ಗರಿಗರಿ ಮೆಣಸಿನಕಾಯಿ ಬಜ್ಜಿ ಅಥವಾ ಬೋಂಡಾ ಹಂತ ಹಂತವಾಗಿ ಚಿತ್ರಗಳ ಮೂಲಕ ವಿವರಿಸಲಾಗಿದೆ. ಬಾಯಲ್ಲಿ ನೀರೂರಿಸುವ ಈ ಬಜ್ಜಿಗಳನ್ನು ನೀವು ಕೆಲವೇ ಕೆಲವು ನಿಮಿಷಗಳಲ್ಲಿ ತಯಾರಿಸಬಹುದು ಮತ್ತು ಈ ವಿಧಾನದಲ್ಲಿ ಮಾಡಿದ ಬಜ್ಜಿಗಳು ಸಾಧಾರಣವಾಗಿ ಮಾಡುವ ಬಜ್ಜಿಗಿಂತ ಹೆಚ್ಚು ರುಚಿಕರವಾಗಿರುತ್ತದೆ.
ಸಾಧಾರಣವಾಗಿ ಕರ್ನಾಟಕ ಶೈಲಿಯಲ್ಲಿ ಬಜ್ಜಿ ಮಾಡುವುದಾದರೆ ಹಿಟ್ಟು ದಪ್ಪನಾಗಿದ್ದು, ಬಜ್ಜಿಗಳೂ ಸಹ ದಪ್ಪನಾಗಿರುತ್ತದೆ. ನೀವು ಆ ಶೈಲಿಯಲ್ಲೇ ಮಾಡಲು ಇಚ್ಚಿಸಿದಲ್ಲಿ ನಾವು ಈಗಾಗಲೇ ಹಾಕಿರುವ ದೊಡ್ಡಪತ್ರೆ ಎಲೆಗಳ ಬಜ್ಜಿ ವಿಧಾನವನ್ನು ಓದಿ. ಎಲೆಗಳ ಬದಲು ಮೆಣಸಿನಕಾಯಿ ಉಪಯೋಗಿಸಿದರಾಯಿತು. ಆದರೆ ಒಮ್ಮೆ ಈ ವಿಧಾನದಲ್ಲಿ ಬಜ್ಜಿಗಳನ್ನು ನೀವು ಮಾಡಿನೋಡಿ. ಗರಿಗರಿಯಾಗಿದ್ದು ಬಹಳ ರುಚಿಕರವಾಗಿರುತ್ತದೆ.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 10 ನಿಮಿಷ
ಪ್ರಮಾಣ: 4 ಜನರಿಗೆ
ಅಡುಗೆ ಸಮಯ : 10 ನಿಮಿಷ
ಪ್ರಮಾಣ: 4 ಜನರಿಗೆ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
- 1.5 ಕಪ್ ಕಡ್ಲೆಹಿಟ್ಟು
- 10 ಬಜ್ಜಿ ಮೆಣಸಿನಕಾಯಿ
- 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
- ಒಂದು ದೊಡ್ಡ ಚಿಟಿಕೆ ಇಂಗು
- ಎಣ್ಣೆ ಬಜ್ಜಿ ಕಾಯಿಸಲು
- ಉಪ್ಪು ರುಚಿಗೆ ತಕ್ಕಷ್ಟು.
ಮೆಣಸಿನಕಾಯಿ ಬಜ್ಜಿ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ಅಚ್ಚಖಾರದ ಪುಡಿ, ಇಂಗು ಮತ್ತು ಉಪ್ಪನ್ನು ಹಾಕಿ. ನೀರು ಹಾಕಿ ಸ್ವಲ್ಪ ತೆಳ್ಳಗಿನ ಹಿಟ್ಟು ಸಿದ್ಧಪಡಿಸಿಕೊಳ್ಳಿ. ಹಿಟ್ಟು ಮೆಣಸಿನಕಾಯಿಗೆ ಹಿಡಿಯುವಂತಿದ್ದರೆ ಸಾಕು.
- ಮೆಣಸಿನಕಾಯಿಯನ್ನು ತೊಳೆದು, ಕತ್ತರಿಸಿ, ಬೀಜ ತೆಗೆಯಿರಿ. ಸಿದ್ಧ ಪಡಿಸಿದ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕಾಯಿಸಿ. ಬಿಸಿ ಬಿಸಿ ಹಾಗೂ ಗರಿ ಗರಿ ಮೆಣಸಿನಕಾಯಿ ಬಜ್ಜಿ ಸವಿಯಲು ಸಿದ್ಧ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ