Sihi kumbalakai palya recipe in Kannada | ಸಿಹಿ ಕುಂಬಳಕಾಯಿ ಅಥವಾ ಚೀನಿಕಾಯಿ ಪಲ್ಯ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕೆಜಿ ಸಿಹಿ ಕುಂಬಳಕಾಯಿ ಅಥವಾ ಚೀನಿಕಾಯಿ
- 1/2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಉದ್ದಿನ ಬೇಳೆ
- 1 ಟೀಸ್ಪೂನ್ ಕಡ್ಲೆ ಬೇಳೆ
- 4 - 6 ಟೀಸ್ಪೂನ್ ಅಡುಗೆ ಎಣ್ಣೆ
- 1 ಒಣ ಮೆಣಸಿನಕಾಯಿ (ಬೇಕಾದಲ್ಲಿ)
- 1 ದೊಡ್ಡ ಚಿಟಿಕೆ ಅರಿಶಿನ ಪುಡಿ
- 1 ದೊಡ್ಡ ಚಿಟಿಕೆ ಇಂಗು
- 4 - 5 ಕರಿಬೇವಿನ ಎಲೆ
- ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ
- ಸಣ್ಣ ಗೋಲಿಗಾತ್ರದ ಹುಣಿಸೇಹಣ್ಣು
- ಉಪ್ಪು ರುಚಿಗೆ ತಕ್ಕಷ್ಟು
- 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 1/4 ಕಪ್ ನೀರು
ಅರೆಯಲು ಬೇಕಾಗುವ ಪದಾರ್ಥಗಳು:
- 1/2 ಕಪ್ ತೆಂಗಿನ ತುರಿ
- 2 - 4 ಒಣ ಮೆಣಸಿನ ಕಾಯಿ
- 1/2 ಟೀಸ್ಪೂನ್ ಸಾಸಿವೆ
ಸಿಹಿ ಕುಂಬಳಕಾಯಿ ಪಲ್ಯ ಮಾಡುವ ವಿಧಾನ:
- ಸಿಹಿ ಕುಂಬಳಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು, ಕತ್ತರಿಸಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ.
- ಸಾಸಿವೆ ಸಿಡಿದ ಕೂಡಲೇ ಅರಶಿನ, ಇಂಗು, ಒಣ ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ.
- ಅದಕ್ಕೆ ಕತ್ತರಿಸಿದ ಸಿಹಿ ಕುಂಬಳಕಾಯಿ ಹಾಕಿ.
- ಉಪ್ಪು, ಹುಣಿಸೆರಸ ಮತ್ತು ಬೆಲ್ಲ ಹಾಕಿ ಮಗುಚಿ.
- 1/4 ಕಪ್ ನೀರು ಹಾಕಿ, ಮುಚ್ಚಳ ಮುಚ್ಚಿ ಮೆತ್ತಗಾಗುವವರೆಗೆ ಬೇಯಿಸಿ.
- ಅದೇ ಸಮಯದಲ್ಲಿ ಒಂದು ಮಿಕ್ಸಿ ಜಾರ್ ನಲ್ಲಿ ತೆಂಗಿನ ತುರಿ, 1/4 ಚಮಚ ಸಾಸಿವೆ ಮತ್ತು ಒಣ ಮೆಣಸು ಹಾಕಿ, ನೀರು ಹಾಕದೆ ಪುಡಿ ಮಾಡಿ.
- ಪುಡಿ ಮಾಡಿದ ಮಸಾಲೆಯನ್ನು ಬೇಯುತ್ತಿರುವ ಸಿಹಿ ಕುಂಬಳಕಾಯಿ ಅಥವಾ ಚೀನಿಕಾಯಿಗೆ ಹಾಕಿ.
- ಚೆನ್ನಾಗಿ ಮಗುಚಿ, ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ