ಕ್ಯಾರೆಟ್ ಹಲ್ವಾ ಭಾರತದ ಜನಪ್ರಿಯ ಸಿಹಿ ತಿನಿಸಾಗಿದ್ದು ಬಹಳ ಸರಳ ಪಾಕವಿಧಾನವನ್ನು ಹೊಂದಿದೆ. ಅದರಲ್ಲೂ ಈ ಕೆಳಗೆ ವಿವರಿಸಲಾದ ಕ್ಯಾರಟ್ ಹಲ್ವಾ ಪಾಕವಿಧಾನ ಅತ್ಯಂತ ಸರಳವಾಗಿದ್ದು ಪ್ರೆಶರ್ಕುಕ್ಕರ್ ಬಳಸಿಕೊಂಡು ಮಾಡಲಾಗುತ್ತದೆ. ಈ ಕ್ಯಾರಟ್ ಹಲ್ವಾ ಪಾಕವಿಧಾನಕ್ಕೆ ಬಹಳ ಕಡಿಮೆ ಹಾಲು ಮತ್ತು ಕಡಿಮೆ ಸಮಯ ಸಾಕಾಗುತ್ತದೆ ಹಾಗೂ ಬಹಳ ರುಚಿಕರವಾಗಿರುತ್ತದೆ. ಹೊಸದಾಗಿ ಅಡುಗೆ ಮಾಡುವವರು ಸಹ, ಹೆದರದೆ ಆತ್ಮವಿಶ್ವಾಸದಿಂದ ಮಾಡಬಹುದಾದ ಹಲ್ವಾ ಇದಾಗಿದೆ.
ಕ್ಯಾರೆಟ್ ನಲ್ಲಿ ಅನೇಕ ಆರೋಗ್ಯಕಾರಿ ಅಂಶಗಳಿದ್ದು, ಮಕ್ಕಳಿಗೂ ಮತ್ತು ದೊಡ್ಡವರಿಗೂ ಬಹಳ ಒಳ್ಳೆಯದು. ನಮ್ಮ ಹಿಂದಿನ ಪೋಸ್ಟ್ ಕ್ಯಾರೆಟ್ ಮಿಲ್ಕ್‌ಶೇಕ್ ನಲ್ಲಿ ಕ್ಯಾರೆಟ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ. ದಯವಿಟ್ಟು ಓದಿ.
ಕ್ಯಾರೆಟ್ ಹಲ್ವಾ ವೀಡಿಯೋ
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: ಇಬ್ಬರಿಗೆ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: ಇಬ್ಬರಿಗೆ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
- 4 ಕಪ್ ಕ್ಯಾರೆಟ್ ತುರಿ ಅಥವಾ 4 ಮಧ್ಯಮ ಗಾತ್ರದ ಕ್ಯಾರೆಟ್
- 2 ಕಪ್ ಹಾಲು
- 3/4 - 1 ಕಪ್ ಸಕ್ಕರೆ
- 4 ಟೇಬಲ್ ಸ್ಪೂನ್ ತುಪ್ಪ
- 1 ಟೇಬಲ್ ಸ್ಪೂನ್ ಗೋಡಂಬಿ
- 1 ಟೇಬಲ್ ಸ್ಪೂನ್ ಒಣ ದ್ರಾಕ್ಷಿ
- 1/4 ಟೀಸ್ಪೂನ್ ಏಲಕ್ಕಿ ಪುಡಿ
ಕ್ಯಾರೆಟ್ ಹಲ್ವಾ ಮಾಡುವ ವಿಧಾನ:
- ಕ್ಯಾರೆಟ್ ನ್ನು ತೊಳೆದು ತುರಿದುಕೊಳ್ಳಿ.
- ಕ್ಯಾರೆಟ್ ತುರಿ ಮತ್ತು ಹಾಲನ್ನು ಕುಕ್ಕರಿಗೆ ಹಾಕಿ.
- ಮುಚ್ಚಳ ಮುಚ್ಚಿ ಒಂದು ಅಥವಾ ಎರಡು ವಿಷಲ್ ಬರಿಸಿ. ಹೀಗೆ ಮಾಡುವುದರಿಂದ ಕ್ಯಾರೆಟ್ ಹಲ್ವಾ ಮಾಡಲು ಸುಲಭ ಮತ್ತು ಬಹಳ ಕಡಿಮೆ ಸಮಯದಲ್ಲಿ ಆಗುತ್ತದೆ.
- ಬೇಯಿಸಿದ ಕ್ಯಾರೆಟ್ ನ್ನು ದಪ್ಪ ತಳವಿರುವ ಪಾತ್ರೆಗೆ ಹಾಕಿ.
- ದೊಡ್ಡ ಉರಿಯಲ್ಲಿ ಕುದಿಸುತ್ತ ಚೆನ್ನಾಗಿ ಮಗುಚಿ.
- ಅರ್ಧದಷ್ಟು ಹಾಲು ಕಡಿಮೆ ಆದ ಕೂಡಲೇ, ಉರಿ ತಗ್ಗಿಸಿ, ಸಕ್ಕರೆ ಹಾಕಿ. ಆಗಾಗ್ಯೆ ಮಗುಚುತ್ತಾ ಇರಿ.
- ಇನ್ನೊಂದು ಬಾಣಲೆಯಲ್ಲಿ ನಾಲ್ಕು ಟೇಬಲ್ ಚಮಚ ತುಪ್ಪ ಹಾಕಿ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹುರಿಯಿರಿ.
- ಹಲ್ವಾದ ನೀರು ಆರುತ್ತಾ ಬಂದಾಗ ಹುರಿದ ಗೋಡಂಬಿ ಮತ್ತು ದ್ರಾಕ್ಷಿಯನ್ನು ತುಪ್ಪದ ಸಮೇತ ಹಾಕಿ. ಏಲಕ್ಕಿ ಪುಡಿಯನ್ನು ಸೇರಿಸಿ. ಒಂದೆರಡು ನಿಮಿಷ ಚೆನ್ನಾಗಿ ಮಗುಚಿ. ಸ್ಟೋವ್ ಆಫ್ ಮಾಡಿ. ಬಿಸಿ ಅಥವಾ ತಣ್ಣಗೆ ಬಡಿಸಿ.
ತುಂಬಾ ಧನ್ಯವಾದಗಳು! ಮೊದಲ ಬಾರಿಗೆ ಕ್ಯಾರೆಟ್ ಹಲ್ವ ಮಾಡಿದೆ! :)
ಪ್ರತ್ಯುತ್ತರಅಳಿಸಿBahala santhosha...dhanyavadagalu.
ಅಳಿಸಿNanu aduge kaltidde nim website inda thank you so much❤❤
ಪ್ರತ್ಯುತ್ತರಅಳಿಸಿ