Plain Akki rotti recipe in Kannada | ಉಕ್ಕರಿಸಿದ ಅಕ್ಕಿ ರೊಟ್ಟಿ ಮಾಡುವ ವಿಧಾನ
ಉಕ್ಕರಿಸಿದ ಅಕ್ಕಿರೊಟ್ಟಿ ಅಥವಾ ಉಬ್ಬುರೊಟ್ಟಿಯ ವಿಡಿಯೋವನ್ನು ಈ ಕೆಳಗೆ ನೀಡಿದ್ದೇನೆ. ಒಮ್ಮೆ ವೀಕ್ಷಿಸಿದಲ್ಲಿ ರೊಟ್ಟಿ ಮಾಡಲು ಅನುಕೂಲವಾಗಬಹುದು.
Akki rotti video
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಅಕ್ಕಿ ಹಿಟ್ಟು
- 1.5 ಕಪ್ ನೀರು (ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ ಸ್ವಲ್ಪ ಹೆಚ್ಚು ಕಡಿಮೆ)
- 1 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ಉಕ್ಕರಿಸಿದ ಅಕ್ಕಿ ರೊಟ್ಟಿ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ನೀರು, ಉಪ್ಪು ಮತ್ತು ಎಣ್ಣೆ ಹಾಕಿ ಕುದಿಯಲು ಇಡಿ.
- ನೀರು ಕುದಿಯಲು ಪ್ರಾರಂಭಿಸಿದ ಕೂಡಲೇ ಅಕ್ಕಿ ಹಿಟ್ಟನ್ನು ಸೇರಿಸಿ ಒಂದೆರಡು ಸುತ್ತು ಕಲಸಿ. ಸ್ಟವ್ ಆಫ್ ಮಾಡಿ.
- ಸ್ಟವ್ ಆರಿಸಿದ ಮೇಲೆ ಸಟ್ಟುಗದಿಂದ ಚೆನ್ನಾಗಿ ಕಲಸಿ ಮುಚ್ಚಿಡಿ.
- ಬಿಸಿ ಆರಿದ ಮೇಲೆ ಕೈಯಿಂದ ಚೆನ್ನಾಗಿ ನಾದಿ ಮೃದುವಾದ ಹಿಟ್ಟನ್ನು ತಯಾರಿಸಿ.
- ನಿಂಬೆ ಗಾತ್ರದ ಉಂಡೆ ಮಾಡಿಕೊಂಡು, ಅಗತ್ಯವಿದ್ದಷ್ಟು ಹಿಟ್ಟು ಹಾಕಿ ತೆಳ್ಳಗೆ ಲಟ್ಟಿಸಿ.
- ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ರೊಟ್ಟಿಯನ್ನು ತವಾ ಮೇಲೆ ಹಾಕಿ.
- ಒಂದು ಶುಭ್ರವಾದ ಬಟ್ಟೆಯಿಂದ ರೊಟ್ಟಿಯ ಮೇಲ್ಭಾಗಕ್ಕೆ ನೀರನ್ನು ಹಚ್ಚಿ.
- ಸಣ್ಣ ಗುಳ್ಳೆಗಳು ಬಂಡ ಕೂಡಲೇ ತಿರುಗಿಸಿ ಇನ್ನೊಂದು ಬದಿ ಕಾಯಿಸಿ.
- ಅಥವಾ ರೊಟ್ಟಿಯ ಎರಡು ಬದಿಯನ್ನು ಸುಮಾರು ಹತ್ತು ಸೆಕೆಂಡ್ಗಳ ಕಾಲ ಕಾಯಿಸಿ.
- ನಂತರ ರೊಟ್ಟಿಯನ್ನು ನೇರವಾಗಿ ಸ್ಟವ್ ಮೇಲೆ ಹಾಕಿ. ಎರಡು ಬದಿ ಅಲ್ಲಲ್ಲಿ ಕೆಂಪಾಗುವವರೆಗೆ ಕಾಯಿಸಿ.
- ನಿಮ್ಮಿಷ್ಟದ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ