ್ಪು ಮತ್ತು ಚಿಟಿಕೆ ಅರಿಶಿನ ಸೇರಿಸಿ ಕುಕ್ಕರ್ ನಲ್ಲಿ ಮೆತ್ತಗೆ ಬೇಯಿಸಿಕೊಳ್ಳಿ. 
  3. ಬೇಯಿಸಿದ ನಂತರ ನೀರು ಬಸಿದು ಪಕ್ಕಕ್ಕಿಡಿ.
  4. ನಂತರ ಒಂದು ಬಾಣಲೆಯನ್ನು ತೆಗೆದುಕೊಳ್ಳಿ. ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಜೀರಿಗೆ ಹಾಕಿ. 
  5. ಕಡ್ಲೆಬೇಳೆ ಮತ್ತು ಉದ್ದಿನಬೇಳೆ ಸೇರಿಸಿ. 
  6. ಸಾಸಿವೆ ಸಿಡಿದ ಮೇಲೆ ಒಣಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಕತ್ತರಿಸಿದ ಶುಂಠಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿ. 
  7. ಅರಿಶಿನ ಪುಡಿ ಮತ್ತು ಇಂಗು ಸೇರಿಸಿ ಮಗುಚಿ.  
  8. ಅದಕ್ಕೆ ಬೇಯಿಸಿದ ಬಟಾಣಿಯನ್ನು ಹಾಕಿ ಮಗುಚಿ.
  9. ತೆಂಗಿನ ತುರಿ ಮತ್ತು ಕೊತಂಬರಿ ಸೊಪ್ಪು ಸೇರಿಸಿ. ಅಗತ್ಯವಿದ್ದಲ್ಲಿ ಉಪ್ಪು ಹೊಂದಿಸಿ. ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. 
  10. ಕೊನೆಯಲ್ಲಿ ಬೇಕಾದಲ್ಲಿ ಲಿಂಬೆರಸ ಸೇರಿಸಿ. ಚಹಾದೊಂದಿಗೆ ಸವಿದು ಆನಂದಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಮೇ 30, 2018

Jola recipe in Kannada | ಬೆಣ್ಣೆ ಜೋಳ ಮಾಡುವ ವಿಧಾನ

Jola recipe in Kannada

Jola recipe in Kannada | ಬೆಣ್ಣೆ ಜೋಳ ಮಾಡುವ ವಿಧಾನ 



ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1 ಜೋಳ 
  2. 1 ಟೇಬಲ್ ಚಮಚ ಬೆಣ್ಣೆ
  3. 1/4 ಟೀಸ್ಪೂನ್ ಚಾಟ್ ಮಸಾಲಾ 
  4. ದೊಡ್ಡ ಚಿಟಿಕೆ ಕಾಳು ಮೆಣಸಿನ ಪುಡಿ (ನಿಮ್ಮ ಖಾರಕ್ಕೆ ತಕ್ಕಂತೆ ಬದಲಾಯಿಸಿ) 
  5. 1/4 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಂತೆ

ಬೆಣ್ಣೆ ಜೋಳ ಮಾಡುವ ವಿಧಾನ:

  1. ಜೋಳದ ಸಿಪ್ಪೆ ಸುಲಿದು ತೊಳೆಯಿರಿ. 
  2. ಆಮೇಲೆ ಒಂದು ಚಾಕುವಿನ ಸಹಾಯದಿಂದ ಜೋಳದ ಕಾಳುಗಳನ್ನು ಹೆರೆದು ತೆಗೆಯಿರಿ. 
  3. ಈಗ ಜೋಳವನ್ನು ಆವಿಯಲ್ಲಿ ಅಥವಾ ಕುಕ್ಕರ್ ನಲ್ಲಿ ಅಥವಾ ಓವೆನ್ ನಲ್ಲಿ ಬೇಯಿಸಿ. ಕುಕ್ಕರ್ನಲ್ಲಿ ಬೇಯಿಸಿದರೆ, ನೀರನ್ನು ಸಂಪೂರ್ಣ ಬಸಿದು ತೆಗೆಯಿರಿ.  
  4. ನಂತ್ರ ಬೇಯಿಸಿದ ಜೋಳಕ್ಕೆ ಬಿಸಿ ಇರುವಾಗಲೇ ಬೆಣ್ಣೆ, ಉಪ್ಪು, ಕಾಳುಮೆಣಸಿನ ಪುಡಿ ಮತ್ತು ಚಾಟ್ ಮಸಾಲಾ ಸೇರಿಸಿ. 
  5. ಚೆನ್ನಾಗಿ ಕಲಸಿ, ಬಿಸಿ ಇರುವಾಗಲೇ ಸವಿದು ಆನಂದಿಸಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಸೆಪ್ಟೆಂಬರ್ 22, 2017

Hesarukaalu usli recipe in Kannada | ಹೆಸರು ಕಾಳು ಉಸ್ಲಿ ಮಾಡುವ ವಿಧಾನ

Hesarukaalu usli recipe in Kannada

Hesarukaalu usli recipe in Kannada | ಹೆಸರು ಕಾಳು ಉಸ್ಲಿ ಮಾಡುವ ವಿಧಾನ



ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಹೆಸರು ಕಾಳು
  2. 2 ಚಮಚ ಅಡುಗೆ ಎಣ್ಣೆ
  3. 1/2 ಟೀಸ್ಪೂನ್ ಸಾಸಿವೆ 
  4. 1/2 ಟೀಸ್ಪೂನ್ ಜೀರಿಗೆ
  5. ಒಂದು ಚಿಟಿಕೆ ಅರಿಶಿನ ಪುಡಿ
  6. ಒಂದು ದೊಡ್ಡ ಚಿಟಿಕೆ ಇಂಗು
  7. 4 - 5 ಕರಿಬೇವಿನ ಎಲೆ
  8. ಒಂದು ಸಣ್ಣ ಚೂರು ಶುಂಠಿ
  9. 1 - 2 ಹಸಿರು ಮೆಣಸಿನಕಾಯಿ ಅಥವಾ ಒಣಮೆಣಸಿನಕಾಯಿ
  10. 2 ಟೇಬಲ್ ಚಮಚ ತೆಂಗಿನ ತುರಿ 
  11.  1 ಟೇಬಲ್ ಚಮಚ ಕೊತಂಬರಿ ಸೊಪ್ಪು 
  12. 1 ಟೀಸ್ಪೂನ್ ಲಿಂಬೆ ರಸ (ಬೇಕಾದಲ್ಲಿ)
  13. ಉಪ್ಪು ರುಚಿಗೆ ತಕ್ಕಷ್ಟು.

ಹೆಸರು ಕಾಳು ಉಸ್ಲಿ ಮಾಡುವ ವಿಧಾನ:

  1. ಹೆಸರುಕಾಳನ್ನು ನೆನೆಸಿ ಮೊಳಕೆ ಕಟ್ಟಿಸಿಕೊಳ್ಳಿ. 
  2. ಬೇಕಾದಷ್ಟು ನೀರು ಹಾಕಿ ಕುಕ್ಕರ್ ನಲ್ಲಿ ಮೆತ್ತಗೆ ಬೇಯಿಸಿಕೊಳ್ಳಿ ಆದರೆ ಮುದ್ದೆಯಾಗುವುದು ಬೇಡ. 
  3. ಬೇಯಿಸಿದ ನಂತರ ನೀರು ಬಸಿದು ಪಕ್ಕಕ್ಕಿಡಿ.  ನಾನು ಈ ನೀರಿನಿಂದ ಸಾರು ಮಾಡುತ್ತೇನೆ. 
  4. ನಂತರ ಒಂದು ಬಾಣಲೆಯನ್ನು ತೆಗೆದುಕೊಳ್ಳಿ. ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಜೀರಿಗೆ ಹಾಕಿ. 
  5. ಸಾಸಿವೆ ಸಿಡಿದ ಮೇಲೆ ಹಸಿರು ಮೆಣಸಿನಕಾಯಿ, ಅರಿಶಿನ ಪುಡಿ, ಇಂಗು, ಕತ್ತರಿಸಿದ ಶುಂಠಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿ. 
  6. ಅದಕ್ಕೆ ಬೇಯಿಸಿದ ಹೆಸರುಕಾಳನ್ನು ಹಾಕಿ ಮಗುಚಿ.
  7. ಉಪ್ಪು, ತೆಂಗಿನ ತುರಿ ಮತ್ತು ಕೊತಂಬರಿ ಸೊಪ್ಪು ಸೇರಿಸಿ. ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. 
  8. ಕೊನೆಯಲ್ಲಿ ಬೇಕಾದಲ್ಲಿ ಲಿಂಬೆರಸ ಸೇರಿಸಿ. ಚಹಾದೊಂದಿಗೆ ಆನಂದಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಆಗಸ್ಟ್ 25, 2017

kadlebele cucumber kosambari recipe in kannada | ಕಡ್ಲೆಬೇಳೆ ಸೌತೆಕಾಯಿ ಕೋಸಂಬರಿ

Kadlebele cucumber kosambari recipe in kannada

Kadlebele cucumber kosambari recipe in kannada | ಕಡ್ಲೆಬೇಳೆ ಸೌತೆಕಾಯಿ ಕೋಸಂಬರಿ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 4 ಟೇಬಲ್ ಚಮಚ ಕಡ್ಲೆಬೇಳೆ
  2. 1/2 ಸಣ್ಣಗೆ ಕೊಚ್ಚಿದ ಸೌತೆಕಾಯಿ
  3. 2 ಟೇಬಲ್ ಚಮಚ ತೆಂಗಿನ ತುರಿ
  4. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು (ಬೇಕಾದಲ್ಲಿ)
  5. 1/2 ಹಸಿಮೆಣಸಿನಕಾಯಿ (ಬೇಕಾದಲ್ಲಿ)
  6. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಅಡುಗೆ ಎಣ್ಣೆ
  4. ಚಿಟಿಕೆ ಇಂಗು

ಮಾಡುವ ವಿಧಾನ:

  1. ಕಡ್ಲೆಬೇಳೆಯನ್ನು 2-3 ಗಂಟೆಗಳ ಕಾಲ ನೆನೆಸಿ. ನೆನೆಸುವಾಗ ೧/೪ ಚಮಚದಷ್ಟು ಉಪ್ಪು ಹಾಕಿ ನೆನೆಸಿ. 
  2. ಸೌತೆಕಾಯಿಯನ್ನು ಸಣ್ಣಗೆ ಕೊಚ್ಚಿಟ್ಟುಕೊಳ್ಳಿ.
  3. ಒಂದು ಬಟ್ಟಲಿನಲ್ಲಿ ನೆನೆಸಿದ ಕಡ್ಲೆಬೇಳೆ, ಕೊಚ್ಚಿದ ಸೌತೆಕಾಯಿ ಮತ್ತು ತೆಂಗಿನ ತುರಿಯನ್ನು ತೆಗೆದು ಕೊಳ್ಳಿ. 
  4. ಸ್ವಲ್ಪ ಉಪ್ಪು ಹಾಕಿ. ಬೇಕಾದಲ್ಲಿ ಹಸಿರುಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 
  5. ನಂತರ ಒಣ ಮೆಣಸಿನಕಾಯಿ ಮತ್ತು ಸಾಸಿವೆಯ ಒಗ್ಗರಣೆ ಕೊಡಿ. ಚೆನ್ನಾಗಿ ಕಲಸಿ ಬಡಿಸಿ.

ಬುಧವಾರ, ಮೇ 4, 2016

Tomato salad or bajji recipe in kannada | ಟೊಮೇಟೊ ಸಲಾಡ್ ಅಥವಾ ಬಜ್ಜಿ ಮಾಡುವ ವಿಧಾನ

Tomato salad or bajji recipe in kannada

Tomato salad or bajji recipe in kannada | ಟೊಮೇಟೊ ಸಲಾಡ್ ಅಥವಾ ಬಜ್ಜಿ ಮಾಡುವ ವಿಧಾನ 

ಅತ್ಯಂತ ಸರಳ ಮತ್ತು ರುಚಿಕರ ಸಲಾಡ್ ಅಥವಾ ಟೊಮೇಟೊ ಬಜ್ಜಿ ಮಾಡುವ ವಿಧಾನ ಇಲ್ಲಿದೆ. ಇದನ್ನು ಅಣ್ಣ ಅಥವಾ ಚಪಾತಿಯೊಂದಿಗೆ ಸವಿಯಬಹುದು. ಯಾರು ಬೇಕಾದರೂ, ಅತ್ಯಂತ ಕಡಿಮೆ ಪದಾರ್ಥಗಳನ್ನು ಉಪಯೋಗಿಸಿಕೊಂಡು ಮಾಡಬಹುದಾದ ಅಡುಗೆಯಾಗಿದ್ದು, ಒಮ್ಮೆಯಾದರೂ ಮಾಡಿ ರುಚಿ ನೋಡಲು ಮರೆಯದಿರಿ.

ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ : 2 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ದೊಡ್ಡ ಈರುಳ್ಳಿ
  2. 2 ದೊಡ್ಡ ಟೊಮ್ಯಾಟೊ
  3. 1 ಟೇಬಲ್ ಚಮಚ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು
  4. 0.5 - 1 ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ
  5. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/4 ಚಮಚ ಸಾಸಿವೆ
  2. 1 ಒಣ ಮೆಣಸಿನಕಾಯಿ
  3. 2 ಟೀಸ್ಪೂನ್ ಅಡುಗೆ ಎಣ್ಣೆ

ಟೊಮೇಟೊ ಸಲಾಡ್ ಅಥವಾ ಬಜ್ಜಿ ಮಾಡುವ ವಿಧಾನ:

  1. ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ. 
  2. ಅದಕ್ಕೆ ಸಣ್ಣಗೆ ಹೆಚ್ಚಿದ ಟೊಮೇಟೊ ಸೇರಿಸಿ. 
  3. ನಂತರ ಸಣ್ಣಗೆ ಹೆಚ್ಚಿದ ಹಸಿರುಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಹಾಕಿ. 
  4. ಚೆನ್ನಾಗಿ ಕಲಸಿ. ಎಣ್ಣೆ, ಸಾಸಿವೆ ಮತ್ತು ಒಣಮೆಣಸಿನ  ಕಾಯಿಯ ಒಗ್ಗರಣೆ ಕೊಡಿ. ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ. ಹಾಗೇ ಬೇಕಾದರೂ ಸವಿಯಬಹುದು. 

ಬುಧವಾರ, ಡಿಸೆಂಬರ್ 16, 2015

Doddapathre hasi thambuli | ದೊಡ್ಡಪತ್ರೆ ಹಸಿ ತಂಬುಳಿ


ದೊಡ್ಡಪತ್ರೆ ಹಸಿ ಎಲೆಗಳಿಂದ ತಯಾರಿಸಲಾದ ಸರಳ ಮತ್ತು ರುಚಿಕರ ತಂಬುಳಿ ಅಥವಾ ರಾಯಿತ ಇಲ್ಲಿದೆ. ಮೊಸರು ಮತ್ತು ತೆಂಗಿನಕಾಯಿ ಹಾಕಿ ತಯಾರಿಸಬಹುದಾದ ಈ ತಂಬುಳಿಯನ್ನು ಅನ್ನದ ಜೊತೆ ಸವಿಯಲು ಬಲುರುಚಿ. ವಿಶಿಷ್ಟ ರುಚಿ ಹೊಂದಿದ ಈ ಅಡುಗೆಯನ್ನು ಹೇಳಿಕೊಟ್ಟ ಅತ್ತೆಗೆ ಧನ್ಯವಾದಗಳು.
ದೊಡ್ಡಪತ್ರೆ ದೇಶ ವಿದೇಶಗಳಲ್ಲಿ ಚಿರಪರಿಚಿತವಾಗಿರುವ ಮತ್ತು ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದ್ದು, ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಸಸ್ಯದ ಬಗ್ಗೆ ಹೆಚ್ಚಿನ ಮಾಹಿತಿ, ವಿವಿಧ ಹೆಸರುಗಳು, ಔಷಧೀಯ ಗುಣಗಳು ಮತ್ತು ಇನ್ನಿತರ ಅಡುಗೆಗಳನ್ನು ಓದಲು ನಮ್ಮ "ದೊಡ್ಡಪತ್ರೆಯ ಹಲವಾರು ಅಡುಗೆಗಳು" ಪೋಸ್ಟನ್ನು ವೀಕ್ಷಿಸಿ.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ: ಇಬ್ಬರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 15-20 ದೊಡ್ಡಪತ್ರೆ ಎಲೆಗಳು
  2. 1/2 ಕಪ್ ತೆಂಗಿನತುರಿ
  3. 1 ಕಪ್ ಮೊಸರು
  4. 1 ಒಣ ಮೆಣಸಿನಕಾಯಿ
  5. 1 ಟೀಸ್ಪೂನ್ ಅಡುಗೆ ಎಣ್ಣೆ / ತುಪ್ಪ
  6. 1/4 ಟೀಸ್ಪೂನ್ ಸಾಸಿವೆ
  7. ಉಪ್ಪು ರುಚಿಗೆ ತಕ್ಕಷ್ಟು.

ದೊಡ್ಡಪತ್ರೆ ಹಸಿ ತಂಬುಳಿ ಮಾಡುವ ವಿಧಾನ:

  1. ದೊಡ್ಡಪತ್ರೆ ಎಲೆಗಳನ್ನು ತೊಳೆದು, ನೀರಾರಸಿ, ಸಣ್ಣಗೆ ಕತ್ತರಿಸಿ. ಕತ್ತರಿಸಿದ ಎಲೆಗಳನ್ನು ಒಂದು ಪಾತ್ರೆಗೆ ಹಾಕಿ, ಉಪ್ಪು ಹಾಕಿ ಚೆನ್ನಾಗಿ ಕಲಸಿ, 5 ನಿಮಿಷಗಳ ಕಾಲ ಹಾಗೆ ಬಿಡಿ.
  2. ತೆಂಗಿನಕಾಯಿಯನ್ನು ಅರೆದು ಅದೇ ಪಾತ್ರೆಗೆ ಹಾಕಿ. ಮೊಸರು ಮತ್ತು ನೀರು ಸೇರಿಸಿ ಮಗುಚಿ. ಒಂದು ಚಮಚ ಎಣ್ಣೆ ಅಥವಾ ತುಪ್ಪದಲ್ಲಿ ಸಾಸಿವೆ ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಮಂಗಳವಾರ, ನವೆಂಬರ್ 24, 2015

mulangi-capsicum-dalimbe sasive | ಮೂಲಂಗಿ-ಕ್ಯಾಪ್ಸಿಕಂ-ದಾಳಿಂಬೆ ರಾಯಿತ

mulangi-capsicum-dalimbe sasive | ಮೂಲಂಗಿ-ಕ್ಯಾಪ್ಸಿಕಂ-ದಾಳಿಂಬೆ ರಾಯಿತ ಅಥವಾ ಸಾಸಿವೆ


ಇದೊಂದು ಸುಲಭ ಮತ್ತು ಆರೋಗ್ಯಕರ ಅಡುಗೆಯಾಗಿದ್ದು, ಮೂಲಂಗಿ, ಕ್ಯಾಪ್ಸಿಕಂ (ದೊಣ್ಣೆ ಮೆಣಸು) ಮತ್ತು ದಾಳಿಂಬೆ ಉಪಯೋಗಿಸಿ ಮಾಡಿದ ಸಾಸುವೆ(ರಾಯಿತ) ಯಾಗಿದೆ. ಇದನ್ನು ಅನ್ನದೊಂದಿಗೆ ಅಥವಾ ಹಾಗೆಯೂ ತಿನ್ನ ಬಹುದು.

ಮೂಲಂಗಿಯಲ್ಲಿ ಸಿ ವಿಟಮಿನ್ ಹೇರಳವಾಗಿದ್ದು, ಅನೇಕ ಖಾಯಿಲೆಗಳಿಗೆ ರಾಮಬಾಣವಾಗಿದೆ. ಮೂಲಂಗಿಯ ನಿಯಮಿತ ಸೇವನೆಯು ಮಲಬದ್ದತೆ, ಅರಶಿನ ಕಾಮಾಲೆ, ಅಧಿಕ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಹೀಗೆ ಅನೇಕ ಖಾಯಿಲೆಗಳನ್ನು ದೂರವಿಡಲು ಸಹಕಾರಿಯಾಗಿದೆ. ಕ್ಯಾಪ್ಸಿಕಂ ಬಹಳ ರುಚಿಕರ ತರಕಾರಿಯಾಗಿದ್ದು, ಅತ್ಯಂತ ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಇದರಲ್ಲಿ ಬಹಳಷ್ಟು ವಿಟಮಿನ್ ಗಳು ಇದ್ದು, ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದೆ. ಹಾಗೂ ದಾಳಿಂಬೆಯಲ್ಲಿ ರೋಗನಿರೋಧಕ ಶಕ್ತಿ ಮತ್ತು ಅನೇಕ ಪೋಷಕಾಂಶಗಳಿದ್ದು ಆರೋಗ್ಯದಾಯಕವೆನಿಸಿಕೊಂಡಿದೆ. ಹಾಗಾಗಿ ಈ ಮೂರು ಪದಾರ್ಥಗಳನ್ನು ಸೇರಿಸಿ ಮಾಡಿದ ರುಚಿಕರ ರಾಯಿತವನ್ನು ನೀವು ಒಮ್ಮೆಯಾದರೂ ಮಾಡಿ ನೋಡಿ.

ತಯಾರಿ ಸಮಯ: 15 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ : 2 ಜನರಿಗೆ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್)

  1. 1 ಮಧ್ಯಮ ಗಾತ್ರದ ಮೂಲಂಗಿ 
  2. 1/2 ದಾಳಿಂಬೆ 
  3. 1/2 ಕ್ಯಾಪ್ಸಿಕಂ 
  4. 1/2 - 1 ಕಪ್ ತೆಂಗಿನ ತುರಿ 
  5. 1/2 - 1 ಕಪ್ ಗಟ್ಟಿ ಮೊಸರು 
  6. 1/2 ಕಪ್ ನೀರು 
  7. ಉಪ್ಪು ರುಚಿಗೆ ತಕ್ಕಷ್ಟು 
  8. 1 ಒಣ ಮೆಣಸಿನಕಾಯಿ 
  9. 1/4 ಟೀಸ್ಪೂನ್ ಸಾಸಿವೆ 
  10. 2 ಟೀಸ್ಪೂನ್ ಅಡುಗೆ ಎಣ್ಣೆ

ಮೂಲಂಗಿ-ಕ್ಯಾಪ್ಸಿಕಂ-ದಾಳಿಂಬೆ ರಾಯಿತ ಮಾಡುವ ವಿಧಾನ:

  1. ಕ್ಯಾಪ್ಸಿಕಂ ನ್ನು ಹೆಚ್ಚಿ ಒಂದು ಬಾಣಲೆಗೆ ಹಾಕಿ. 1 ಟೀಸ್ಪೂನ್ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ ಹುರಿದು, ತಣ್ಣಗಾಗಲು ಬಿಡಿ. 
  2. ಮೂಲಂಗಿ ತುರಿದು, ದಾಳಿಂಬೆ ಬೀಜ ಬಿಡಿಸಿಕೊಂಡು ಒಂದು ಪಾತ್ರೆಗೆ ಹಾಕಿ. ತೆಂಗಿನಕಾಯಿ ಯನ್ನು ನುಣ್ಣಗೆ ರುಬ್ಬಿ ಸೇರಿಸಿ. ಮೊಸರು, ನೀರು ಮತ್ತು ಉಪ್ಪು ಹಾಕಿ ಕಲಸಿ. 
  3. ಈಗ ಹುರಿದು ತಣ್ಣಗಾದ ಕ್ಯಾಪ್ಸಿಕಂ ಸೇರಿಸಿ. ಎಣ್ಣೆ, ಒಣ ಮೆಣಸು ಮತ್ತು ಸಾಸಿವೆ ಒಗ್ಗರಣೆ ಮಾಡಿ.

ಗುರುವಾರ, ಅಕ್ಟೋಬರ್ 22, 2015

Hesarubele-carrot kosambari | ಹೆಸರುಬೇಳೆ - ಕ್ಯಾರೆಟ್ ಕೋಸಂಬರಿ




Hesarubele-carrot kosambari recipe Kannada | ಹೆಸರುಬೇಳೆ - ಕ್ಯಾರೆಟ್ ಕೋಸಂಬರಿ

ಹೆಸರುಬೇಳೆ ಮತ್ತು ಕ್ಯಾರೆಟ್ ಕೋಸಂಬರಿಯಲ್ಲಿ ನೆನೆಸಿದ ಹೆಸರುಬೇಳೆ ಮತ್ತು ತುರಿದ ಕ್ಯಾರೆಟ್ ಮುಖ್ಯ ಪದಾರ್ಥಗಳಾಗಿವೆ. ಕೋಸಂಬರಿ ಕರ್ನಾಟಕದ ಸಾಂಪ್ರದಾಯಿಕ ಅಡುಗೆಗಳಲ್ಲೊಂದಾಗಿದೆ ಹಾಗೂ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಈ ಅಡುಗೆ ಚಾಲ್ತಿಯಲ್ಲಿದೆ. ಶುಭ ಸಮಾರಂಭಗಳಲ್ಲಿ, ಅತಿಥಿಗಳು ಬಂದಾಗ, ಸುಲಭವಾಗಿ ಮಾಡಬಲ್ಲ ವಿಶೇಷ ಅಡುಗೆ ಇದಾಗಿದೆ.


ತಯಾರಿ ಸಮಯ: 2 ಗಂಟೆ
ಅಡುಗೆ ಸಮಯ : 5 ನಿಮಿಷ
ಪ್ರಮಾಣ : ಇಬ್ಬರಿಗೆ
ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
  1. 1/2 ಕಪ್ ಹೆಸರುಬೇಳೆ
  2. 1 ತುರಿದ ಕ್ಯಾರೆಟ್
  3. 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  4. 2 ಟೇಬಲ್ ಸ್ಪೂನ್ ತೆಂಗಿನತುರಿ
  5. 1/2 ಟೀಸ್ಪೂನ್ ನಿಂಬೇ ರಸ
  6. 1 ಹಸಿಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು (ಬೇಕಾದಲ್ಲಿ)
  7. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಅಡುಗೆ ಎಣ್ಣೆ

ಮಾಡುವ ವಿಧಾನ:

  1. ಹೆಸರುಬೇಳೆಯನ್ನು 2-3 ಗಂಟೆಗಳ ಕಾಲ ನೆನೆಸಿ. ಕ್ಯಾರೆಟ್, ತೆಂಗಿನತುರಿ, ಹಸಿಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪಿನಂತ ಪದಾರ್ಥಗಳನ್ನು ಸಿದ್ಧ ಮಾಡಿಟ್ಟುಕೊಳ್ಳಿ.
  2. ಈಗ ಒಂದು ಬೌಲ್ ತೆಗೆದುಕೊಂಡು, ಸಿದ್ಧ ಮಾಡಿಟ್ಟುಕೊಂಡ ಎಲ್ಲಾ ಪದಾರ್ಥಗಳನ್ನು ಹಾಕಿ, ಉಪ್ಪು ಮತ್ತು ನಿಂಬೆ ರಸ ಸೇರಿಸಿ ಕಲಸಿ. ನಂತರ ಒಣ ಮೆಣಸಿನಕಾಯಿ ಮತ್ತು ಸಾಸಿವೆಯ ಒಗ್ಗರಣೆ ಕೊಡಿ.
Related Posts Plugin for WordPress, Blogger...