ನಿಮಗೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ನಾವು ಈ ವರ್ಷದಲ್ಲಿ ಹೆಚ್ಚು ರುಚಿಕರ ಅಡುಗೆಗಳನ್ನು ಹಾಕುವಂತೆ ಆಗಲೆಂದು ಆ ದೇವರಲ್ಲಿ ಪ್ರಾರ್ಥಿಸೋಣ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು !!
ಆಲೂಗಡ್ಡೆ ಸಲಾಡ್ ಅಥವಾ ಆಲೂಗಡ್ಡೆ ಮೊಸರು ಬಜ್ಜಿಯನ್ನು ಅನ್ನ ಅಥವಾ ರೈಸ್ ಬಾತ್ ಗಳೊಂದಿಗೆ ಸವಿಯಬಹುದು. ಅಥವಾ ನೀವು ಊಟದ ಜೊತೆಗೆ ಆಲೂಗಡ್ಡೆ ಸಲಾಡ್ ನ್ನು ಪ್ರತ್ಯೇಕವಾಗಿ ಬಡಿಸಬಹುದು. ಈ ಸಲಾಡ್ ಅಥವಾ ಮೊಸರು ಬಜ್ಜಿಯನ್ನು ಆಲೂಗಡ್ಡೆ, ಮೊಸರು ಮತ್ತು ಕೆಲವು ಮಸಾಲೆಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಹಸಿ ಇಂಗು ಬಳಕೆ ಆಲೂಗಡ್ಡೆ ಸಲಾಡ್ ರುಚಿಯನ್ನು ಹೆಚ್ಚಿಸುತ್ತದೆ. ಸರಳ ಮತ್ತು ಅತ್ಯಂತ ರುಚಿಕರ ಆಲೂಗಡ್ಡೆ ಸಲಾಡ್ ಅಥವಾ ಆಲೂ - ಮೊಸರು - ಬಜ್ಜಿ ಮಾಡುವ ವಿಧಾನವನ್ನು ತಿಳಿಯಿರಿ.
ಆಲೂಗಡ್ಡೆ ಮೊಸರು ಬಜ್ಜಿ ವಿಡಿಯೋ
ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: ಇಬ್ಬರಿಗೆ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: ಇಬ್ಬರಿಗೆ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 2 ಆಲೂಗಡ್ಡೆ
- 1 ಟೀಸ್ಪೂನ್ ಕತ್ತರಿಸಿದ ಶುಂಠಿ
- 1 ಟೀಸ್ಪೂನ್ ಕತ್ತರಿಸಿದ ಹಸಿರು ಮೆಣಸಿನಕಾಯಿ
- ಒಂದು ದೊಡ್ಡ ಚಿಟಿಕೆ ಇಂಗು
- 2 ಟೀಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
- ಉಪ್ಪು ರುಚಿಗೆ ತಕ್ಕಷ್ಟು
- 1 ಕಪ್ ಮೊಸರು
- 1 ಟೀಸ್ಪೂನ್ ಅಡುಗೆ ಎಣ್ಣೆ
- 1/4 ಟೀಸ್ಪೂನ್ ಸಾಸಿವೆ
ಆಲೂಗಡ್ಡೆ ಮೊಸರುಬಜ್ಜಿ ಮಾಡುವ ವಿಧಾನ:
- ಆಲೂಗಡ್ಡೆ ತೊಳೆದು ನಾಲ್ಕು ಭಾಗಗಳಾಗಿ ಕತ್ತರಿಸಿ. ಸಾಕಷ್ಟು ನೀರು ಸೇರಿಸಿ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ. ತಣ್ಣಗಾದ ಮೇಲೆ ಸಿಪ್ಪೆ ತೆಗೆದು ಪುಡಿ ಮಾಡಿಕೊಳ್ಳಿ.
- ಈಗ ಕತ್ತರಿಸಿದ ಶುಂಠಿ , ಕತ್ತರಿಸಿದ ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು , ಉಪ್ಪು ಮತ್ತು ಇಂಗು ಸೇರಿಸಿ.
- ಮೊಸರು ಸೇರಿಸಿ ಕಲಸಿ. ಎಣ್ಣೆ ಮತ್ತು ಸಾಸಿವೆಯ ಒಗ್ಗರಣೆ ಕೊಡಿ. ದಯವಿಟ್ಟು ಗಮನಿಸಿ, ಒಗ್ಗರಣೆ ಹಾಕಲೇ ಬೇಕೆಂದೇನಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ