ಕರಾವಳಿ ಪ್ರದೇಶ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕರಾವಳಿ ಪ್ರದೇಶ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಜೂನ್ 18, 2019

Batani gasi recipe in Kannada | ಬಟಾಣಿ ಗಸಿ ಮಾಡುವ ವಿಧಾನ

Batani gasi recipe in Kannada

Batani gasi recipe in Kannada | ಬಟಾಣಿ ಗಸಿ ಮಾಡುವ ವಿಧಾನ

 ಬಟಾಣಿ ಗಸಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಬಟಾಣಿ
  2. 1 ಆಲೂಗಡ್ಡೆ
  3. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು 
  4. 1 ಟೀಸ್ಪೂನ್ ಬೆಲ್ಲ
  5. ದೊಡ್ಡ ಚಿಟಿಕೆ ಅರಶಿನ ಪುಡಿ 
  6. ಉಪ್ಪು ರುಚಿಗೆ ತಕ್ಕಷ್ಟು
  7. ಸ್ವಲ್ಪ ಕೊತ್ತಂಬರಿ ಸೊಪ್ಪು

ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 - 4 ಒಣಮೆಣಸಿನಕಾಯಿ
  2. 2 ಟೀಸ್ಪೂನ್ ಕೊತ್ತಂಬರಿ ಬೀಜ 
  3. 1/2 ಟೀಸ್ಪೂನ್ ಜೀರಿಗೆ 
  4. 3/4 ಕಪ್ ತೆಂಗಿನ ತುರಿ 

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 5 - 6 ಕರಿಬೇವಿನ ಎಲೆ
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಬಟಾಣಿ ಗಸಿ ಮಾಡುವ ವಿಧಾನ:

  1. ಬಟಾಣಿಯನ್ನು ಒಂದುದಿನ ಅಥವಾ ರಾತ್ರೆಯಿಡಿ ನೆನೆಹಾಕಿ. 
  2. ನಂತ್ರ ನೆನೆಸಿದ ಬಟಾಣಿಯನ್ನು ಕುಕ್ಕರ್ ಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ಎರಡು ವಿಷಲ್ ಮಾಡಿ ಬೇಯಿಸಿ. 
  3. ನಂತರ ಅದಕ್ಕೆ ಸಿಪ್ಪೆ ತೆಗೆದು ಕತ್ತರಿಸಿದ ಆಲೂಗಡ್ಡೆ, ಅರಶಿನ, ಉಪ್ಪು ಮತ್ತು ನೀರು ಹಾಕಿ. ಪುನಃ ಎರಡು ವಿಷಲ್ ಮಾಡಿ ಬೇಯಿಸಿ.
  4. ಆ ಸಮಯದಲ್ಲಿ, ಮಿಕ್ಸಿಯಲ್ಲಿ ಕೊತ್ತಂಬರಿ ಬೀಜ, ಜೀರಿಗೆ, ಒಣಮೆಣಸಿನಕಾಯಿ ಮತ್ತು ತೆಂಗಿನ ತುರಿ ಹಾಕಿ ಅರೆಯಿರಿ. 
  5. ಬೇಯಿಸಿದ ಬಟಾಣಿ ಮತ್ತು ಆಲೂಗಡ್ಡೆಗೆ ಅರೆದ ಮಸಾಲೆ ಹಾಕಿ.
  6. ಉಪ್ಪು, ಹುಳಿ ಮತ್ತು ಬೆಲ್ಲ ಸೇರಿಸಿ. 
  7. ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ.
  8. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ. 
  9. ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
  10. ಚಪಾತಿ, ರೊಟ್ಟಿ ಅಥವಾ ಪೂರಿಯೊಂದಿಗೆ ಬಡಿಸಿ, ಆನಂದಿಸಿ !!


ಮಂಗಳವಾರ, ಮೇ 14, 2019

Malpuri recipe in Kannada | ಮಾಲ್ಪುರಿ ಮಾಡುವ ವಿಧಾನ

Malpuri recipe in Kannada

Malpuri recipe in Kannada |ಮಾಲ್ಪುರಿ ಮಾಡುವ ವಿಧಾನ

ಮಾಲ್ಪುರಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೈದಾ ಹಿಟ್ಟು
  2. 1/4 ಕಪ್ ಸಕ್ಕರೆ
  3. ದೊಡ್ಡ ಚಿಟಿಕೆ ಏಲಕ್ಕಿ ಪುಡಿ
  4. ಒಂದು ಚಿಟಿಕೆ ಹಳದಿ ಬಣ್ಣ ಅಥವಾ ಅರಿಶಿನ
  5. 1/2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ) 
  6. ಚಿಟಿಕೆ ಅಡುಗೆ ಸೋಡಾ
  7. ನೀರು ಸುಮಾರು ಒಂದು ಲೋಟ
  8. ಎಣ್ಣೆ ಮಾಲ್ಪುರಿ ಕಾಯಿಸಲು

ಮಾಲ್ಪುರಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಸಕ್ಕರೆ ಮತ್ತು ಏಲಕ್ಕಿ ಪುಡಿ ತೆಗೆದುಕೊಳ್ಳಿ.
  2. ಅದಕ್ಕೆ ಉಪ್ಪು, ಹಳದಿ ಬಣ್ಣ (ಅಥವಾ ಅರಿಶಿನ) ಮತ್ತು ಅಡುಗೆ ಸೋಡಾ ಸೇರಿಸಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ, ದಪ್ಪ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಸುಮಾರು ಒಂದು ಕಪ್ ನೀರು ಬೇಕಾಗುವುದು. 
  4. ಒಂದು ಘಂಟೆ ಹಿಟ್ಟನ್ನು ಪಕ್ಕಕ್ಕಿಡಿ. 
  5. ಆಮೇಲೆ ಒಂದು ಅಗಲವಾದ ಬಾಣಲೆಯಲ್ಲಿ, ಅಥವಾ ದೋಸೆ ಕಲ್ಲಿನಲ್ಲಿ, ಸ್ವಲ್ಪ ಎಣ್ಣೆ ಬಿಸಿಮಾಡಿ. ಸುಮಾರು ಅರ್ಧ ಸೆಂಟಿಮೀಟರ್ ನಷ್ಟು ಎಣ್ಣೆ ಇದ್ದರೆ ಸಾಕು. 
  6. ನಂತರ ಒಂದು ಸೌಟು ಹಿಟ್ಟು ಸುರಿಯಿರಿ. 
  7. ಅಂಚು ಕಂದು ಬಣ್ಣಕ್ಕೆ ತಿರುಗಿದಾಗ, ಸಟ್ಟುಗದ ಸಹಾಯದಿಂದ ತಿರುವಿ ಹಾಕಿ, ಇನ್ನೊಂದು ಬದಿಯೂ ಕಾಯಿಸಿ. 
  8. ಹೀಗೆ ಎಲ್ಲ ಮಾಲ್ಪುರಿ ಮಾಡಿ. ಸವಿದು ಆನಂದಿಸಿ. 

ಶನಿವಾರ, ಜನವರಿ 5, 2019

Badane bol koddel recipe in Kannada | ಬದನೆ ಬೋಳು ಕೊದ್ದೆಲ್ ಮಾಡುವ ವಿಧಾನ

Badane bol koddel recipe in Kannada

Badane bol koddel recipe in Kannada | ಬದನೆ ಬೋಳು ಕೊದ್ದೆಲ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್ )

  1. 4 ಮಧ್ಯಮ ಗಾತ್ರದ ಬದನೆಕಾಯಿ (ಉಡುಪಿ ಮಟ್ಟುಗುಳ್ಳ)
  2. 1/2 ಕಪ್ ತೊಗರಿಬೇಳೆ
  3. 1 - 2 ಹಸಿಮೆಣಸು
  4. 2 ಟೀಸ್ಪೂನ್ ಬೆಲ್ಲ
  5. ದೊಡ್ಡ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  6. 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  7. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 4 - 5 ಕರಿಬೇವಿನ ಎಲೆ 
  5. 2 ಟೀಸ್ಪೂನ್ ಎಣ್ಣೆ ಅಥವಾ ತುಪ್ಪ
  6. 1/4 ಟೀಸ್ಪೂನ್ ಇಂಗು

ಬದನೆ ಬೋಳು ಕೊದ್ದೆಲ್ ಅಥವಾ ಬೋಳು ಹುಳಿ ಮಾಡುವ ವಿಧಾನ:

  1. ಬದನೆಕಾಯಿಯನ್ನು ಕತ್ತರಿಸಿ 15 ನಿಮಿಷ ನೀರಿನಲ್ಲಿ ಹಾಕಿಡಿ. 
  2. ಒಂದು ಕುಕ್ಕರ್ ನಲ್ಲಿ ತೊಗರಿ ಬೇಳೆಯನ್ನು ಹಾಕಿ ತೊಳೆಯಿರಿ. ಅದಕ್ಕೆ ೧ ಕಪ್ ನೀರು, ಅರಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ. 
  3. ಮುಚ್ಚಳ ಮುಚ್ಚಿ ಎರಡು ವಿಷಲ್ ಮಾಡಿ ಮೆತ್ತಗೆ ಬೇಯಿಸಿ. 
  4. ಈಗ ಬೇಳೆಯಿರುವ ಕುಕ್ಕರ್ ಗೆ ಕತ್ತರಿಸಿದ ಬದನೆಕಾಯಿ, ಉಪ್ಪು, ಹುಳಿ, ಬೆಲ್ಲ ಮತ್ತು ಸೀಳಿದ ಹಸಿರುಮೆಣಸಿನಕಾಯಿಯನ್ನು ಹಾಕಿ. 
  5. ನೀರು ಸೇರಿಸಿ ಬದನೆಕಾಯಿ ಮೆತ್ತಗಾಗುವವರೆಗೆ ಬೇಯಿಸಿ. 
  6. ಕೊತ್ತಂಬರಿ ಸೊಪ್ಪು ಸೇರಿಸಿ ಸ್ಟವ್ ಆಫ್ ಮಾಡಿ. ಬೇಕಾದಲ್ಲಿ ಉಪ್ಪು, ಸಿಹಿ ಮತ್ತು ಹುಳಿಯನ್ನು ಸರಿಹೊಂದಿಸಿ.
  7. ಸಣ್ಣ ಬಾಣಲೆ ಅಥವಾ ಒಗ್ಗರಣೆ ಸೌಟಿನಲ್ಲಿ ತುಪ್ಪ, ಕೆಂಪು ಮೆಣಸಿನಕಾಯಿ, ಸಾಸಿವೆ, ಜೀರಿಗೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ ಸೇರಿಸಿ. ಬಿಸಿಯಾದ ಅನ್ನದೊಂದಿಗೆ ಬಡಿಸಿ.

ಶುಕ್ರವಾರ, ಆಗಸ್ಟ್ 17, 2018

Kotte kadubu recipe in Kannada | ಕೊಟ್ಟೆ ಕಡುಬು ಮಾಡುವ ವಿಧಾನ

Kotte kadubu recipe in Kannada

Kotte kadubu recipe in Kannada | ಕೊಟ್ಟೆ ಕಡುಬು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 3 ಕಪ್ ಇಡ್ಲಿ ರವ ಅಥವಾ ಉಪ್ಪಿಟ್ಟಿನ ರವೇ
  2. 1 ಕಪ್ ಉದ್ದಿನ ಬೇಳೆ 
  3. 1/4 - 1/2 ಟೀಸ್ಪೂನ್ ಮೆಂತ್ಯ 
  4. 0 - 1/2 ಕಪ್ ಅವಲಕ್ಕಿ 
  5. ಉಪ್ಪು ನಿಮ್ಮ ರುಚಿ ಪ್ರಕಾರ
  6. 16 - 20 ಹಲಸಿನ ಎಲೆಗಳು

ಕೊಟ್ಟೆ ಕಡುಬು ಮಾಡುವ ವಿಧಾನ:

  1. ಉದ್ದಿನಬೇಳೆ ಮತ್ತು ಮೆಂತ್ಯವನ್ನು ತೊಳೆದು ಒಳ್ಳೆಯ ನೀರಿನಲ್ಲಿ 4 - 5 ಗಂಟೆಗಳ ಕಾಲ ನೆನೆಸಿಡಿ. ಉತ್ತಮ ಫಲಿತಾಂಶಕ್ಕಾಗಿ ಇಡೀ ಉದ್ದಿನ ಬೇಳೆ ಬಳಸಿ.
  2. ಅವಲಕ್ಕಿಯನ್ನು ಬಳಸುತ್ತೀರಾದರೆ ಅದನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿಡಿ. ನಾನು ಗ್ರೈಂಡರ್ ಬಳಸುವುದರಿಂದ ಅವಲಕ್ಕಿ ಸೇರಿಸುವುದಿಲ್ಲ. 
  3. 4 - 5 ಗಂಟೆಗಳ ನಂತರ ನೆನೆಸಿಟ್ಟ ಬೇಳೆಯ ನೀರನ್ನು ಬಸಿದು ಪಕ್ಕಕ್ಕಿಡಿ. ಅರೆಯುವಾಗ ಈ ನೀರು ಉಪಯೋಗಿಸಿದಲ್ಲಿ ಹಿಟ್ಟು ಚೆನ್ನಾಗಿ ಹುದುಗಲು ಸಹಾಯವಾಗುತ್ತದೆ.
  4. ಈಗ ಗ್ರೈಂಡರ್ ಗೆ ನೆನೆಸಿದ ಉದ್ದಿನಬೇಳೆ, ಮೆಂತ್ಯ ಮತ್ತು ಅವಲಕ್ಕಿ (ಬಳಸುತ್ತೀರಾದಲ್ಲಿ) ಹಾಕಿ.
  5. ಏತನ್ಮಧ್ಯೆ, ಇಡ್ಲಿ ರವೆಗೆ ಬೆಚ್ಚಗಿನ ನೀರು ಹಾಕಿ ನೀರನ್ನು ಸಂಪೂರ್ಣವಾಗಿ ಬಸಿದು ಪಕ್ಕಕ್ಕೆ ಹೊಂದಿಸಿ. ಉಪ್ಪಿಟ್ಟಿನ ರವೇ ಬಳಸುವುದಾದಲ್ಲಿ, ಒಂದೈದು ನಿಮಿಷ ಸಣ್ಣ ಹುರಿದು, ಬಿಸಿ ಕಡಿಮೆ ಆದ ಮೇಲೆ ಸೇರಿಸಬೇಕು. 
  6. ಈಗ ಗ್ರೈಂಡರ್ ನಲ್ಲಿರುವ ಬೇಳೆಯನ್ನು ಸ್ವಲ್ಪ ಸ್ವಲ್ಪ ನೀರು ಸೇರಿಸುವ ಮೂಲಕ ನಯವಾಗಿ ಅರೆಯಿರಿ. ಅರೆಯಲು ಬೇಳೆ ನೆನೆಸಿದ ನೀರು ಉಪಯೋಗಿಸಿ. ಮಿಕ್ಸರ್ ಗ್ರೈಂಡರ್ನಲ್ಲಿ ರುಬ್ಬುವ ಸಂದರ್ಭದಲ್ಲಿ ತಣ್ಣೀರು ಸೇರಿಸಲು ಪ್ರಯತ್ನಿಸಿ. ಏಕೆಂದರೆ ಮಿಕ್ಸಿಯಲ್ಲಿ ಅರೆಯುವಾಗ ಹಿಟ್ಟು ಬಿಸಿಯಾಗುತ್ತದೆ.  ಆಗ ಹಿಟ್ಟು ಚೆನ್ನಾಗಿ ಹುದುಗುವುದಿಲ್ಲ.
  7. ಉದ್ದಿನ ಬೇಳೆ ಅರೆದು ಮುಗಿಯುವ ಸಂದರ್ಭದಲ್ಲಿ ತೊಳೆದಿಟ್ಟ ಇಡ್ಲಿ ರವಾ ಸೇರಿಸಿ,  5 ನಿಮಿಷ ರುಬ್ಬುವುದನ್ನು ಮುಂದುವರೆಸಿ. ಬೇಕೆನಿಸಿದರೆ ನೀರು ಸೇರಿಸಿ. ಇಡ್ಲಿ ಹಿಟ್ಟು ಸೌಟಿನಿಂದ ದಪ-ದಪನೆ ಬೀಳುವಷ್ಟು ಗಟ್ಟಿಯಾಗಿರಬೇಕು. ನೀವು ಮಿಕ್ಸರ್ ಗ್ರೈಂಡರ್ ಬಳಸುತ್ತಿದ್ದರೆ, ತೊಳೆದಿಟ್ಟ ಇಡ್ಲಿ ರವಾ ಇರುವ ಪಾತ್ರೆ ಗೆ ಅರೆದ ಉದ್ದಿನ ಹಿಟ್ಟನ್ನು ಹಾಕಿ, ನಂತರ ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ.
  8. ಒಂದು ದೊಡ್ಡ ಪಾತ್ರೆಯಲ್ಲಿ ಚೆನ್ನಾಗಿ ಕಲಸಿದ ಹಿಟ್ಟನ್ನು ಅಥವಾ ಗ್ರೈಂಡರ್ ನಲ್ಲಿ ಅರೆದ ಹಿಟ್ಟನ್ನು ಸುರಿಯಿರಿ.
  9. ಮುಚ್ಚಳವನ್ನು ಮುಚ್ಚಿ ಮತ್ತು 7 - 8 ಗಂಟೆಗಳ ಕಾಲ ಹುದುಗಲು ಬಿಡಿ.   
  10. ಹುದುಗುವಿಕೆಯ ನಂತರ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
  11. ಹಲಸಿನ ಎಲೆಗಳನ್ನು ಸ್ವಚ್ಛಗೊಳಿಸಿ, ನಾಲ್ಕು ಎಲೆಗಳನ್ನು ತೆಗೆದುಕೊಂಡು ಕೊಟ್ಟೆ ತಯಾರಿಸಿ. 
  12. ಮಾಡಲು ಕಷ್ಟವಾದಲ್ಲಿ ಲೋಟದೊಳಗೆ ಎಲೆಗಳನ್ನು ಇಟ್ಟು ಕೊಟ್ಟೆ ಮಾಡಬಹುದು. ಹೀಗೆ ಎಲ್ಲ ಕೊಟ್ಟೆಗಳನ್ನು ಮಾಡಿಟ್ಟುಕೊಳ್ಳಿ. 
  13. ಅದಕ್ಕೆ ಇಡ್ಲಿ ಹಿಟ್ಟನ್ನು ಹಾಕಿ.
  14. 15 - 20 ನಿಮಿಷಗಳ ಕಾಲ ಅದನ್ನು ಸೆಕೆಯಲ್ಲಿ ಬೇಯಿಸಿ. ಕಡುಬಿನ ಗಾತ್ರದ ಮೇಲೆ ಸಮಯ ಬದಲಾಗಬಹುದು..ಚಟ್ನಿ ಮತ್ತು ಸಾಂಬಾರ್ ನೊಂದಿಗೆ ಬಡಿಸಿ.   

ಬುಧವಾರ, ಜೂನ್ 27, 2018

Uddinittu recipe in Kannada | ಉದ್ದಿನಿಟ್ಟು ಮಾಡುವ ವಿಧಾನ

Uddinittu  recipe in Kannada

Uddinittu  recipe in Kannada | ಉದ್ದಿನಿಟ್ಟು ಮಾಡುವ ವಿಧಾನ 


ಉದ್ದಿನಿಟ್ಟು ವೀಡಿಯೊ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಅಥವಾ 4 ಚಮಚ ಉದ್ದಿನ ಹಿಟ್ಟು
  2. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ
  3. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಶುಂಠಿ
  4. 1 ಟೀಸ್ಪೂನ್ ಕತ್ತರಿಸಿದ ಕರಿಬೇವು
  5. 1 ಟೀಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
  6. ಉಪ್ಪು ರುಚಿಗೆ ತಕ್ಕಷ್ಟು
  7. 1 ಕಪ್ ಮೊಸರು ಅಥವಾ ಮಜ್ಜಿಗೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಟೀಸ್ಪೂನ್ ಅಡುಗೆ ಎಣ್ಣೆ
  2. 1ಸಂಡಿಗೆ ಮೆಣಸು ಅಥವಾ ಮಜ್ಜಿಗೆ ಮೆಣಸು
  3. ಒಂದು ಚಿಟಿಕೆ ಇಂಗು
  4. 1/4 ಟೀಸ್ಪೂನ್ ಸಾಸಿವೆ

ಉದ್ದಿನಿಟ್ಟು ಮಾಡುವ ವಿಧಾನ:

  1. ಉದ್ದಿನ ಬೇಳೆಯನ್ನು ಮಿಕ್ಸಿಯಲ್ಲಿ ಪುಡಿಮಾಡಿಕೊಳ್ಳಿ.
  2. ಸುಮಾರು ನಾಲ್ಕು ಚಮಚದಷ್ಟು ಹಿಟ್ಟನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ. 
  3. ಅದಕ್ಕೆ ಸಣ್ಣಗೆ ಕತ್ತರಿಸಿದ ಹಸಿರುಮೆಣಸಿನಕಾಯಿ, ಶುಂಠಿ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಕಲಸಿ. 
  4. ಅದಕ್ಕೆ ಮೊಸರು ಅಥವಾ ಮಜ್ಜಿಗೆ ಸೇರಿಸಿ ತೆಳುವಾದ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. 
  5. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 
  6. ಎಣ್ಣೆ, ಮಜ್ಜಿಗೆಮೆಣಸು, ಇಂಗು ಮತ್ತು ಸಾಸಿವೆಯ ಒಗ್ಗರಣೆ ಕೊಡಿ. ಮಜ್ಜಿಗೆ ಮೆಣಸಿಲ್ಲದಿದ್ದಲ್ಲಿ, ಒಣಮೆಣಸನ್ನು ಹಾಕಬಹುದು. ಬಿಸಿ ಅನ್ನದೊಂದಿಗೆ ಬಡಿಸಿ.

ಮಂಗಳವಾರ, ಜೂನ್ 5, 2018

Mavina hannina rasayana recipe in kannada | ಮಾವಿನ ಹಣ್ಣಿನ ರಸಾಯನ ಮಾಡುವ ವಿಧಾನ

Mavina hannina rasayana recipe in kannada

Mavina hannina rasayana recipe in kannada | ಮಾವಿನ ಹಣ್ಣಿನ ರಸಾಯನ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 - 2 ಮಾವಿನಹಣ್ಣು
  2. 3/4 ಕಪ್ ತೆಂಗಿನತುರಿ ಅಥವಾ 1/2 ಗಟ್ಟಿ ತೆಂಗಿನಕಾಯಿ ಹಾಲು
  3. 1/2 ಕಪ್ ನೀರು (ಕಾಯಿಹಾಲು ತೆಗೆಯಲು)
  4. 1/4 ಕಪ್ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  5. ಚಿಟಿಕೆ ಉಪ್ಪು.

ಮಾವಿನ ಹಣ್ಣಿನ ರಸಾಯನ ಮಾಡುವ ವಿಧಾನ:

  1. ಮಾವಿನಹಣ್ಣು ತೊಳೆದು, ಸಣ್ಣದಾಗಿ ಕತ್ತರಿಸಿ ಅಥವಾ ಕೊಚ್ಚಿ. ಮೇಲೆ ಹಾಕಿದ ವಿಡಿಯೋ ನೋಡಿ.  
  2. ಆಮೇಲೆ ವಾಟೆ ಅಥವಾ ಗೊರಟಿನ ಭಾಗದ ಮಾವಿನ ಹಣ್ಣನ್ನು ಕೊಚ್ಚಿ ಸೇರಿಸಿ. ಗೊರಟು ಬೇಕಾದರೆ ಹಾಕಬಹುದು. 
  3. ನಂತ್ರ ಪುಡಿ ಮಾಡಿದ ಬೆಲ್ಲ ಸೇರಿಸಿ. 
  4. ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆಯಿರಿ. 
  5. ಅರೆದ ಮಿಶ್ರಣವನ್ನು ಬಟ್ಟೆಯಲ್ಲಿ ಹಿಂಡಿ, ಕಾಯಿ ಹಾಲನ್ನು ತೆಗೆದು, ಮಾವಿನಹಣ್ಣು ಮತ್ತು ಬೆಲ್ಲ ಇರುವ ಪಾತ್ರೆಗೆ ಹಾಕಿ. 
  6. ಚಿಟಿಕೆ ಉಪ್ಪು ಹಾಕಿ. ಚೆನ್ನಾಗಿ ಕಲಸಿ.
  7. ನೀರು ದೋಸೆ, ತೆಳು ಅವಲಕ್ಕಿ ಅಥವಾ ಒತ್ತು ಶಾವಿಗೆಯೊಂದಿಗೆ ಬಡಿಸಿ.

ಗುರುವಾರ, ಅಕ್ಟೋಬರ್ 12, 2017

Basale soppu sambar recipe in Kannada | ಬಸಳೆ ಸೊಪ್ಪು ಸಾಂಬಾರ್ ಮಾಡುವ ವಿಧಾನ

Basale soppu sambar recipe in Kannada

Basale soppu sambar recipe in Kannada | ಬಸಳೆ ಸೊಪ್ಪು ಸಾಂಬಾರ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಟ್ಟು ಬಸಳೆ ಸೊಪ್ಪು 
  2. 1/4 ಕಪ್ ಅಲಸಂದೆ ಕಾಳು ಅಥವಾ ಹುರಿದ ಹುರುಳಿಕಾಳು
  3. 1/4 ಟೀಸ್ಪೂನ್ ಅರಿಶಿನ ಪುಡಿ
  4. 2 ಟೀಸ್ಪೂನ್ ಕಲ್ಲುಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  5. ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1 ಕಪ್ ತೆಂಗಿನ ತುರಿ
  2. 2 - 4 ಒಣ ಮೆಣಸಿನಕಾಯಿ
  3. 2 ಟೀಸ್ಪೂನ್ ಕೊತ್ತಂಬರಿ ಬೀಜ
  4. 1/2 ಟೀಸ್ಪೂನ್ ಸಾಸಿವೆ
  5. 2 ಬೇಳೆ ಬೆಳ್ಳುಳ್ಳಿ 
  6. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 5 - 6 ಕರಿಬೇವು
  3. 1/4 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಬಸಳೆ ಸೊಪ್ಪು ಸಾಂಬಾರ್ ಮಾಡುವ ವಿಧಾನ: 

  1. ಬಸಳೆ ಎಲೆ ಮತ್ತು ದಂಟನ್ನು ಬೇರೆ ಮಾಡಿ ತೊಳೆಯಿರಿ. ದಂಟನ್ನು ಬೆರಳುದ್ದ ಕತ್ತರಿಸಿ. ಸೊಪ್ಪನ್ನು ಸಣ್ಣಗೆ ಕತ್ತರಿಸಿ.
  2. ಒಂದು ಕುಕ್ಕರ್ ನಲ್ಲಿ ಅಲಸಂದೆ ಕಾಳನ್ನು (ಅಥವಾ ಹುರಿದ ಹುರುಳಿಕಾಳು) ತೆಗೆದುಕೊಂಡು ತೊಳೆಯಿರಿ. ಅದಕ್ಕೆ ಕತ್ತರಿಸಿದ ಬಸಳೆ ಸೊಪ್ಪಿನ ದಂಟನ್ನು ಹಾಕಿ, ಅರ್ಧ ಲೋಟ ನೀರು ಹಾಕಿ, ಒಂದು ವಿಷಲ್ ಮಾಡಿ. 
  3. ನಂತರ ಅದಕ್ಕೆ ಕತ್ತರಿಸಿದ ಸೊಪ್ಪು, ಸ್ವಲ್ಪ ಉಪ್ಪು ಮತ್ತು ಅರಿಶಿನ ಪುಡಿ ಹಾಕಿ. 
  4. ಅರ್ಧ ಲೋಟ ನೀರು ಹಾಕಿ ಪುನಃ ಒಂದು ವಿಷಲ್ ಮಾಡಿ ಬೇಯಿಸಿ ಕೊಳ್ಳಿ. 
  5. ಈಗ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜ ಮತ್ತು ಸಾಸಿವೆಯನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
  6. ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ನೀರು ಸೇರಿಸಿ ಅರೆಯಿರಿ. 
  7. ಕೊನೆಯಲ್ಲಿ ಬೆಳ್ಳುಳ್ಳಿ ಹಾಕಿ ಒಂದು ಸುತ್ತು ಅರೆದು ತೆಗೆಯಿರಿ. 
  8. ಅರೆದ ಮಸಾಲೆಯನ್ನು ತರಕಾರಿ ಮತ್ತು ಬೇಳೆ ಇರುವ ಕುಕ್ಕರ್ ಗೆ ಹಾಕಿ. ಉಪ್ಪು ಮತ್ತು ಹುಣಿಸೆರಸ ಹಾಕಿ.
  9. ಕೊನೆಯಲ್ಲಿ ಬೇಕಾದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ. 
  10. ಒಣ ಮೆಣಸು, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಮಂಗಳವಾರ, ಅಕ್ಟೋಬರ್ 10, 2017

Southe pundi or unde kadubu recipe in Kannada | ಸೌತೆ ಪುಂಡಿ ಅಥವಾ ಉಂಡೆ ಕಡುಬು ಮಾಡುವ ವಿಧಾನ

Southe pundi or unde kadubu recipe in Kannada

Southe pundi or unde kadubu recipe in Kannada | ಸೌತೆ ಪುಂಡಿ ಅಥವಾ ಉಂಡೆ ಕಡುಬು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1.5 ಕಪ್ ಉತ್ತಮ ಗುಣಮಟ್ಟದ ದೋಸೆ ಅಕ್ಕಿ
  2. 1/2 ಕಪ್ ತೆಂಗಿನ ತುರಿ
  3. 1/2ಮುಳ್ಳು ಸೌತೆಕಾಯಿ
  4. 2.5 ಕಪ್ ನೀರು 
  5. ಉಪ್ಪು ರುಚಿಗೆ ತಕ್ಕಷ್ಟು


ಸೌತೆ ಪುಂಡಿ ಅಥವಾ ಉಂಡೆ ಕಡುಬು ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ನೀರಾರಲು ಬಿಡಿ. 
  2. ನಂತರ ಮಿಕ್ಸಿಯಲ್ಲಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಕೆಲವು ಸೆಕೆಂಡ್ ಗಳ ಕಾಲ ಮಿಕ್ಸಿ ಮಾಡಿದರೆ ಸಾಕಾಗುತ್ತದೆ. 
  3. ಮುಳ್ಳುಸೌತೆಯನ್ನು ಮತ್ತು ತೆಂಗಿನಕಾಯಿಯನ್ನು ತುರಿದಿಡಿ. 
  4. ಒಂದು ಬಾಣಲೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  5. ನೀರು ಕುದಿಯಲು ಪ್ರಾರಂಭಿಸಿದ ಕೂಡಲೇ ಮೊದಲಿಗೆ ತುರಿದ ಮುಳ್ಳು ಸೌತೆ ಮತ್ತು ತೆಂಗಿನ ತುರಿ ಹಾಕಿ. 
  6. ನಂತ್ರ ಅಕ್ಕಿ ತರಿ ಅಥವಾ ರವೆಯನ್ನು ಹಾಕುತ್ತಾ ದೋಸೆ ಸಟ್ಟುಗ ಉಪಯೋಗಿಸಿ ಗಂಟಾಗದಂತೆ ಮಗುಚಿ. 
  7. ಮಧ್ಯಮ ಉರಿಯಲ್ಲಿ ಗಟ್ಟಿಯಾಗುವವರೆಗೆ ಮಗುಚಿ. ತುಂಬ ಗಟ್ಟಿಯಾಗುವುದು ಬೇಡ. ಸಟ್ಟುಗ ಬೀಳದೆ ನೇರ ನಿಲ್ಲುವಷ್ಟು ಗಟ್ಟಿ ಆದರೆ ಸಾಕು. ಸ್ಟವ್ ಆಫ್ ಮಾಡಿ.
  8. ಸ್ವಲ್ಪ ಬಿಸಿ ಆರಿದ ಮೇಲೆ, ಕೈಗೆ ನೀರು ಮುಟ್ಟಿಸಿಕೊಂಡು, ಸಣ್ಣ ಕಿತ್ತಳೆ ಗಾತ್ರದ ಉಂಡೆಗಳನ್ನು ಮಾಡಿ, ಹೆಬ್ಬೆರಳಿಂದ ಒಂದು ಗುಳಿಯನ್ನು ಮಾಡಿ. ಅಥವಾ ನಿಮ್ಮಿಷ್ಟದಂತೆ ಚಪ್ಪಟೆ ಅಥವಾ ಗೋಲಾಕಾರದಲ್ಲೂ ಮಾಡಬಹುದು. 
  9. ಸೆಕೆಯಲ್ಲಿ (ಆವಿಯಲ್ಲಿ) 15 ನಿಮಿಷ ಬೇಯಿಸಿ. ಬೇಯಿಸುವ ಸಮಯ ಕಡುಬಿನ ಪ್ರಮಾಣದ ಮೇಲೆ ಬದಲಾಗಬಹುದು. ಚಟ್ನಿ, ಸಾಂಬಾರ್ ಅಥವಾ ಸಾರಿನಿಂದಿಗೆ ಸವಿದು ಆನಂದಿಸಿ.

ಶುಕ್ರವಾರ, ಆಗಸ್ಟ್ 18, 2017

Capsicum menaskai recipe in Kannada | ದೊಣ್ಣೆಮೆಣಸು ಮೆಣಸ್ಕಾಯಿ ಮಾಡುವ ವಿಧಾನ

Capsicum menaskai recipe in Kannada

Capsicum menaskai recipe in Kannada | ದೊಣ್ಣೆಮೆಣಸು ಮೆಣಸ್ಕಾಯಿ ಮಾಡುವ ವಿಧಾನ 

ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಮಧ್ಯಮ ಗಾತ್ರದ ದೊಣ್ಣೆಮೆಣಸು
  2. 4 ಅಂಬಟೆ ಅಥವಾ ಅಮಟೆಕಾಯಿ ಅಥವಾ ನಿಂಬೆ ಗಾತ್ರದ ಹುಣಿಸೇಹಣ್ಣು
  3. 1 ಚಿಟಿಕೆ ಅರಿಶಿನ ಪುಡಿ
  4. ಬೆಲ್ಲ ದೊಡ್ಡ ನಿಂಬೆಹಣ್ಣಿನ ಗಾತ್ರ
  5. 2 ಟೀಸ್ಪೂನ್ ಅಡುಗೆ ಎಣ್ಣೆ
  6. ಉಪ್ಪು ರುಚಿಗೆ ತಕ್ಕಷ್ಟು.

ಅರೆಯಲು ಬೇಕಾಗುವ ಪದಾರ್ಥಗಳು - ವಿಧಾನ ೧: ( ಅಳತೆ ಕಪ್ = 240 ಎಂಎಲ್ )

  1. 1 ಟೀಸ್ಪೂನ್ ಕೊತ್ತಂಬರಿ ಬೀಜ
  2. 3 - 6 ಒಣ ಮೆಣಸಿನಕಾಯಿ
  3. 1 ಕಪ್ ತೆಂಗಿನ ತುರಿ
  4. 1/4 ಟೀಸ್ಪೂನ್ ಮೆಂತ್ಯ
  5. 3 ಟೀಸ್ಪೂನ್ ಎಳ್ಳು
  6. 1 ಟೀಸ್ಪೂನ್ ಅಡುಗೆ ಎಣ್ಣೆ

ಅರೆಯಲು ಬೇಕಾಗುವ ಪದಾರ್ಥಗಳು - ವಿಧಾನ ೨: ( ಅಳತೆ ಕಪ್ = 240 ಎಂಎಲ್ )

  1. 1 ಟೀಸ್ಪೂನ್ ಉದ್ದಿನ ಬೇಳೆ
  2. 3 - 6 ಒಣ ಮೆಣಸಿನಕಾಯಿ
  3. 1 ಕಪ್ ತೆಂಗಿನ ತುರಿ
  4. 1/4 ಟೀಸ್ಪೂನ್ ಮೆಂತ್ಯ
  5. 3 ಟೀಸ್ಪೂನ್ ಎಳ್ಳು
  6. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1 ಒಣಮೆಣಸಿನಕಾಯಿ (ಬೇಕಾದಲ್ಲಿ)
  3. 4 - 5 ಕರಿಬೇವಿನ ಎಲೆ
  4. 4 ಟೀಸ್ಪೂನ್ ಅಡುಗೆ ಎಣ್ಣೆ

ದೊಣ್ಣೆಮೆಣಸು ಮೆಣಸ್ಕಾಯಿ ಮಾಡುವ ವಿಧಾನ:

  1. ಕ್ಯಾಪ್ಸಿಕಂ ಅಥವಾ ದೊಣ್ಣೆಮೆಣಸನ್ನು ತೊಳೆದು ಸಣ್ಣಗೆ ಕತ್ತರಿಸಿಕೊಳ್ಳಿ. ಅಮಟೆಕಾಯಿಯನ್ನು ಕತ್ತರಿಸಿ. 
  2. ಅಮಟೆಕಾಯಿ ಇಲ್ಲವಾದಲ್ಲಿ 1/2 ಕಪ್ ನೀರಿನಲ್ಲಿ ಹುಣಸೆ ಹಣ್ಣನ್ನು ನೆನೆಸಿ ರಸ ತೆಗೆದಿಟ್ಟುಕೊಳ್ಳಿ. 
  3. ಒಂದು ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಎಳ್ಳನ್ನು ಹುರಿದು ತೆಗೆದಿಡಿ. 
  4. ನಂತರ ಅದೇ ಬಾಣಲೆಗೆ 1 ಚಮಚ ಎಣ್ಣೆ ಹಾಕಿ. ನಂತರ (ಉದ್ದಿನ ಬೇಳೆ + ಮೆಂತೆ + ಒಣಮೆಣಸು) ಅಥವಾ (ಕೊತ್ತಂಬರಿ ಬೀಜ + ಮೆಂತೆ + ಒಣಮೆಣಸು) ಹಾಕಿ ಮಧ್ಯಮ ಉರಿಯಲ್ಲಿ ಹುರಿದು ತೆಗೆದಿಡಿ. ಉದ್ದಿನಬೇಳೆ ಅಥವಾ ಕೊತ್ತಂಬರಿ ಯಾವುದು ಹಾಕಿದರೂ ರುಚಿ ಅಷ್ಟು ವ್ಯತ್ಯಾಸ ಬರುವುದಿಲ್ಲ. 
  5.  ನಂತರ ಅದೇ ಬಾಣಲೆಗೆ 2 ಚಮಚ ಎಣ್ಣೆ ಹಾಕಿ,ಕತ್ತರಿಸಿದ ದೊಣ್ಣೆಮೆಣಸು ಮತ್ತು ಅಮಟೆಕಾಯಿ ಹಾಕಿ, ಒಂದೆರಡು ನಿಮಿಷ ಹುರಿಯಿರಿ. 
  6. ನಂತರ ಅರಿಶಿನ, ಉಪ್ಪು, ಬೆಲ್ಲ ಮತ್ತು ನೀರು ಹಾಕಿ. ಹುಣಿಸೆಹಣ್ಣಿನ ರಸ ಹಾಕುವುದಾದಲ್ಲಿ ನೀರು ಹಾಕುವುದು ಬೇಡ. ಮುಚ್ಚಳ ಮುಚ್ಚಿ ಮೆತ್ತಗಾಗುವವರೆಗೆ ಬೇಯಿಸಿ. 
  7. ಮಿಕ್ಸಿ ಜಾರ್ಗೆ ತೆಂಗಿನತುರಿ ಮತ್ತು ಹುರಿದ ಪದಾರ್ಥಗಳನ್ನು ಹಾಕಿ ಅರೆಯಿರಿ. 
  8. ಬೇಯಿಸಿದ ದೊಣ್ಣೆಮೆಣಸಿಗೆ ಅರೆದ ಮಸಾಲೆ ಸೇರಿಸಿ. ಬೇಕಾದಲ್ಲಿ ಉಪ್ಪು, ಹುಳಿ ಮತ್ತು ಬೆಲ್ಲ ಹೊಂದಿಸಿ. ಬೇಕಾದಷ್ಟು ನೀರು ಸೇರಿಸಿ, ಒಂದು ಕುದಿ ಕುದಿಸಿ.  
  9. ನಂತರ ಎಣ್ಣೆ, ಒಣಮೆಣಸು, ಸಾಸಿವೆ ಮತ್ತು ಕರಿಬೇವಿನ ಸೊಪ್ಪಿನ ಒಗ್ಗರಣೆ ಮಾಡಿ. ಅನ್ನ ಅಥವಾ ಚಪಾತಿ ಜೊತೆ ಬಡಿಸಿ.

ಸೋಮವಾರ, ಜುಲೈ 24, 2017

Heerekayi sippe dose recipe in Kannada | ಹೀರೆಕಾಯಿ ಸಿಪ್ಪೆ ದೋಸೆ ಮಾಡುವ ವಿಧಾನ

Heerekayi sippe dose recipe in Kannada

Heerekayi sippe dose recipe in Kannada | ಹೀರೆಕಾಯಿ ಸಿಪ್ಪೆ ದೋಸೆ ಮಾಡುವ ವಿಧಾನ 


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ದೋಸೆ ಅಕ್ಕಿ
  2. 1.5 ಕಪ್ ಕತ್ತರಿಸಿದ ಹೀರೆಕಾಯಿ ಸಿಪ್ಪೆ
  3. 1/4 ಕಪ್ ತೆಂಗಿನ ತುರಿ
  4. 1 ಟೀಸ್ಪೂನ್ ಕೊತ್ತಂಬರಿ ಬೀಜ 
  5. 1/2 ಟೀಸ್ಪೂನ್ ಜೀರಿಗೆ 
  6. 2 ಕೆಂಪು ಮೆಣಸಿನಕಾಯಿ 
  7. ಸಣ್ಣ ಗೋಲಿ ಗಾತ್ರದ ಹುಣಸೆ ಹಣ್ಣು 
  8. 1 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ) 
  9. ಉಪ್ಪು ರುಚಿಗೆ ತಕ್ಕಷ್ಟು

ಹೀರೆಕಾಯಿ ಸಿಪ್ಪೆ ದೋಸೆ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು 4 - 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
  2. ನಂತರ ನೀರನ್ನು ಬಗ್ಗಿಸಿ, ತೆಂಗಿನ ತುರಿ, ಕೊತ್ತಂಬರಿ, ಜೀರಿಗೆ, ಕೆಂಪು ಮೆಣಸಿನಕಾಯಿ, ಬೆಲ್ಲ ಮತ್ತು ಹುಣಸೆ ಹಣ್ಣು ಹಾಕಿ ಮಿಕ್ಸರ್ ಗ್ರೈಂಡರ್ ನಲ್ಲಿ ನಯವಾಗಿ ಅರೆಯಿರಿ. 
  3. ನಂತರ ಅದಕ್ಕೆ ಹೀರೆಕಾಯಿ ಸಿಪ್ಪೆ ಹಾಕಿ ಸ್ವಲ್ಪ ತರಿತರಿಯಾಗಿ ಅರೆಯಿರಿ.  
  4. ಅರೆದ ಮೇಲೆ ಒಂದು ಪಾತ್ರೆಗೆ ಹಾಕಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ. ಹಿಟ್ಟು ತೆಳುವಾದ ಮಿಲ್ಕ್ ಶೇಕ್ ನಂತಿರಲಿ. 
  5. ದೋಸೆ ಕಲ್ಲು ಅಥವಾ ಹಂಚನ್ನು ಬಿಸಿ ಮಾಡಿ. ಒಂದು ಸೌಟು ದೋಸೆ ಹಿಟ್ಟನ್ನು ಸೌಟಿನಿಂದ ಸುರಿದು ದೋಸೆ ಮಾಡಿ. 
  6. ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಬಿಸಿ ಬಿಸಿ ದೋಸೆಯನ್ನು ತುಪ್ಪ ಮತ್ತು ಚಟ್ನಿಯೊಂದಿಗೆ ಬಡಿಸಿ. 

ಬುಧವಾರ, ಜುಲೈ 12, 2017

Halasina hannina gatti and kadubu recipe in Kannada | ಹಲಸಿನ ಹಣ್ಣಿನ ಗಟ್ಟಿ ಅಥವಾ ಕಡುಬು ಮಾಡುವ ವಿಧಾನ

Halasina hannina gatti recipe in Kannada

Halasina hannina gatti and kadubu recipe in Kannada | ಹಲಸಿನ ಹಣ್ಣಿನ ಗಟ್ಟಿ ಅಥವಾ ಕಡುಬು ಮಾಡುವ ವಿಧಾನ

ಹಲಸಿನ ಹಣ್ಣಿನ ಗಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 4 ಕಪ್ ಹಲಸಿನ ಹಣ್ಣು 
  2. 0.5 ಕಪ್ ತೆಂಗಿನ ತುರಿ 
  3. 1 ಕಪ್ ಅಕ್ಕಿ
  4. 1/4 ಕಪ್ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಂತೆ) 
  5. ಉಪ್ಪು ರುಚಿಗೆ ತಕ್ಕಷ್ಟು. 
  6. ಬಾಳೆಎಲೆ

ಹಲಸಿನ ಹಣ್ಣಿನ ಕಡುಬಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 4 ಕಪ್ ಹಲಸಿನ ಹಣ್ಣು
  2. 1 ಕಪ್ ಅಕ್ಕಿ
  3. ಉಪ್ಪು ರುಚಿಗೆ ತಕ್ಕಷ್ಟು.

ಹಲಸಿನ ಹಣ್ಣಿನ ಗಟ್ಟಿ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿ. 
  2. ಬಾಳೆಎಲೆಯನ್ನು ತೊಳೆದು, ಆವಿಯಲ್ಲಿ ಅಥವಾ ಸ್ಟವ್ ಮೇಲೆ ಹಿಡಿದು ಬಾಡಿಸಿಕೊಳ್ಳಿ. 
  3. ಮಿಕ್ಸಿಯಲ್ಲಿ ನೆನೆಸಿದ ಅಕ್ಕಿ, ಹಲಸಿನ ಹಣ್ಣು, ತೆಂಗಿನತುರಿ, ಬೆಲ್ಲ ಮತ್ತು ಉಪ್ಪು ಹಾಕಿ ಸ್ವಲ್ಪ ತರಿ ತರಿಯಾಗಿ ಅರೆಯಿರಿ. ಗಮನಿಸಿ ನೀರು ಸೇರಿಸಬೇಡಿ. 
  4. ಹಿಟ್ಟು ಇಡ್ಲಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಬೇಕು. ಹಿಟ್ಟು ತೆಳು ಅನಿಸಿದಲ್ಲಿ , ಸ್ವಲ್ಪ ರವೇ ಸಹ ಸೇರಿಸಬಹುದು. 
  5. ಈಗ ಬಾಳೆಎಲೆ ತೆಗೆದುಕೊಂಡು, ಒಂದು ಹಿಡಿ ಹಿಟ್ಟನ್ನು ಹಾಕಿ, ಬಾಳೆಎಲೆಯನ್ನು ಪ್ಯಾಕೆಟ್ ನಂತೆ ಮಡಚಿ. 
  6. ನಂತರ 30 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. ಬಿಸಿಯಾಗಿರುವಾಗಲೇ ತುಪ್ಪ, ಜೇನುತುಪ್ಪ, ಕಾಯಿಹಾಲು ಅಥವಾ ಚಟ್ನಿಯೊಂದಿಗೆ ಬಡಿಸಿ.

ಹಲಸಿನ ಹಣ್ಣಿನ ಕಡುಬು ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿ. 
  2. ಮಿಕ್ಸಿಯಲ್ಲಿ ನೆನೆಸಿದ ಅಕ್ಕಿ, ಹಲಸಿನ ಹಣ್ಣು ಮತ್ತು ಉಪ್ಪು ಹಾಕಿ ತರಿ ತರಿಯಾಗಿ ಅರೆಯಿರಿ. ಈ ವಿಧಾನದಲ್ಲಿ ಅಗತ್ಯವಿದ್ದಷ್ಟು ನೀರು ಸೇರಿಸಬಹುದು. 
  3. ಹಿಟ್ಟು ಇಡ್ಲಿ ಹಿಟ್ಟಿನಷ್ಟು ಗಟ್ಟಿಯಾಗಿರಬೇಕು. 
  4. ಈಗ ಅಂಚಿರುವ ಬಟ್ಟಲಿನಲ್ಲಿ ಅಥವಾ ತಟ್ಟೆಯಲ್ಲಿ ಹಿಟ್ಟನ್ನು ಹಾಕಿ.
  5. 30 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. ಬೇಕಾದ ಆಕಾರಕ್ಕೆ ಕತ್ತರಿಸಿ. ಬಿಸಿಯಾಗಿರುವಾಗಲೇ ತುಪ್ಪ ಮತ್ತು ತೆಂಗಿನಕಾಯಿ+ಕೊತ್ತಂಬರಿ ಬೀಜ ದ ಚಟ್ನಿಯೊಂದಿಗೆ ಬಡಿಸಿ.

ಬುಧವಾರ, ಜುಲೈ 5, 2017

Southe gatti recipe in Kannada | ಸೌತೆಕಾಯಿ ಗಟ್ಟಿ ಅಥವಾ ಕಡುಬು ಮಾಡುವ ವಿಧಾನ

Southe gatti recipe in Kannada

Southe gatti recipe in Kannada | ಸೌತೆಕಾಯಿ ಗಟ್ಟಿ ಅಥವಾ ಕಡುಬು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಸಣ್ಣಗೆ ಹೆಚ್ಚಿದ ಅಥವಾ ತುರಿದ ಸೌತೆಕಾಯಿ
  2. 0.5 - 1 ಕಪ್ ತೆಂಗಿನ ತುರಿ
  3. 1 ಕಪ್ ಅಕ್ಕಿ (ನಾನು ದೋಸೆ ಅಕ್ಕಿ ಉಪಯೋಗಿಸಿದ್ದೇನೆ)
  4. ಉಪ್ಪು ರುಚಿಗೆ ತಕ್ಕಷ್ಟು.
  5. ಬಾಳೆಎಲೆ

ಸೌತೆಕಾಯಿ ಗಟ್ಟಿ ಅಥವಾ ಕಡುಬು ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು, ನೀರು ಬಸಿದು, ನೀರಾರಲು ಬಿಡಿ. 
  2. ಬಾಳೆಎಲೆಯನ್ನು ತೊಳೆದು, ಆವಿಯಲ್ಲಿ ಅಥವಾ ಸ್ಟವ್ ಮೇಲೆ ಹಿಡಿದು ಬಾಡಿಸಿಕೊಳ್ಳಿ. 
  3. ಅಕ್ಕಿ ಒಣಗಿದ ಮೇಲೆ, ಮಿಕ್ಸಿಯಲ್ಲಿ ಸಣ್ಣನೆ ಪುಡಿ ಮಾಡಿಕೊಳ್ಳಿ. ಅಕ್ಕಿ ಪುಡಿಯು ಸ್ವಲ್ಪ ತರಿ ತರಿಯಿರುವ ಅಕ್ಕಿ ಹಿಟ್ಟಿನಂತಿರಲಿ.
  4. ತೆಂಗಿನ ತುರಿಯನ್ನು ಮಿಕ್ಸಿಯಲ್ಲಿ ಅಗತ್ಯವಿದ್ದಷ್ಟು ನೀರು ಸೇರಿಸಿ, ಅರೆದು ಅಕ್ಕಿ ಹಿಟ್ಟಿಗೆ ಸೇರಿಸಿ. 
  5. ನಂತರ ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿ ಅಥವಾ ತುರಿದು ಅಕ್ಕಿ ಹಿಟ್ಟಿಗೆ ಸೇರಿಸಿ. 
  6. ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು ಉಪ್ಪನ್ನು ಹಾಕಿ. 
  7. ಎಲ್ಲವನ್ನು ಚೆನ್ನಾಗಿ ಕಲಸಿ. ಹಿಟ್ಟು ಸುಲಭವಾಗಿ ಬೀಳುವಷ್ಟು ನೀರಾಗಿರಬೇಕು.  ಆದರೆ ಕೈಗಳಿಂದ ತೆಗೆದು ಹಾಕುವಷ್ಟು ಗಟ್ಟಿಯಾಗಿರಬೇಕು.   
  8. ಈಗ ಬಾಳೆಎಲೆ ತೆಗೆದುಕೊಂಡು, ಒಂದು ಹಿಡಿ ಹಿಟ್ಟನ್ನು ಹಾಕಿ, ಬಾಳೆಎಲೆಯನ್ನು ಪ್ಯಾಕೆಟ್ ನಂತೆ ಮಡಚಿ.
  9. 20 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. ಬಿಸಿಯಾಗಿರುವಾಗಲೇ ಚಟ್ನಿಯೊಂದಿಗೆ ಬಡಿಸಿ.

ಗುರುವಾರ, ಮೇ 25, 2017

Halasina hannina mulka recipe in Kannada | ಹಲಸಿನ ಹಣ್ಣಿನ ಮುಳುಕ ಮಾಡುವ ವಿಧಾನ

Halasina hannina mulka recipe in Kannada

Halasina hannina mulka recipe in Kannada |  ಹಲಸಿನ ಹಣ್ಣಿನ ಮುಳುಕ ಮಾಡುವ ವಿಧಾನ

ಮುಳ್ಕ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಅಥವಾ ಅಕ್ಕಿ ಹಿಟ್ಟು
  2. 2 ಕಪ್ ಕತ್ತರಿಸಿದ ಹಲಸಿನ ಹಣ್ಣು
  3. 1/2 ಕಪ್ ತೆಂಗಿನ ತುರಿ
  4. 1/2 ಕಪ್ ಪುಡಿ ಮಾಡಿದ ಬೆಲ್ಲ
  5. ಎಣ್ಣೆ ಕಾಯಿಸಲು
  6. ಒಂದು ಚಿಟಿಕೆ ಅಥವಾ ರುಚಿಗೆ ತಕ್ಕಷ್ಟು ಉಪ್ಪು.

ಹಲಸಿನ ಹಣ್ಣಿನ ಮುಳುಕ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು ೨ ಘಂಟೆ ನೆನೆಸಿಡಿ. 
  2. ಹಲಸಿನ ಹಣ್ಣನ್ನು ಕತ್ತರಿಸಿ, ಬೀಜ ತೆಗೆದು, ಒಂದು ಇಂಚು ಉದ್ದಕ್ಕೆ ಕತ್ತರಿಸಿ. 
  3. ಅಕ್ಕಿ ನೆನೆದ ನಂತರ ನೀರು ಬಗ್ಗಿಸಿ, ತೆಂಗಿನ ತುರಿ, ಹಲಸಿನ ಹಣ್ಣು, ಉಪ್ಪು ಮತ್ತು ಬೆಲ್ಲದೊಂದಿಗೆ ನಯವಾಗಿ ಅರೆಯಿರಿ. ಅರೆಯಲು ನೀರು ಬಳಸಬೇಡಿ. 
  4. ಅರೆಯಲು ತುಂಬ ಗಟ್ಟಿ ಮತ್ತು ಕಷ್ಟವೆನಿಸಿದಲ್ಲಿ ಒಂದೆರಡು ಟೇಬಲ್ ಚಮಚ ನೀರು ಸೇರಿಸಬಹುದು. 
  5. ಅಥವಾ ತೆಂಗಿನ ತುರಿ, ಹಲಸಿನ ಹಣ್ಣು, ಉಪ್ಪು ಮತ್ತು ಬೆಲ್ಲವನ್ನು ಅರೆದು ಅಕ್ಕಿಯ ಬದಲು ಅಕ್ಕಿ ಹಿಟ್ಟನ್ನು ಹಾಕಿ ಕಲಸಬಹುದು. ಅಕ್ಕಿ ಹಿಟ್ಟು ಹಾಕಿದಲ್ಲಿ ಚೆನ್ನಾಗಿ ಕಲಸಲು ಮರೆಯದಿರಿ. ಇಲ್ಲವಾದಲ್ಲಿ ಎಣ್ಣೆಯಲ್ಲಿ ಸಿಡಿಯಬಹುದು. 
  6. ಅರೆದ ಹಿಟ್ಟು ತಪ-ತಪನೆ ಬೀಳುವಷ್ಟು ಗಟ್ಟಿಯಾಗಿರಲಿ. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ. 
  7. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ.  ಕೈಯಲ್ಲಿ ಸ್ವಲ್ಪ ಸ್ವಲ್ಪ ಹಿಟ್ಟು ತೆಗೆದು ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ. 
  8. ಗುಳ್ಳೆಗಳು ನಿಂತ ಮೇಲೆ ಅಥಾವ ಕಂದು ಬಣ್ಣಕ್ಕೆ ತಿರುಗಿದ ಮೇಲೆ ತೆಗೆಯಿರಿ. ಬಿಸಿ ಅಥಾವ ತಣ್ಣಗೆ ಸವಿದು ಆನಂದಿಸಿ. 


ಭಾನುವಾರ, ಮೇ 7, 2017

Sihi appa or paddu recipe in Kannada | ಸಿಹಿ ಅಪ್ಪ ಅಥವಾ ಪಡ್ದು ಮಾಡುವ ವಿಧಾನ

Sihi appa or paddu recipe in Kannada

Sihi appa or paddu recipe in Kannada | ಸಿಹಿ ಅಪ್ಪ ಅಥವಾ ಪಡ್ದು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಕ್ಕಿ ಹಿಟ್ಟು
  2. 1/2 ಕಪ್ ತೆಂಗಿನ ತುರಿ
  3. 1/2 ಕಪ್ ಪುಡಿ ಮಾಡಿದ ಬೆಲ್ಲ
  4. 1/2 ಕಪ್ ಕತ್ತರಿಸಿದ ಬಾಳೆಹಣ್ಣು
  5. 1 ಏಲಕ್ಕಿ
  6. ತುಪ್ಪ ಕಾಯಿಸಲು
  7. ಉಪ್ಪು ರುಚಿಗೆ ತಕ್ಕಷ್ಟು.


ಸಿಹಿ ಅಪ್ಪ ಅಥವಾ ಪಡ್ದು ಮಾಡುವ ವಿಧಾನ:

  1. ತೆಂಗಿನ ತುರಿ, ಬಾಳೆಹಣ್ಣು ಮತ್ತು ಏಲಕ್ಕಿಯನ್ನು ಅರೆಯಿರಿ. ಅರೆಯಲು ಒಂದೆರಡು ಟೇಬಲ್ ಚಮಚ ನೀರು ಸೇರಿಸಬಹುದು. 
  2. ನಂತರ ಅದಕ್ಕೆ ಪುಡಿಮಾಡಿದ ಬೆಲ್ಲ ಹಾಕಿ ನುಣ್ಣಗೆ ಅರೆಯಿರಿ. 
  3. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು ಮತ್ತು ಅಕ್ಕಿ ಹಿಟ್ಟನ್ನು ಸೇರಿಸಿ, ಗಟ್ಟಿಯಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ತುಪ್ಪ ಅಥವಾ ಎಣ್ಣೆಯಲ್ಲಿ ಕರಿಯುವುದಾದರೆ ಹಿಟ್ಟು ಗಟ್ಟಿಯಾಗಿರಲಿ, ನೀರು ಸೇರಿಸ ಬೇಡಿ. ಅಪ್ಪ ಅಥವಾ ಪಡ್ಡು ಪ್ಯಾನ್ ನಲ್ಲಿ ಮಾಡುವುದಾದರೆ ಸ್ವಲ್ಪ ನೀರು ಸೇರಿಸಿ, ಹಿಟ್ಟನ್ನು ಸ್ವಲ್ಪ ತೆಳು ಮಾಡಿಕೊಳ್ಳಿ. 
  4. ಪಡ್ಡು ತವಾವನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಅರ್ಧ ಚಮಚದಷ್ಟು ತುಪ್ಪ ಹಾಕಿ. ಬೇಕಾದಲ್ಲಿ ಬಾಣಲೆಯಲ್ಲಿ ಎಣ್ಣೆ  ಅಥವಾ ತುಪ್ಪ ಬಿಸಿಮಾಡಿ, ಕೈಯಲ್ಲಿ ಹಿಟ್ಟು ಹಾಕಿಯೂ ಕಾಯಿಸಬಹುದು. 
  5. ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. 
  6. ೧ ನಿಮಿಷದ ನಂತರ ಮುಚ್ಚಳ ತೆರೆದು ಅಪ್ಪವನ್ನು ತಿರುಗಿಸಿ ಹಾಕಿ.  ಇನ್ನೊಂದು ಬದಿಯೂ ಬೇಯಿಸಿ. ಸವಿದು ಆನಂದಿಸಿ. 


ಮಂಗಳವಾರ, ಏಪ್ರಿಲ್ 11, 2017

Basale pundi recipe in Kannada | ಬಸಳೆ ಪುಂಡಿ ಮಾಡುವ ವಿಧಾನ

2Basale pundi recipe in Kannada

Basale pundi recipe in Kannada | ಬಸಳೆ ಪುಂಡಿ ಮಾಡುವ ವಿಧಾನ

ಪುಂಡಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಸೋನಾ ಮಸೂರಿ ಅಕ್ಕಿ
  2. 1/4 ಕಪ್ ತೆಂಗಿನ ತುರಿ
  3. 2 ಕಪ್ ನೀರು 
  4. ಉಪ್ಪು ರುಚಿಗೆ ತಕ್ಕಷ್ಟು

ಸಾಂಬಾರಿಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ದೊಡ್ಡ ಈರುಳ್ಳಿ
  2. 1/4 ಟೀಸ್ಪೂನ್ ಅರಿಶಿನ ಪುಡಿ
  3. 1 ಟೀಸ್ಪೂನ್ ಕಲ್ಲುಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  4. ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ
  2. 2 - 4 ಕೆಂಪು ಮೆಣಸಿನಕಾಯಿ
  3. 1.5 ಟೀಸ್ಪೂನ್ ಉದ್ದಿನ ಬೇಳೆ
  4. 2 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/4 ಟೀಸ್ಪೂನ್ ಜೀರಿಗೆ
  6. 7 - 8 ಮೆಂತ್ಯ ಕಾಳು (ಬೇಕಾದಲ್ಲಿ)
  7. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 5 - 6 ಕರಿಬೇವು
  2. 1/4 ಟೀಸ್ಪೂನ್ ಸಾಸಿವೆ
  3. ಒಂದು ಚಿಟಿಕೆ ಇಂಗು
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಬಸಳೆ ಪುಂಡಿ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ಅಗಲವಾದ ಪಾತ್ರೆಯಲ್ಲಿ ಹರಡಿ ನೀರಾರಲು ಬಿಡಿ. 
  2. ನಂತರ ಮಿಕ್ಸಿಯಲ್ಲಿ ಸ್ವಲ್ಪ ತರಿಯಾದ ಪುಡಿ ಮಾಡಿಕೊಳ್ಳಿ. ರವೆಗಿಂತ ಸ್ವಲ್ಪ ನುಣ್ಣನೆ ಅಥವಾ ಸಣ್ಣಗಿರಲಿ. 
  3. ನಂತರ ಅದಕ್ಕೆ ತೆಂಗಿನ ತುರಿ ಹಾಕಿ ಒಂದೆರಡು ಸುತ್ತು ಅರೆಯಿರಿ. 
  4. ಒಂದು ಬಾಣಲೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  5. ನೀರು ಕುದಿಯಲು ಪ್ರಾರಂಭಿಸಿದ ನಂತರ ಅಕ್ಕಿ ತರಿ ಅಥವಾ ರವೆಯನ್ನು ಹಾಕುತ್ತಾ ದೋಸೆ ಸಟ್ಟುಗ ಉಪಯೋಗಿಸಿ ಗಂಟಾಗದಂತೆ ಮಗುಚಿ. 
  6. ಮಧ್ಯಮ ಉರಿಯಲ್ಲಿ ಗಟ್ಟಿಯಾಗುವವರೆಗೆ ಮಗುಚಿ. ತುಂಬ ಗಟ್ಟಿಯಾಗುವುದು ಬೇಡ. ಸಟ್ಟುಗ ಬೀಳದೆ ನೇರ ನಿಲ್ಲುವಷ್ಟು ಗಟ್ಟಿ ಆದರೆ ಸಾಕು. ಸ್ಟವ್ ಆಫ್ ಮಾಡಿ.
  7. ಸ್ವಲ್ಪ ಬಿಸಿ ಆರಿದ ಮೇಲೆ, ಕೈಗೆ ನೀರು ಮುಟ್ಟಿಸಿಕೊಂಡು, ನೆಲ್ಲಿಕಾಯಿ ಗಾತ್ರದ ಉಂಡೆಗಳನ್ನು ಮಾಡಿ.
  8. ಸೆಕೆಯಲ್ಲಿ (ಆವಿಯಲ್ಲಿ) 15 ನಿಮಿಷ ಬೇಯಿಸಿ. ಪುಂಡಿ ತಯಾರಾಯಿತು. 
  9. ಈಗ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಮೆಂತೆಯನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
  10. ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ನೀರು ಸೇರಿಸಿ ಅರೆದು ಪಕ್ಕಕ್ಕಿಡಿ. 
  11. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  12. ಅದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ ಬಡಿಸಿ. ಚಿಟಿಕೆ ಅರಿಶಿನ ಪುಡಿ ಮತ್ತು ೧/೪ ಲೋಟ ನೀರು ಹಾಕಿ ಈರುಳ್ಳಿ ಮೆತ್ತಗಾಗುವವರೆಗೆ ಬೇಯಿಸಿ. 
  13. ಅರೆದ ಮಸಾಲೆಯನ್ನು ಹಾಕಿ. ಉಪ್ಪು ಮತ್ತು ಹುಣಿಸೆರಸ ಹಾಕಿ.
  14. ಬೇಕಾದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ.
  15. ಆವಿಯಲ್ಲಿ ಬೇಯಿಸಿದ ಪುಂಡಿಯನ್ನು ಹಾಕಿ, ಹತ್ತು ನಿಮಿಷ ಬಿಡಿ. ಸವಿದು ಆನಂದಿಸಿ. 

ಸೋಮವಾರ, ಮಾರ್ಚ್ 6, 2017

Alasande hudi haki koddel recipe in Kannada | ಅಲಸಂದೆ ಹುಡಿ ಹಾಕಿ ಕೊದ್ದೆಲ್ ಮಾಡುವ ವಿಧಾನ

Alasande hudi haki koddel recipe in Kannada
Alasande hudi haki koddel recipe in Kannada | ಅಲಸಂದೆ ಹುಡಿ ಹಾಕಿ ಕೊದ್ದೆಲ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಟ್ಟು ಅಥವಾ 1/2 ಕೆಜಿ ಅಲಸಂದೆ ಕಾಳು
  2. 1/4 ಚಮಚ ಅರಿಶಿನ ಪುಡಿ
  3. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  4. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆ ಹುರಿಯಲು ಬೇಕಾಗುವ ಪದಾರ್ಥಗಳು:

  1. 3 - 4 ಕೆಂಪು ಮೆಣಸಿನಕಾಯಿ 
  2. 2 ಚಮಚ ಕೊತ್ತಂಬರಿ ಬೀಜ ಅಥವಾ ಧನಿಯಾ
  3. 1/2 ಚಮಚ ಜೀರಿಗೆ
  4. 2 ಚಮಚ ಅಕ್ಕಿ
  5. ಒಂದು ಚಿಟಿಕೆ ಸಾಸಿವೆ 
  6. ಒಂದು ಚಿಟಿಕೆ ಮೆಂತೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1/2 ಚಮಚ ಜೀರಿಗೆ
  3. 1 ಕೆಂಪು ಮೆಣಸಿನಕಾಯಿ 
  4. 10 ಎಸಳು ಬೆಳ್ಳುಳ್ಳಿ
  5. 4 - 5 ಕರಿಬೇವಿನ ಎಲೆ
  6. 4 ಚಮಚ ಅಡುಗೆ ಎಣ್ಣೆ 

ಅಲಸಂದೆ ಹುಡಿ ಹಾಕಿ ಕೊದ್ದೆಲ್ ಮಾಡುವ ವಿಧಾನ:

  1. ಅಲಸಂದೆಯನ್ನು ಆರಿಸಿ, ತೊಳೆದು, ೧ ಇಂಚು ಉದ್ದಕ್ಕೆ ಕತ್ತರಿಸಿಕೊಳ್ಳಿ. 
  2. ಕುಕ್ಕರ್ ನಲ್ಲಿ ಮೆತ್ತಗೆ ಬೇಯಿಸಿಕೊಳ್ಳಿ.
  3. ಆ ಸಮಯದಲ್ಲಿ ಮಸಾಲೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಮಧ್ಯಮ ಉರಿಯಲ್ಲಿ, ಎಣ್ಣೆ ಹಾಕದೆ, ಹುರಿದು ಪುಡಿ ಮಾಡಿಟ್ಟುಕೊಳ್ಳಿ. 
  4. ಅಲಸಂದೆ ಬೆಂದ ಮೇಲೆ ಉಪ್ಪು,  ಅರಿಶಿನ ಮತ್ತು ಹುಣಿಸೆರಸ ಹಾಕಿ ಕುದಿಸಿ. 
  5. ಸಿದ್ಧ ಮಾಡಿಟ್ಟ ಮಸಾಲೆ ಪುಡಿ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. ಈ ಸಾಂಬಾರ್ ಸ್ವಲ್ಪ ಗಟ್ಟಿಯಾಗಿರಬೇಕು. 
  6. ಒಂದು ಸಣ್ಣ ಬಾಣಲೆಯಲ್ಲಿ ಸಾಸಿವೆ, ಜೀರಿಗೆ, ಜಜ್ಜಿದ ಬೆಳ್ಳುಳ್ಳಿ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಯ ಒಗ್ಗರಣೆ ತಯಾರಿಸಿ. 
  7. ಕುದಿಸಿದ ಕೊದ್ದೆಲ್ ಅಥವಾ ಸಾಂಬಾರ್ ಗೆ ಸೇರಿಸಿ, ಮಗುಚಿ ಬಿಸಿ ಅನ್ನದೊಂದಿಗೆ ಬಡಿಸಿ. 

ಸೋಮವಾರ, ಫೆಬ್ರವರಿ 6, 2017

Chitranna bajji recipe in Kannada | ಚಿತ್ರಾನ್ನ ಬಜ್ಜಿ ಅಥವಾ ಗೊಜ್ಜು ಮಾಡುವ ವಿಧಾನ

Chitranna bajji recipe in Kannada

Chitranna bajji recipe in Kannada | ಚಿತ್ರಾನ್ನ ಬಜ್ಜಿ ಅಥವಾ ಗೊಜ್ಜು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ತೆಂಗಿನ ತುರಿ
  2. 2 - 4 ಕೆಂಪು ಮೆಣಸಿನಕಾಯಿ
  3. 1/4 ಟೀಸ್ಪೂನ್ ಸಾಸಿವೆ
  4. 1 ಸಣ್ಣ ನಿಂಬೆ ಗಾತ್ರದ ಬೆಲ್ಲ
  5. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  6. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 2 ಟೇಬಲ್ ಚಮಚ ಕಡಲೇಕಾಯಿ ಅಥವಾ ಶೇಂಗಾ
  4. 1 ಟೀಸ್ಪೂನ್ ಉದ್ದಿನ ಬೇಳೆ
  5. 1 ಟೀಸ್ಪೂನ್ ಕಡಲೆಬೇಳೆ
  6. 4 - 6 ಕರಿಬೇವಿನ ಎಲೆ
  7. 1/4 ಟೀಸ್ಪೂನ್ ಅರಿಶಿನ ಪುಡಿ
  8. 4 ಟೇಬಲ್ ಚಮಚ ಅಡುಗೆ ಎಣ್ಣೆ (ತೆಂಗಿನೆಣ್ಣೆಗೆ ಆದ್ಯತೆ)

ಚಿತ್ರಾನ್ನ ಬಜ್ಜಿ ಅಥವಾ ಗೊಜ್ಜು ಮಾಡುವ ವಿಧಾನ:

  1. ಮಿಕ್ಸಿ ಜಾರಿಗೆ ತೆಂಗಿನಕಾಯಿ, ಕೆಂಪು ಮೆಣಸಿನಕಾಯಿ ಮತ್ತು ಸಾಸಿವೆಯನ್ನು ಹಾಕಿ.
  2. ಅಗತ್ಯವಿದ್ದಷ್ಟು ನೀರು ಬಳಸಿ ನುಣ್ಣನೆ ಅರೆದು ಪಕ್ಕಕ್ಕಿಡಿ. 
  3. ಒಂದು ಬಾಣಲೆಯಲ್ಲಿ ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ , ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕಡಲೆಕಾಯಿ (ಶೇಂಗಾ) ಬಳಸಿಕೊಂಡು ಒಗ್ಗರಣೆ  ಮಾಡಿ. 
  4. ನಂತರ ಅರಿಶಿನ ಪುಡಿ , ಕರಿಬೇವು ಸೇರಿಸಿ ಸ್ಟವ್ ಆಫ್ ಮಾಡಿ.
  5. ಈಗ ಅರೆದ ಮಸಾಲಾ ಪೇಸ್ಟ್, ಉಪ್ಪು, ಬೆಲ್ಲ ಮತ್ತು ಹುಣಸೆ ರಸ ಸೇರಿಸಿ.
  6. ಚೆನ್ನಾಗಿ ಕಲಸಿ ಸಣ್ಣ ಉರಿಯಲ್ಲಿ ಬೆಲ್ಲ ಕರಗುವವರೆಗೆ ಕುದಿಸಿ. ಸ್ಟವ್ ಆಫ್ ಮಾಡಿ. 

Ottu shavige recipe in Kannada | ಒತ್ತು ಶಾವಿಗೆ ಮಾಡುವ ವಿಧಾನ

Ottu shavige recipe in Kannada

Ottu shavige recipe in Kannada | ಒತ್ತು ಶಾವಿಗೆ ಮಾಡುವ ವಿಧಾನ 

ಒತ್ತು ಶಾವಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಹಿಟ್ಟು 
  2. 1.5 ಕಪ್ ನೀರು (ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ ಸ್ವಲ್ಪ ಹೆಚ್ಚು ಕಡಿಮೆ)
  3. 1 ಟೀಸ್ಪೂನ್ ತುಪ್ಪ 
  4. ಉಪ್ಪು ರುಚಿಗೆ ತಕ್ಕಷ್ಟು

ಒತ್ತು ಶಾವಿಗೆ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ನೀರು, 1/2 ಟೀಸ್ಪೂನ್ ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  2. ನೀರು ಕುದಿಯಲು ಪ್ರಾರಂಭಿಸಿದ ನಂತರ ಅಕ್ಕಿ ಹಿಟ್ಟನ್ನು ಹಾಕಿ, ಸ್ಟವ್ ಆಫ್ ಮಾಡಿ. 
  3. ಒಮ್ಮೆ ಚೆನ್ನಾಗಿ ಮಗುಚಿ, ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ. 
  4. ಅಕ್ಕಿ ಹಿಟ್ಟು ಸ್ವಲ್ಪ ಬಿಸಿ ಆರಿದ ಮೇಲೆ ಚೆನ್ನಾಗಿ ನಾದಿ. ಹಿಟ್ಟು ಮೃದುವಾಗಿರಬೇಕು. 
  5. ಉದ್ದುದ್ದ ಉಂಡೆಗಳನ್ನು ಮಾಡಿ, ಶಾವಿಗೆ ಅಚ್ಚಿನಲ್ಲಿ ಹಾಕಿ ಎಣ್ಣೆ ಸವರಿದ ಇಡ್ಲಿ ಪ್ಲೇಟ್ ಗೆ ಒತ್ತಿ. 
  6. ಸೆಕೆಯಲ್ಲಿ (ಆವಿಯಲ್ಲಿ) 10 - 12 ನಿಮಿಷ ಬೇಯಿಸಿ. ಚಟ್ನಿಯೊಂದಿಗೆ ಸವಿದು ಆನಂದಿಸಿ. 


ಸೋಮವಾರ, ಜನವರಿ 16, 2017

Seke undlaka recipe in Kannada | ಸೆಕೆ ಉಂಡ್ಲಕ ಮಾಡುವ ವಿಧಾನ

Seke undlaka recipe in Kannada

Seke undlaka recipe in Kannada | ಸೆಕೆ ಉಂಡ್ಲಕ ಮಾಡುವ ವಿಧಾನ 

ಸೆಕೆ ಉಂಡ್ಲಕ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಹಿಟ್ಟು 
  2. 1 ಕಪ್ ತೆಂಗಿನ ತುರಿ
  3. 1/2 ಕಪ್ ಬೆಲ್ಲ
  4. 1.5 - 2 ಕಪ್ ನೀರು (ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ)
  5. 1 - 2 ಏಲಕ್ಕಿ
  6. 2 ಟೀಸ್ಪೂನ್ ತುಪ್ಪ 
  7. ಉಪ್ಪು ರುಚಿಗೆ ತಕ್ಕಷ್ಟು

ಸೆಕೆ ಉಂಡ್ಲಕ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ 1.5 ಕಪ್ ನೀರು, 1/2 ಟೀಸ್ಪೂನ್ ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  2. ನೀರು ಕುದಿಯಲು ಪ್ರಾರಂಭಿಸಿದ ಕೂಡಲೇ ಅಕ್ಕಿ ಹಿಟ್ಟನ್ನು ಹಾಕಿ, ಒಮ್ಮೆ ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. 
  3. ನಂತರ, ಅಗತ್ಯವಿದ್ದಲ್ಲಿ ಸ್ವಲ್ಪ ನೀರು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿ. ಮುಚ್ಚಳ ಮುಚ್ಚಿ ಬಿಸಿ ಆರಲು ಬಿಡಿ. 
  4. ಅಕ್ಕಿ ಹಿಟ್ಟು ಬಿಸಿ ಆರಿದ ಮೇಲೆ, ಕೈಗೆ ತುಪ್ಪ ಸವರಿಕೊಂಡು, ಸಣ್ಣ ಗೋಲಿ ಗಾತ್ರದ ಉಂಡೆಗಳನ್ನು ಮಾಡಿ. 
  5. ಸೆಕೆಯಲ್ಲಿ (ಆವಿಯಲ್ಲಿ) ತುಪ್ಪ ಸವರಿದ ಪ್ಲೇಟ್ ನಲ್ಲಿಟ್ಟು 10 ನಿಮಿಷ ಬೇಯಿಸಿ. 
  6. ಆ ಸಮಯದಲ್ಲಿ ಮಿಕ್ಸಿ ಜಾರಿಗೆ ತೆಂಗಿನ ತುರಿ, ಏಲಕ್ಕಿ ಮತ್ತು ಬೆಲ್ಲ ಹಾಕಿ ನೀರು ಹಾಕದೆ ಪುಡಿ ಮಾಡಿ. 
  7. ಪುಡಿಮಾಡಿದ ತೆಂಗಿನ ತುರಿ ಮತ್ತು ಬೆಲ್ಲವನ್ನು ಒಂದು ಬಾಣಲೆಗೆ ಹಾಕಿ ಬಿಸಿ ಮಾಡಿ. ಕಾಯಿ-ಬೆಲ್ಲ ಸಿದ್ಧ ಮಾಡಿಕೊಳ್ಳಿ. ಗಮನಿಸಿ, ನೀರಾರುವಂತೆ ಸ್ವಲ್ಪ ಮಗುಚಿದರೆ ಸಾಕು. ಸ್ಟವ್ ಆಫ್ ಮಾಡಿ. 
  8. ಈಗ ಬೇಯಿಸಿದ ಅಕ್ಕಿ ಹಿಟ್ಟಿನ ಉಂಡೆಗಳನ್ನು ಕಾಯಿ-ಬೆಲ್ಲ ಕ್ಕೆ ಹಾಕಿ ಮಗುಚಿ. 
  9. ತುಪ್ಪದೊಂದಿಗೆ ಸವಿದು ಆನಂದಿಸಿ. 

ಶುಕ್ರವಾರ, ಜನವರಿ 13, 2017

Udupi style idli sambar recipe | ಉಡುಪಿ - ಮಂಗಳೂರು ಶೈಲಿಯ ಇಡ್ಲಿ ಸಾಂಬಾರ್ ಮಾಡುವ ವಿಧಾನ


Udupi style idli sambar recipe

Udupi style idli sambar recipe | ಉಡುಪಿ - ಮಂಗಳೂರು ಶೈಲಿಯ ಇಡ್ಲಿ ಸಾಂಬಾರ್ ಮಾಡುವ ವಿಧಾನ 



ಬೇಕಾಗುವ ಪದಾರ್ಥಗಳು:

  1. 1/4 ಕಪ್ ತೊಗರಿಬೇಳೆ
  2. 1 ಸಣ್ಣ ಗಾತ್ರದ ಆಲೂಗಡ್ಡೆ ಅಥವಾ ಇನ್ನಾವುದೇ ಮೆತ್ತಗೆ ಬೇಯುವ ತರಕಾರಿ
  3. 1 ಸಣ್ಣ ಗಾತ್ರದ ನುಗ್ಗೆಕಾಯಿ
  4. 1 ಸಣ್ಣ ಗಾತ್ರದ ಬದನೇಕಾಯಿ
  5. 1 ದೊಡ್ಡ ಗಾತ್ರದ ಈರುಳ್ಳಿ
  6. 1 ಮಧ್ಯಮ ಗಾತ್ರದ ಟೊಮೇಟೊ
  7. 1/4 ಟೀಸ್ಪೂನ್ ಅರಿಶಿನ ಪುಡಿ
  8. ಒಂದು ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು (ಅಥವಾ ನಿಮ್ಮ ರುಚಿ ಪ್ರಕಾರ)
  9. 1/2 ಟೀಸ್ಪೂನ್ ಬೆಲ್ಲ (ಅಥವಾ ನಿಮ್ಮ ರುಚಿ ಪ್ರಕಾರ)
  10. ಉಪ್ಪು ನಿಮ್ಮ ರುಚಿ ಪ್ರಕಾರ

ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಥವಾ 3 ಟೀಸ್ಪೂನ್ ಸಾಂಬಾರ್ ಪೌಡರ್ )

  1. 2 - 4 ಕೆಂಪು ಮೆಣಸಿನಕಾಯಿ
  2. 1 ಟೀಸ್ಪೂನ್ ಉದ್ದಿನ ಬೇಳೆ
  3. 1/2 ಟೀಸ್ಪೂನ್ ಉದ್ದಿನ ಬೇಳೆ
  4. 1.5 ಟೀಸ್ಪೂನ್ ಕೊತ್ತಂಬರಿ ಬೀಜ ಅಥವಾ ಧನಿಯಾ
  5. 1/4 ಟೀಸ್ಪೂನ್ ಜೀರಿಗೆ
  6. 8 - 10 ಕಾಳು ಮೆಂತೆ ಅಥವಾ ಮೆಂತ್ಯ
  7. ಒಂದು ದೊಡ್ಡ ಚಿಟಿಕೆ ಇಂಗು
  8. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 1/4 ಟೀಸ್ಪೂನ್ ಮೆಂತೆ ಅಥವಾ ಮೆಂತ್ಯ
  3. 1/4 ಟೀಸ್ಪೂನ್ ಸಾಸಿವೆ
  4. 5 - 6 ಕರಿಬೇವಿನ ಎಲೆ
  5. ಒಂದು ದೊಡ್ಡ ಚಿಟಿಕೆ ಇಂಗು
  6. 2 ಟೀಸ್ಪೂನ್ ಅಡುಗೆ ಎಣ್ಣೆ

ಉಡುಪಿ - ಮಂಗಳೂರು ಶೈಲಿಯ ಇಡ್ಲಿ ಸಾಂಬಾರ್ ಮಾಡುವ ವಿಧಾನ:

  1. ಈ ಸಾಂಬಾರ್ ನ್ನು ಸಾಂಬಾರ್ ಪುಡಿ ಉಪಯೋಗಿಸಿ ಮಾಡಲಾಗುತ್ತದೆ. ಹಾಗಾಗಿ ನಿಮ್ಮಲ್ಲಿ ಸಾಂಬಾರ್ ಪುಡಿ ಇಲ್ಲದಿದ್ದರೆ, ಮೇಲೆ "ಮಸಾಲೆಗೆ" ಎಂದು ಪಟ್ಟಿ ಮಾಡಿರುವ ಪದಾರ್ಥಗಳನ್ನು ಹುರಿದು ಪುಡಿ ಮಾಡಿಟ್ಟುಕೊಳ್ಳಿ.
  2. ಎಲ್ಲ ತರಕಾರಿಗಳನ್ನು ಹೆಚ್ಚಿಟ್ಟುಕೊಳ್ಳಿ. ಹೆಚ್ಚಿದ ಬದನೆಕಾಯಿಯನ್ನು ನೀರಿನಲ್ಲಿ ಹಾಕಿಡಿ. 
  3. ನಂತರ ಕುಕ್ಕರ್ ನಲ್ಲಿ ತೊಗರಿಬೇಳೆಯನ್ನು ತೊಳೆದು, ಒಂದು ಕಪ್ ನೀರು ಹಾಕಿ ಬೇಯಿಸಿಕೊಳ್ಳಿ. 
  4. ನಂತರ ಬೇಳೆಯಿರುವ ಕುಕ್ಕರ್ ಗೆ, ಮೇಲೆ ಹೆಚ್ಚಿದ ಎಲ್ಲ ತರಕಾರಿಗಳನ್ನು ಹಾಕಿ, ಪುನಃ ಒಂದು ವಿಷಲ್ ಮಾಡಿ ಬೇಯಿಸಿಕೊಳ್ಳಿ. 
  5. ಒತ್ತಡ ಇಳಿದ ಮೇಲೆ ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಹಾಕಿ ಕುದಿಸಿ. 
  6. ಅಗತ್ಯವಿದ್ದಷ್ಟು ನೀರು ಮತ್ತು ಸಾಂಬಾರ್ ಪೌಡರ್ ಹಾಕಿ ಕುದಿಸಿ. 
  7. ಕೆಂಪು ಮೆಣಸು, ಸಾಸಿವೆ, ಮೆಂತೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.

Related Posts Plugin for WordPress, Blogger...