Tomato onion chutney recipe in Kannada | ಟೊಮೇಟೊ ನೀರುಳ್ಳಿ ಚಟ್ನಿ ಮಾಡುವ ವಿಧಾನ
Tomato onion chutney video Kannada
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 3 ಮಧ್ಯಮ ಗಾತ್ರದ ಟೊಮೇಟೊ
- 1 ದೊಡ್ಡ ಈರುಳ್ಳಿ ಅಥವಾ ನೀರುಳ್ಳಿ
- 2 - 3 ಎಸಳು ಬೆಳ್ಳುಳ್ಳಿ
- 1 - 2 ಹಸಿರುಮೆಣಸಿನಕಾಯಿ
- 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- ಒಂದು ದೊಡ್ಡ ಚಿಟಿಕೆ ಅರಿಶಿನ
- ಗೋಲಿಗಾತ್ರದ ಬೆಲ್ಲ
- ಉಪ್ಪು ರುಚಿಗೆ ತಕ್ಕಷ್ಟು
- 2 ಚಮಚ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 1/2 ಟೀಸ್ಪೂನ್ ಉದ್ದಿನಬೇಳೆ
- 4 - 5 ಕರಿಬೇವಿನ ಎಲೆ
- 2 ಟೇಬಲ್ ಚಮಚ ಅಡುಗೆ ಎಣ್ಣೆ
ಟೊಮೇಟೊ ನೀರುಳ್ಳಿ ಚಟ್ನಿ ಮಾಡುವ ವಿಧಾನ:
- ಬೆಳ್ಳುಳ್ಳಿ, ಟೊಮೇಟೊ ಮತ್ತು ಈರುಳ್ಳಿಯನ್ನು ಕತ್ತರಿಸಿ.
- ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಬಿಸಿ ಮಾಡಿ, ಬೆಳ್ಳುಳ್ಳಿ ಹಾಕಿ ಹುರಿಯಿರಿ.
- ನಂತ್ರ ಕತ್ತರಿಸಿದ ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ.
- ಆಮೇಲೆ ಕತ್ತರಿಸಿದ ಟೊಮೇಟೊ ಹಾಕಿ ಹುರಿಯಿರಿ.
- ಉಪ್ಪು ಮತ್ತು ಅರಿಶಿನ ಸೇರಿಸಿ, ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ.
- ಕೊನೆಯಲ್ಲಿ ಹಸಿರುಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ಸ್ಟವ್ ಆಫ್ ಮಾಡಿ.
- ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ಅರೆದಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ ಮೆಣಸಿನಕಾಯಿ, ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನಬೇಳೆ ಮತ್ತು ಕರಿಬೇವು ಹಾಕಿ, ಒಗ್ಗರಣೆಯನ್ನು ಮಾಡಿ.
- ಅರೆದ ಮಿಶ್ರಣವನ್ನು ಹಾಕಿ, ಒಂದು ನಿಮಿಷ ಕುದಿಸಿ. ಬಿಸಿ ಅನ್ನ, ದೋಸೆ ಅಥವಾ ಚಪಾತಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ